ಗಂಗೊಳ್ಳಿ (ಜು,15): ರೋಟರಿ ಕ್ಲಬ್ ಗಂಗೊಳ್ಳಿ ವತಿಯಿಂದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ಮೈದಾನದಲ್ಲಿ ಗಿಡಗಳನ್ನು ನೆಡುವ ಮೂಲಕ ವನಮೋತ್ಸವ ಕಾರ್ಯಕ್ರಮವನ್ನು ಇತ್ತೀಚೆಗೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷೆ ಸುಗುಣ ಆರ್ ಕೆ,ಕಾರ್ಯದರ್ಶಿ ಚಂದ್ರಕಲಾ ಟಿ. ಮತ್ತು ರೋಟರಿ ಕ್ಲಬ್ ಸದಸ್ಯರಾದ ಲಕ್ಷ್ಮಿಕಾಂತ್ ಮಡಿವಾಳ, ನಾರಾಯಣ ನಾಯ್ಕ್, ಜನಾರ್ದನ ಪೆರಾಜೆ,ರಾಮನಾಥ ನಾಯಕ್, ಗಿರೀಶ್ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.
Day: July 15, 2022
ಗಂಗೊಳ್ಳಿ : ಸಿ.ಎ ಪರೀಕ್ಷೆಯಲ್ಲಿ ಸ್ವಸ್ತಿಕ್ ಶೆಣೈ ಉತ್ತೀರ್ಣ
ಗಂಗೊಳ್ಳಿ(ಜು,15): ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ಕಳೆದ ಮೇ 2022ರಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಸ್ವಸ್ತಿಕ್ ಶೆಣೈ ಉತ್ತೀರ್ಣರಾಗಿದ್ದಾರೆ. ಇವರು ಕುಂದಾಪುರದ ಶಾನುಭಾಗ್ ಹೆಗಡೆ ಅಂಡ್ ಅಸೋಸಿಯೇಟ್ಸ್ ನಲ್ಲಿ ತರಬೇತಿ ಪಡೆದಿರುತ್ತಾರೆ. ಗಂಗೊಳ್ಳಿಯ ಉದ್ಯಮಿ ಟಿ. ವೆಂಕಟೇಶ್ ದೇವಣ್ಣ ಶೆಣೈ ಮತ್ತು ವಿಜಯಲಕ್ಷ್ಮಿ ಶೆಣೈ ದಂಪತಿಯ ಪುತ್ರನಾಗಿರುವ ಇವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಹಳೆವಿದ್ಯಾರ್ಥಿ.
ಆರ್. ಎನ್. ಶೆಟ್ಟಿ ಪಿ ಯು ಕಾಲೇಜು ಕುಂದಾಪುರ: ಪ್ರಾಂಶುಪಾಲರಿಗೆ ಅಭಿನಂದನೆ
ಕುಂದಾಪುರ(ಜು,15): ಹಲವು ಸಂಘ ಸಂಸ್ಥೆಯಲ್ಲಿ ಸಕ್ರಿಯವಾಗಿ ಸೇವೆಸಲ್ಲಿಸುತಿರುವ ಕುಂದಾಪುರದ ಆರ್. ಎನ್. ಶೆಟ್ಟಿ ಪಿ ಯು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ್ ಶೆಟ್ಟಿಯವರು ಕುಂದಾಪುರದ ಲಯನ್ಸ್ ಕ್ಲಬ್ ಇದರ ಅಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ . ಈ ಹಿನ್ನೆಲೆಯಲ್ಲಿ ಕಾಲೇಜಿನ ಭೋದಕ -ಭೋಧಕೇತರ ಸಿಬ್ಬಂದಿಗಳು ಶುಭಕೋರಿದರು .
ಶಿಕ್ಷ ಪ್ರಭ ಅಕಾಡೆಮಿ ಕುಂದಾಪುರ :ಸಿಎ ಪರೀಕ್ಷೆ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಕುಂದಾಪುರ(ಜು,15): ಸಿಎ /ಸಿಎಸ್ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿಯನ್ನು ನೀಡುತ್ತಾ ರಾಷ್ಟ್ರೀಯ ಮಟ್ಟದ ಅನೇಕ ರ್ಯಾಂಕ್ ಗಳನ್ನು ಪಡೆದ ಸಂಸ್ಥೆ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ (ಸ್ಪೇಸ್) ಕುಂದಾಪುರ. ಸಿಎ ಅಂತಿಮ ಹಂತದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಸಂಸ್ಥೆಯ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಜುಲೈ15ರಂದು ಕುಂದೇಶ್ವರ ರಸ್ತೆಯ ಸಂಸ್ಥೆಯ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿತು. ಇನ್ಸ್ಟಿಟ್ಯೂಟ್ ಆಫ್ ಚಾರ್ಟ್ ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಮೇ 2022 ರಲ್ಲಿ ನಡೆಸಿದ […]
ಪರಸ್ಪರ ಸಹಕಾರದಿಂದ ಸೇವೆ: ಲ. ಪ್ರಕಾಶ ಟಿ. ಸೋನ್ಸ್
ಕುಂದಾಪುರ(ಜು,15):ಜಗತ್ತಿನ ಅತಿ ದೊಡ್ಡ ಸೇವಾ ಸಂಘಟನೆಯಾದ ಲಯನ್ಸ್ ಸಂಸ್ಥೆಯ ಮುಖ್ಯ ಉದ್ದೇಶ ಅಗತ್ಯವಿರುವವರಿಗೆ ಬೇಕಾದ ಸೇವೆಯನ್ನು ನೀಡುವುದು. ಕುಂದಾಪುರ ಲಯನ್ಸ್ ಕ್ಲಬ್ ಕಳೆದ50 ವರ್ಷಗಳಿಂದ ವಿವಿಧ ಸೇವೆಗಳನ್ನು ಸೇವೆಗಳನ್ನು ನೀಡುತ್ತಾ ನೊಂದವರ ಕಣ್ಣೀರನ್ನು ಒರೆಸುವ ಕಾರ್ಯ ಮಾಡುತ್ತಾ ಬಂದಿದೆ. ಇನ್ನು ಮುಂದೆಯು ಕೂಡಾ ಒಳ್ಳೆಯ ಸೇವೆ ಜನತೆಗೆ ಈ ಕ್ಲಬಿನಿಂದ ಸಿಗುವಂತಾಗಲಿ ಎಂದು ಲಯನ್ಸ್ 317ಸಿ ಜಿಲ್ಲೆಯ ಮಾಜಿ ಗವರ್ನರ್ ಲ. ಪ್ರಕಾಶ ಟಿ. ಸೋನ್ಸ್ ಲಯನ್ ಕ್ಲಬ್ ಕುಂದಾಪುರದ […]










