ಕಾರ್ಕಳ (ಸೆ,17): ಇಲ್ಲಿನ ಕ್ರಿಯೇಟಿವ್ ಪಿ ಯು ಕಾಲೇಜು ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಜಿ.ಎಸ್ .ಟಿ (ಸರಕು ಮತ್ತು ಸೇವಾ ತೆರಿಗೆ) ಕುರಿತಾಗಿ ಮಾಹಿತಿ ಕಾರ್ಯಗಾರವನ್ನು ಸೆ.17ರಂದು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಖ್ಯಾತ ತೆರಿಗೆ ಸಲಹೆಗಾರರಾದ ಶ್ರೀ ವಿನಯ್ ಹೆಗಡೆಯವರು ಜಿ.ಎಸ್.ಟಿ ಕುರಿತು ಮಾಹಿತಿಯನ್ನು ನೀಡಿದರು. ಜಿ.ಎಸ್.ಟಿ ಎನ್ನುವುದು ʼಒಂದು ದೇಶ-ಒಂದು ತೆರಿಗೆʼ ಪರಿಕಲ್ಪನೆಯಲ್ಲಿರುವ ಪರೋಕ್ಷ ತೆರಿಗೆಯಾಗಿದ್ದು, ಈ ತೆರಿಗೆಯು ಪ್ರತಿ ಮೌಲ್ಯದ ಸೇರ್ಪಡೆಗೆ ವಿಧಿಸುವ ತೆರಿಗೆಯಾಗಿರುತ್ತದೆ. ಇಂದು […]
Day: September 17, 2022
ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ: 75ನೇ ತಿಂಗಳ ಕಾರ್ಯಕ್ರಮ- ಕಲಾವಿದ ನಾರಾಯಣ ಬಿಲ್ಲವರಿಗೆ ನುಡಿ ನಮನ
ತಲ್ಲೂರು(ಸೆ,17); ಅಂತರಾಷ್ಟ್ರೀಯ ಖ್ಯಾತಿಯಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ 75ನೇ ತಿಂಗಳ ಕಾರ್ಯಕ್ರಮ ಇತ್ತೀಚೆಗೆ ಉಪ್ಪಿನ ಕುದ್ರುವಿನ ಗೊಂಬೆಮನೆಯಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಯಕ್ಷಗಾನ ಗೊಂಬೆಯಾಟದ ಆರ್ಥಧಾರಿ ನಾರಾಯಣ ಬಿಲ್ಲವರಿಗೆ ನುಡಿ ನಮನ ಸಲ್ಲಿಸಲಾಯಿತು. ಬಡಗು ತಿಟ್ಟಿನ ಖ್ಯಾತ ಭಾಗವತರಾದ ಶ್ರೀ ಉಮೇಶ್ ಸುವರ್ಣ ರವರು ಯಕ್ಷಗಾನ ಶೈಲಿಯಲ್ಲಿ ಪ್ರಾರ್ಥನೆಗೈದರು. ಶ್ರೀಮತಿ ರಶ್ಮಿ ರಾಜ್ ಮತ್ತು ತಂಡದವರು ವಿಷ್ಣು ಸಹಸ್ರನಾಮ ಪಠಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಾಗೆಯೇ ಕಾರ್ಯಕ್ರಮದಲ್ಲಿ ಜನಾರ್ದನ ಹಂದೆಯವರನ್ನು ಅಕಾಡೆಮಿಯ ವತಿಯಿಂದ […]
ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು ಹೆಮ್ಮಾಡಿ: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಉತ್ತಮ ಸಾಧನೆ
ಹೆಮ್ಮಾಡಿ(ಸೆ,17): ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೈಂದೂರು ಇವರು ಆಯೋಜಿಸಿದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು ಹೆಮ್ಮಾಡಿಯ ವಿದ್ಯಾರ್ಥಿಗಳು ಭಾಗವಹಿಸಿ ವ್ಯಯಕ್ತಿಕ ಸ್ಪರ್ಧಾ ವಿಭಾಗದಲ್ಲಿ ಪ್ರಮುಖವಾಗಿ ಅರೆಬಿಕ್ ಧಾರ್ಮಿಕ ಪಠಣ, ಚಿತ್ರಕಲೆ ಮತ್ತು ಬಣ್ಣ ಹಚ್ಚುವಿಕೆ,ಕನ್ನಡ ಮತ್ತು ಹಿಂದಿ ಭಾಷಣ, ರಂಗೋಲಿ, ಭಾವಗೀತೆ, ಜನಪದ ಗೀತೆ,ಭರತನಾಟ್ಯ, ಚರ್ಚೆ,ಗಝಲ್ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಸಂಸ್ಕ್ರತ ಧಾರ್ಮಿಕ ಪಠಣ ಹಾಗೂ ಮಿಮಿಕ್ರಿಯಲ್ಲಿ […]
ಸಮುದಾಯ ಕುಂದಾಪುರ: ಸೆ.18 ರಂದು ಬಹುಮಾನ ವಿತರಣಾ ಕಾರ್ಯಕ್ರಮ
ಕುಂದಾಪುರ (ಸೆ,17): ಸಮುದಾಯ ಕುಂದಾಪುರ ಇವರ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮಕ್ಕಳಿಗಾಗಿ ಹಮ್ಮಿಕೊಂಡ ಸ್ವಾತಂತ್ರ್ಯದ ಅಮೃತ ಮಹೋತ್ಸವ ವಿಡಿಯೋ ಭಾಷಣ ಸ್ಪರ್ಧೆಯಲ್ಲಿನ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಇದೇ ಸೆ.18 ರಂದು ಕುಂದಾಪುರದ ಶಾಸ್ತ್ರಿ ಸರ್ಕಲ್ ಹತ್ತಿರದ ಝಾನ್ಸಿರಾಣಿ ಲಕ್ಷ್ಮಿಬಾಯಿ ರಸ್ತೆಯ ಬಳಿ ಇರುವ ಜೇಸಿ ಭವನ ದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಹಾಗೆಯೇ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪುಸ್ತಕ ಬಹುಮಾನ ಮತ್ತು ಸರ್ಟಿಫಿಕೇಟ್ ವಿತರಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.










