Views: 349
ಭಾರತೀಯ ಪ್ರೊ ಕಬ್ಬಡ್ಡಿ ತಂಡದ ಬಾಗಿಲು ಬಡಿದು ಬಂದಿದ್ದ ಸುಷ್ಮಂತ್ ಎನ್ನುವ ಮಲೆನಾಡಿನ ಪ್ರತಿಭೆ ಇನ್ನೇನು ಮುಂಬೈ ತಂಡ ಸೇರಿಯೇ ಬಿಟ್ಟ ಅನ್ನೋವಷ್ಟರಲ್ಲಿ ಆತನ ಜೀವನದಲ್ಲಿ ವಿಧಿ ಬೇರೆಯದೇ ಆಟ ಆಡಿತ್ತು. ಮೂರು ವರ್ಷಗಳ ಹಿಂದೆ ಪ್ರೊ ಕಬಡ್ಡಿ ಉತ್ತುಂಗಕ್ಕೆ ಏರಿದಾಗ ಕಬಡ್ಡಿ ಆಟಗಾರರಿಗೂ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದ್ದು ಸಂತಸದ ಮಾತೇ.ಮಲೆನಾಡಿನ ಹೊಸನಗರದ ಹೆದ್ದಾರಿಪುರದ ತೊರೆಗದ್ದೆಯ ಮಧ್ಯಮ ಕುಟುಂಬದ ಹುಡುಗ ಬಾಲ್ಯದಿಂದಲೂ ಕಬ್ಬಡ್ಡಿ ಅಂಕಣದಲ್ಲಿ ಕಳೆದದ್ದೇ ಹೆಚ್ಚು. […]










