ಕುoದಾಪುರ ಜು,21) : ಕಾಲೇಜಿಗೆ ಸ್ಥಳದಾನ ಮಾಡಿದ ಸಂಸ್ಥೆಯ ಮಹಾಪೋಷಕರಾದ ಡಾ| ಬಿ. ಬಿ. ಹೆಗ್ಡೆಯವರ ಧರ್ಮಪತ್ನಿ ವಿಶಾಲಾಕ್ಷಿ ಬಿ. ಹೆಗ್ಡೆಯವರ ಸಂಸ್ಮರಣಾ ಕಾರ್ಯಕ್ರಮವನ್ನು ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಪ್ರೊ| ಕೊತ್ತಾಡಿ ಉಮೇಶ್ ಶೆಟ್ಟಿಯವರು ದೀಪ ಪ್ರಜ್ವಲಿಸಿ-ಪುಷ್ಪಾರ್ಚನೆ ಗೈದು, ಸಂಸ್ಮರಣಾ ನುಡಿಗಳನ್ನಾಡಿದರು. ವಿಭಾಗದ ಮುಖ್ಯಸ್ಥರು ಹಾಗೂ ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿದರು. ವಿಭಾಗದ ಉಪನ್ಯಾಸಕಿ ರೇಷ್ಮಾ ಶೆಟ್ಟಿ ಸ್ವಾಗತಿಸಿ, ಪ್ರವೀಣಾ […]
Day: July 21, 2022
ಎಕ್ಸ್ಲೆಂಟ್ ಪಿಯು ಕಾಲೇಜು, ಕುಂದಾಪುರ ಸಿಎ,ಸಿಎಸ್ ಫೌಂಡೇಶನ್ ತರಗತಿಗಳ ಉದ್ಘಾಟನೆ:
ಕುಂದಾಪುರ (ಜು,21): ಕಠಿಣ ಪರಿಶ್ರಮ, ನಿರ್ದಿಷ್ಟ ಗುರಿಯೊಂದಿಗೆ ಅಭ್ಯಸಿಸುವ ಯಾವುದೇ ವಿದ್ಯಾರ್ಥಿಯು ಕೂಡ ಸಿಎ/ಸಿಎಸ್ ಪರೀಕ್ಷೆಯನ್ನು ನಿರಾಂತಕವಾಗಿ ಪೂರ್ಣಗೊಳಿಸಬಹುದು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಇಂಡಿಯನ್ ರೆಡ್ಕ್ರಾಸ್ ಸೊಸೈಟಿಯ ಅಧ್ಯಕ್ಷ, ಚಾರ್ಟೆರೆಡ್ ಅಕೌಟೆಂಟ್ ಶಾಂತರಾಮ್ ಶೆಟ್ಟಿ ಹೇಳಿದರು . ಅವರು ಕುಂದಾಪುರದ ಎಕ್ಸ್ಲೆಂಟ್ ಪಿಯು ಕಾಲೇಜಿನಲ್ಲಿ ಜು16ರಂದು ನಡೆದ ಸಿಎ/ಸಿಎಸ್ ಫೌಂಡೇಶನ್ ತರಗತಿಯನ್ನು ಉದ್ಘಾಟನೆಗೊಳಿಸಿ ಮಾತನಾಡಿದರು.ಪಿಯುಸಿಯಲ್ಲಿ ಒಬ್ಬ ಸಾಮಾನ್ಯ ವಿದ್ಯಾರ್ಥಿಯಾದ ನಾನು ಗ್ರಾಮೀಣ ಭಾಗದಲ್ಲಿ ವಿದ್ಯಾಭ್ಯಾಸ ಪೂರೈಸಿ ಈ ಹಂತಕ್ಕೆ […]
ತಾಲೂಕು ಮಟ್ಟದ ಚೆಸ್ ಪಂದ್ಯಾಟ: ಎಕ್ಸಲೆಂಟ್ ಪ್ರೌಢಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಕುಂದಾಪುರ(ಜು,21): ಉಡುಪಿ ಜಿಲ್ಲಾ ಪಂಚಾಯತ್ ಆಯೋಜಿಸಿದ ತಾಲ್ಲೂಕು ಮಟ್ಟದ ಚೆಸ್ ಪಂದ್ಯಾಟವು ಸಾರ್ವಜನಿಕ ಶಿಕ್ಷಣ ಇಲಾಖೆ ಕುಂದಾಪುರ ತಾಲ್ಲೂಕು ಮತ್ತು ಕುಂದಾಪುರ ಎಜುಕೇಶನ್ ಸೊಸೈಟಿ ಪವರ್ತಿತ ಹೆಚ್ ಎಂ ಎಂ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ ಕೆ ಆರ್ ಆಚಾರ್ಯ ಸ್ಮಾರಕ ಪ್ರೌಢಶಾಲೆ ಕುಂದಾಪುರ ಇವರ ಆಶ್ರಯದಲ್ಲಿ ನಡೆದ ಕುಂದಾಪುರ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ಚೆಸ್ ಪಂದ್ಯಾಟ ಇತ್ತೀಚಿಗೆ ನಡೆಯಿತು. ಎಕ್ಸಲೆಂಟ್ ಪಿಯು […]
ಎಚ್ ಎಮ್ ಎಮ್ ಮತ್ತು ವಿ ಕೆ ಆರ್ ಆಂಗ್ಲ ಮಾಧ್ಯಮ ಶಾಲೆ: ಶಿಕ್ಷಕ ಸುರೇಶ್ ಮರಕಾಲರಿಂದ ವಿಶೇಷ ಉಪನ್ಯಾಸ
ಕುಂದಾಪುರ( ಜು,21 ): ಎರಡೂ ಕೈಗಳಿಲ್ಲದ ಜೆಸಿಕಾ ಕಾಕ್ ತನ್ನ ಪದವಿ ಮುಗಿಸಿ, ಕಾಲಿನಿಂದ ಕಂಪ್ಯೂಟರ್ ಆಪರೇಟ್ ಮಾಡ್ತಾಳೆ, ಕರಾಟೆ ಬ್ಲ್ಯಾಕ್ ಬೆಲ್ಟ್, ಸ್ಕೇಟಿಂಗ್, ಕಾರ್ ಡ್ರೈವಿಂಗ್ ಮಾಡ್ತಾಳೆ, ಪೈಲೆಟ್ ಆಗ್ತಾಳೆ ಅಂದಮೇಲೆ ಸಾಧಿಸುವ ಕಿಚ್ಚೊಂದಿದ್ದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಸುರೇಶ್ ಮರಕಾಲ ಹೇಳಿದರು. ಕುಂದಾಪುರ ಎಜುಕೇಶನ್ ಸೊಸೈಟಿ (ರಿ),ಪ್ರವರ್ತಿತ , ಎಚ್ ಎಮ್ ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ […]
ರೋಟರಿ ಕ್ಲಬ್ ಗಂಗೊಳ್ಳಿ : ಪದಪ್ರದಾನ ಸಮಾರಂಭ
ಗಂಗೊಳ್ಳಿ(ಜು,21): ನಾವು ಮಾಡುವ ಸೇವೆ ಅರ್ಹ ವ್ಯಕ್ತಿಗಳಿಗೆ ತಲುಪಬೇಕು. ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡಿದ ಸೇವೆಯಿಂದ ಜೀವನ ಸಾರ್ಥಕ ಗೊಳ್ಳುತ್ತದೆ ಎಂದು ರೋಟರಿ ಕ್ಲಬ್ ನ ವಲಯ ಒಂದರ ಅಸಿಸ್ಟೆಂಟ್ ಗವರ್ನರ್ ರೋ. ಡಾ. ಉಮೇಶ್ ಪುತ್ರನ್ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿ ಸರಸ್ವತಿ ವಿದ್ಯಾಲಯದ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ನಡೆದ ರೋಟರಿ ಕ್ಲಬ್ ಗಂಗೊಳ್ಳಿಯ ನೂತನ ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭದಲ್ಲಿ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಸಮಾಜ ಸೇವಾ […]