ವೇಣೂರು ( ಏ,20):: ಮೌಲ್ಯಧಾರಿತ ಜೀವನ ರೂಪಿಸಿಕೊಳ್ಳಲು ಎನೆಸ್ಸೆಸ್ ಸಹಕಾರಿ. ಶಿಕ್ಷಣದ ಜತೆ ನಮ್ಮ ವ್ಯಕ್ತಿತ್ವವು ಶಕ್ತಿಯಾಗಿ ಹೊರಹೊಮ್ಮಲಿ ಎಂದು ವೇಣೂರು ಗ್ರಾ.ಪಂ. ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಅರುಣ್ ಕ್ರಾಸ್ತ ಹೇಳಿದರು. ಅವರು ಬಜಿರೆ ಸ.ಉ.ಪ್ರಾ. ಶಾಲೆಯ ಸಭಾಂಗಣದಲ್ಲಿ ರವಿವಾರ ಜರಗಿದ ಮೂಡಬಿದಿರೆ ಶ್ರೀ ಧವಲಾ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಧವಲಾ ಕಾಲೇಜಿನ ಪ್ರಾಚಾರ್ಯ ಡಾ| ಸುದರ್ಶನ ಕುಮಾರ್ […]
Month: April 2022
ವೈಷ್ಣವಿ ಗೋಪಾಲ್ ಗೆ 5ನೇ ರ್ಯಾಂಕ್
ಗಂಗೊಳ್ಳಿ ( ಏ.20): ಮಂಗಳೂರು ವಿಶ್ವವಿದ್ಯಾನಿಲಯದ 20020-21 ನೇ ಸಾಲಿನ ಪರೀಕ್ಷೆಯಲ್ಲಿ ಮೂಡಬಿದರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಗಂಗೊಳ್ಳಿಯ ವೈಷ್ಣವಿ ಗೋಪಾಲ ಚಂದನ್ ಬಿಎ ಪದವಿ ಪರೀಕ್ಷೆಯಲ್ಲಿ ಐದನೇ ರ್ಯಾಂಕ್ ಗಳಿಸಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿ ಗುರುತಿಸಿಕೊಂಡಿರುವ ಇವರು ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಸಂಚಲನ ಫೌಂಡೇಶನ್ ಕುಂದಾಪುರ ಇದರ ಉಪಾಧ್ಯಕ್ಷೆ. ಗಂಗೊಳ್ಳಿಯ ಗೋಪಾಲ ಚಂದನ್ ಮತ್ತು ಖ್ಯಾತ ಆಯುರ್ವೇದ ವೈದ್ಯೆ ಡಾ. ವೀಣಾ ಕಾರಂತ್ ದಂಪತಿಯ ಪುತ್ರಿ.
ಡಾ. ಬಿ.ಬಿ. ಹೆಗ್ಡೆ ಕಾಲೇಜು ಕುಂದಾಪುರ: ಕಾವ್ಯ ದೇವಾಡಿಗ ಮಂಗಳೂರು ವಿ.ವಿ ಗೆ ಪ್ರಥಮ ರ್ಯಾಂಕ್
ಕುಂದಾಪುರ ( ಏ.18): ಮಂಗಳೂರು ವಿ.ವಿಯ 2020-21 ನೇ ಸಾಲಿನ ಅಂತಿಮ ಪದವಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ .ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳಾದ ಕಾವ್ಯ ದೇವಾಡಿಗ ಬಿ.ಸಿ.ಎ ಪದವಿಯಲ್ಲಿ ಪ್ರಥಮ ರ್ಯಾಂಕ್ ಹಾಗೂ ಸುಮಧುರ ಶೆಟ್ಟಿ ನಾಲ್ಕನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿ ಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ.ಎಂ.ಸುಕುಮಾರ ಶೆಟ್ಟಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ,ಪ್ರಾಂಶುಪಾಲರು ಹಾಗೂ ಭೋಧಕ &ಭೋಧಕೇತರ ವ್ರಂದ […]
ಸಮುದಾಯ ಕುಂದಾಪುರ: ಏ. 22 ರಂದು ಮಕ್ಕಳಿಗಾಗಿ ಒಂದು ದಿನದ ವಿಜ್ಞಾನ ಮೇಳ
ಕುಂದಾಪುರ (ಏ.19): ಸಮುದಾಯ ಕುಂದಾಪುರ ಇವರ ಆಶ್ರಯದಲ್ಲಿ ದಿ.ಕಾರ್ಕಡ ರಾಮಚಂದ್ರ ಉಡುಪ ನೆನಪಿನ ಕಾರ್ಯಕ್ರಮ “ಚುಕ್ಕಿ ಚಂದ್ರಮ”- ಮಕ್ಕಳಿಗಾಗಿ ಒಂದು ದಿನದ ವಿಜ್ಞಾನ ಮೇಳ ವನ್ನು ಇದೇ ಏ,22 ರಂದು ಪೂರ್ವಾಹ್ನ 9.30 ರಿಂದ ಅಪರಾಹ್ನ 4.30 ತನಕ ಕುಂದಾಪುರದ ಸಂತ ಜೊಸೆಫ್ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದೆ. 6 ರಿಂದ 10ನೆಯ ತರಗತಿಯವರೆಗಿನ ನಲವತ್ತು ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಶ್ರೀಬಾಲಗಂಗಾಧರ ಶೆಟ್ಟಿ , ಉದಯ ಗಾಂವಕಾರ್ […]
ಶ್ವೇತಾ ಪೂಜಾರಿಗೆ ಚಿನ್ನದ ಪದಕ
ಕುಂದಾಪುರ( ಏ.18): ಬೆಂಗಳೂರಿನ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಬಿಸಿನೆಸ್ ಅಂಡ್ ರಿಸರ್ಚ್ ನ ವಿದ್ಯಾರ್ಥಿನಿ ಶ್ವೇತಾ ಪೂಜಾರಿ ಬೆಂಗಳೂರು ವಿಶ್ವವಿದ್ಯಾನಿಲಯದ 2019- 21 ರ ಎಂಬಿಎ ಪರೀಕ್ಷೆಯ ಮಾರ್ಕೆಟಿಂಗ್ ಮತ್ತು ಫೈನಾನ್ಸ್ ವಿಭಾಗದ ಪರೀಕ್ಷೆಯಲ್ಲಿ ಕಾಲೇಜಿಗೆ ಅತ್ಯಧಿಕ ಅಂಕ ಗಳಿಸುವ ಮೂಲಕ ಚಿನ್ನದ ಪದಕವನ್ನು ಗಳಿಸಿರುತ್ತಾರೆ. ಪಠ್ಯಕ್ರಮದ ಹೊರತಾಗಿ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿರುವ ವಿದ್ಯಾರ್ಥಿಗಳಿಗೆ ನೀಡಲಾಗುವ ಐ ಎಸ್ ಬಿ ಆರ್ ಕಾಲೇಜಿನ ಜೆಮ್ಸ್ ಮತ್ತು […]
ಡಾ. ಬಿ.ಬಿ. ಹೆಗ್ಡೆ ಕಾಲೇಜಿಗೆ 2 ರ್ಯಾಂಕ್ & 5 ಚಿನ್ನದ ಪದಕ
ಕುಂದಾಪುರ ( ಏ.18): ಮಂಗಳೂರು ವಿ.ವಿಯ 2020-21 ನೇ ಸಾಲಿನ ಅಂತಿಮ ಪದವಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ,ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ .ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳಾದ ಕಾವ್ಯ ದೇವಾಡಿಗ ಹಾಗೂ ಸುಮಧುರ ಶೆಟ್ಟಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುವುದರ ಜೊತೆಗೆ ಬಿ.ಸಿ.ಎ ಪದವಿಯಲ್ಲಿ ಮೂರನೇ ರ್ಯಾಂಕ್ ಹಾಗೂ ನಾಲ್ಕನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಹಾಗೆಯೇ ಅಂತಿಮ ಪದವಿ ಬಿ.ಕಾಂ ಫೈನಾನ್ಸಿಯಲ್ ಎಕೌಂಟಿಂಗ್ ವಿಷಯದಲ್ಲಿ ವಿದ್ಯಾರ್ಥಿನಿಯರಾದ ಪ್ರತೀಕ್ಷಾ ಪಿ.ಎಸ್ ,ಅಂಕಿತಾ,ಸುಚಿತ್ರಾ ಶೆಟ್ಟಿ ,ಬಿ.ಬಿ ಹಾಜಿರಾ […]
ಮೊಗವೀರ ಯುವ ಸಂಘಟನೆ (ರಿ.)ಉಡುಪಿ ಜಿಲ್ಲೆ, ಕೋಟೇಶ್ವರ ಘಟಕ: ಬಡ ಕುಟುಂಬಕ್ಕೆ ಮನೆ ಹಸ್ತಾಂತರ
ಕೋಟೇಶ್ವರ:( ಏ,17): ಮೊಗವೀರ ಯುವ ಸಂಘಟನೆ (ರಿ.), ಉಡುಪಿ ಜಿಲ್ಲೆ ಇದರ ಕೋಟೇಶ್ವರ ಘಟಕದ ವತಿಯಿಂದ ಮೂವರು ಮಕ್ಕಳನ್ನು ಕಳೆದುಕೊಂಡು , ದುಡಿಮೆಯ ವಯಸ್ಸು ಮೀರಿದ ಅಸಹಾಯಕ ಕುಟುಂಬಕ್ಕೆ ಸಂಘಟನೆಯ ವತಿಯಿಂದ ನಿರ್ಮಿಸಿ ಕೊಟ್ಟ ಮನೆ “ಶ್ರೀ ಕೃಷ್ಣ” ಇದರ ಗ್ರಹ ಪ್ರವೇಶ ಏ.16 ರಂದು ಜರುಗಿತು. ಮೊಗವೀರ ಯುವ ಸಂಘಟನೆಯ ಕೋಟೇಶ್ವರ ಘಟಕದ ಗೌರವಾಧ್ಯಕ್ಷ ಜಗದೀಶ್ ಮಾರ್ಕೋಡು ರವರು ಉದ್ಘಾಟನೆಗೊಳಿಸಿ, ಮನೆಯನ್ನು ಫಲಾನುಭವಿಗೆ ಹಸ್ತಾಂತರಿಸಲಾಯಿತು. ಕೋಟೇಶ್ವರ ಘಟಕದ ಅಧ್ಯಕ್ಷ […]
ನನ್ನದು ವರ್ಕ್ ಫ್ರಮ್ ಹೋಮ್ ಸ್ವಾಮಿ…..
ಒಂದು ಕುರ್ಚಿಒಂದು ಸಿಸ್ಟಮ್…. .ಆಗೊಮ್ಮೆ ಇಗೊಮ್ಮೆ ಹೈ ಸ್ಪೀಡ್ ನಲ್ಲಿ ಕೆಲಸ ಮಾಡೋ ಇಂಟರ್ನೆಟ್ಟು…. ಬೆನ್ನು ನೋವಾಗದಿರಲಿ ಎಂದು ಬೆನ್ನು ಹಿಂದೊಂದು ತಲೆದಿಂಬು…. ಯಾಕಂದ್ರೆ ನನ್ನದು ವರ್ಕ್ ಫ್ರಮ್ ಹೋಮ್ ಸ್ವಾಮಿ..!ಹಿಂದೆ ಆಫೀಸಿನಲ್ಲಿ ಕೇಳಿಸುತ್ತಿದ್ದ ಮಾತಿನ ಸದ್ದಿಲ್ಲ….. ಮೈ ಮರೆತು ನಕ್ಕ ನಗುವಿನ ಅಲೆಯಿಲ್ಲ…… ಸೂರ್ಯೋದಯ ಕಾಣೋಲ್ಲ ,ಸೂರ್ಯಾಸ್ತಮವೂ ಕಂಡಿಲ್ಲ….. ಸಮಯದ ಅರಿವಿಲ್ಲ, ಹಸಿವಿನ ಪರಿವಿಲ್ಲ ………ಯಾಕೆ ಅಂದ್ರೆ ನಮ್ದು ವರ್ಕ್ ಫ್ರಮ್ ಹೋಮ್ ಸ್ವಾಮಿ.. ಸಂಬಂಧಗಳು ಹಳಸಿವೆ,ಭಾವನೆಗಳ ತಿಳಿಯಲು ಸಮಯವಿಲ್ಲ………..ಮನೆಯೊಳಿದ್ದರೂ ಮನೆಯ […]
ಬಿಜೆಪಿ ಕುಂದಾಪುರ ಮಂಡಲ ಎಸ್ಸಿ ಮೋರ್ಚಾವತಿಯಿಂದ ಡಾ.ಬಿ. ಆರ್ .ಅಂಬೇಡ್ಕರ್ ಜಯಂತಿ ಆಚರಣೆ
ಕುಂದಾಪುರ (ಏ.26): ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿಯನ್ನು ಕುಂದಾಪುರ ಮಂಡಲ ಎಸ್ಸಿ ಮೋರ್ಚಾ ವತಿಯಿಂದ ಎಸ್ಸಿ ಮೋರ್ಚಾ ಮಂಡಲ ಅಧ್ಯಕ್ಷ ಮಹೇಶ್ ಕಾಳಾವರ ಅವರ ಅಧ್ಯಕ್ಷತೆಯಲ್ಲಿ ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು . ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷರಾದ ಶಂಕರ ಅಂಕದಕಟ್ಟೆ ಯವರು ಮಾತನಾಡಿ ಹುಟ್ಟಿನಿಂದಲು ಅಸ್ಪ್ರಶ್ಯತೆ ಅಸಮಾನತೆಯಿಂದ ಶೋಷಣೆಗೆ ಒಳಪಟ್ಟು ನಂತರ ದಿನದಲ್ಲಿ ಅದನ್ನು ಹೋಗಲಾಡಿಸಲು ಅಂಬೇಡ್ಕರ್ ಅವರು ಪಟ್ಟ ಶ್ರಮ ಅವೀಸ್ಮರಣೀಯ, ಅವರ ಕಾರಣದಿಂದಾಗಿಯೇ ಇಂದು […]
ಅಂಪಾರು: ನಮ್ಮೂರ ಸಂಭ್ರಮದ ಪೋಸ್ಟರ್ ಅನಾವರಣಗೊಳಿಸಿ ಶುಭ ಹಾರೈಸಿದ ಡಾ.ಡಿ.ವೀರೇಂದ್ರ ಹೆಗ್ಡೆ
ಕುಂದಾಪುರ (ಏ,14):ಇಲ್ಲಿನ ಅಂಪಾರು ಗ್ರಾಮ ಮೂಡುಬಗೆಯಲ್ಲಿ ಮೇ, 11 ರಂದು ಜರುಗಲಿರುವ ಧಾರ್ಮಿಕ -ಸಾಮಾಜಿಕ- ಸಾಂಸ್ಕೃತಿಕ ಸಮಾಗಮ ”ನಮ್ಮೂರ ಸಂಭ್ರಮ’‘ದ ಪೋಸ್ಟರ್ ನ್ನು ಧರ್ಮಸ್ಥಳದ ಧರ್ಮದರ್ಶಿಗಳಾದ ಪೂಜ್ಯ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಧರ್ಮಸ್ಥಳಕ್ಕೆ ಭೇಟಿ ನೀಡಿದ ಅಂಪಾರಿನ ನಮ್ಮೂರ ಸಂಭ್ರಮದ ತಂಡದ ಬಳಿ ಮಾತನಾಡಿ ಡಾ. ಡಿ. ವೀರೇಂದ್ರ ಹೆಗಡೆಯವರು ಕಾರ್ಯಕ್ರಮದ ಉದ್ದೇಶಗಳನ್ನು ರೂಪು ರೇಷೆಗಳನ್ನು ತಿಳಿದುಕೊಂಡು ಕಾರ್ಯಕ್ರಮದ ಯಶಸ್ಸಿಗೆ ಶುಭಕೋರಿದರು.ಕಾರ್ಯಕ್ರಮದ ಬಗ್ಗೆ ವಿವರಣೆ ಪಡೆದು ಸಂತೃಪ್ತರಾದ […]










