ಉಡುಪಿ (ಮೇ, 31): ಬoಟಕಲ್ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 12 ನೇ ವರ್ಷದವಾರ್ಷಿಕೋತ್ಸವವು ಮೇ 29 ರಂದು ಸಂಸ್ಥೆಯ ಆವರಣದಲ್ಲಿ ಜರಗಿತು. ಕುಕ್ಕೆ ಶ್ರೀ ಸುಬ್ರಮಣ್ಯ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶ್ರೀಗಳು ತಮ್ಮ ಆಶೀರ್ವಚನದಲ್ಲಿ ಅತ್ಯುತ್ತಮ ಇಂಜಿನಿಯರಿoಗ್ ಶಿಕ್ಷಣ ನೀಡುತ್ತಿರುವ ಕಾಲೇಜನ್ನು ಸ್ಥಾಪಿಸಿದ ಸೋದೆ ಶ್ರೀಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣದ ಜೊತೆಗೆ […]
Day: May 31, 2022
ಕೆ.ಪಿ.ಸಿ.ಸಿ ಮೀನುಗಾರರ ಘಟಕದ ರಾಜ್ಯ ಕಾರ್ಯದರ್ಶಿಯಾಗಿ ಯೋಗೇಶ್ ಶಿರೂರು ನೇಮಕ
Views: 335
ಕುಂದಾಪುರ (ಮೇ ,31): ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮೀನುಗಾರರ ಘಟಕದ ರಾಜ್ಯ ಕಾರ್ಯದರ್ಶಿಯಾಗಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುಸ್ಕ್ರತರು, ರಾಷ್ಟ್ರೀಯ ಮೀನುಗಾರರ ಸಂಘದ ರಾಜ್ಯ ಉಪಾದ್ಯಕ್ಷರಾದ ಯೋಗೇಶ್ ಶಿರೂರು ನೇಮಕಗೊಂಡಿದ್ದಾರೆ . ಇವರನ್ನು ಕೆ.ಪಿ.ಸಿ.ಸಿ ಅದ್ಯಕ್ಷರಾದ ಶ್ರೀ ಡಿ.ಕೆ ಶಿವಕುಮಾರ್ ರವರ ಅನುಮೋದನೆಯ ಮೇರೆಗೆ ಕೆ.ಪಿ.ಸಿ.ಸಿ ಮೀನುಗಾರರ ಘಟಕದ ಅದ್ಯಕ್ಷರಾದ ಮಂಜುನಾಥ್ ಬಿ ಯವರು ಆಯ್ಕೆಮಾಡಿದ್ದಾರೆ .










