ಹೆಮ್ಮಾಡಿ(ಅ,8): ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ ಶ್ರೀ ಗಣೇಶ ಮೊಗವೀರರವರನ್ನು ಶ್ರೀ ವಿ.ವಿ.ವಿ ಮಂಡಳಿ(ರಿ.),ಗೆ ಪದನಿಮಿತ್ತ ನಾಮ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ. ಶ್ರೀ ವಿ.ವಿ.ವಿ.ಮಂಡಳಿ(ರಿ) ಗೆ ಹೆಮ್ಮಾಡಿ ಇದರ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಮಂಡಳಿ ತಿಳಿಸಿದೆ. ಶ್ರೀ ಗಣೇಶ ಮೊಗವೀರರವರು ಸಮರ್ಪಣಾ ಎಜುಕೇಶನ್ ಟ್ರಸ್ಟ್(ರಿ) ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Month: October 2022
ಮೈಸೂರು ದಸರಾ ಪ್ರಯುಕ್ತ ಬಾಡಿ ಬಿಲ್ಡಿಂಗ್ : ಸೋಮಶೇಖರ್ ಖಾರ್ವಿ ದ್ವೀತಿಯ
ಕುಂದಾಪುರ(ಅ,8): ಹಲವಾರು ರಾಜ್ಯ ಮತ್ತು ಅಂತರ್ ರಾಜ್ಯ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಪಡೆದಿರುವ ಕುಂದಾಪುರ ತಾಲೂಕಿನ ಕಂಚುಗೋಡು ನಿವಾಸಿ ಸೋಮಶೇಖರ್ ಖಾರ್ವಿಯವರು ಇತ್ತೀಚೆಗೆ ಮೈಸೂರಿನಲ್ಲಿ ದಸರಾ ಪ್ರಯುಕ್ತ ನಡೆದ ಬಾಡಿ ಬಿಲ್ಡಿಂಗ್ 65 ಕೆ.ಜಿ ವಿಭಾಗದಲ್ಲಿ ದ್ವೀತಿಯ ಸ್ಥಾನ ಪಡೆದಿರುತ್ತಾರೆ. ಸೋಮ ಶೇಖರ್ ಖಾರ್ವಿಯವರ ಈ ಸಾಧನೆಗೆ ಗ್ರಾಮಸ್ಥರು ಮತ್ತು ಅಭಿಮಾನಿಗಳು ಅಭಿನಂದನೆಕೋರಿದ್ದಾರೆ.
ಸರಸ್ವತಿ ವಿದ್ಯಾಲಯ ಗಂಗೊಳ್ಳಿ: ಎನ್ಎಸ್ಎಸ್ ಶಿಬಿರದ ಸಮಾರೋಪ ಸಮಾರಂಭ
ಗಂಗೊಳ್ಳಿ(ಅ,8): ಎನ್ಎಸ್ಎಸ್ ಶಿಬಿರದಲ್ಲಿ ಕಲಿತ ಮೌಲಿಕವಾದ ಅಂಶಗಳನ್ನು ತಮ್ಮ ಜೀವನದಲ್ಲಿ ವಿದ್ಯಾರ್ಥಿಗಳು ಅಳವಡಿಸಿಕೊಳ್ಳುವುದರ ಮೂಲಕ ವ್ಯಕ್ತಿತ್ವವನ್ನು ಸದೃಢಗೊಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಡಾ. ಬಿ ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪ ಪ್ರಾಂಶುಪಾಲರು ,ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಶ್ರೀ ಚೇತನ್ ಶೆಟ್ಟಿ ಕೋವಾಡಿ ಅವರು ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ […]
ಅಕ್ಷಯ ಹೆಗ್ಡೆ ಮೊಳಹಳ್ಳಿಯವರಿಗೆ ಸನ್ಮಾನ
ಹೆಬ್ರಿ (ಅ,8): ಇತ್ತೀಚೆಗೆ ಹೆಬ್ರಿ ಸಮೀಪದ ಹೊರ್ಲಾಳಿಯಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರೂಪಕ,ಮಲ್ಟಿಪಲ್ ಯಂಗ್ ಲಯನ್ ಆ್ಯಂಡ್ ಸ್ಟಾರ್ ಲಯನ್ ಆವಾರ್ಡ್ ,ಇಂಟರ್ನ್ಯಾಷನಲ್ ಲಯನ್ಸ್ ಲೀಡರ್ ಶಿಪ್ ಅವಾರ್ಡ್ , ರಾಷ್ಟ್ರೀಯ ರತ್ನ ಸೇರಿದಂತೆ ಹಲವು ಪ್ರಶಸ್ತಿಗೆ ಭಾಜನರಾದ ಉಪನ್ಯಾಸಕ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ, ಯುವ ವಾಗ್ಮಿ ,ಸಂಘಟಕ,ಹತ್ತು ಹಲವು ಸಂಘಟನೆಗಳ ಅಧ್ಯಕ್ಷರಾಗಿ, ತಾಲೂಕು ,ಜಿಲ್ಲಾಧ್ಯಕ್ಷರಾಗಿ, ರಾಜ್ಯ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿರುವ, ಕಲೆ, ಕ್ರೀಡೆ, ಸಾಮಾಜಿಕ ,ಧಾರ್ಮಿಕ ಮತ್ತು […]
ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ
ಗಂಗೊಳ್ಳಿ (ಅ,8): ಬಿಲ್ಲವರ ಹಿತರಕ್ಷಣಾ ವೇದಿಕೆ ಗಂಗೊಳ್ಳಿ ಇವರ ವತಿಯಿಂದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ನನ್ನ ಜೀವನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರಭಾವ ಈ ವಿಷಯದ ಕುರಿತಂತೆ ವಿದ್ಯಾರ್ಥಿಗಳು A4 ಅಳತೆಯ ಕಾಗದದಲ್ಲಿ ಮೂರು ಪುಟಗಳಿಗೆ ಮೀರದಂತೆ ಕಾಗದದ ಒಂದೇ ಮಗ್ಗುಲಿನಲ್ಲಿ ಕನ್ನಡದ ಹಸ್ತಾಕ್ಷರದಲ್ಲಿ ಬರೆದು ಕಳುಹಿಸಬೇಕು. ಪ್ರಥಮ ದ್ವಿತೀಯ ಮತ್ತು ತೃತೀಯ ಬಹುಮಾನಗಳಿದ್ದು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಡಿಜಿಟಲ್ […]
ಕುಸ್ತಿ ಪಂದ್ಯಾಟದಲ್ಲಿ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ
ಹೆಮ್ಮಾಡಿ(ಅ.9): ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಭಂಡಾರ್ಕಾರ್ಸ್ ಪದವಿಪೂರ್ವ ಕಾಲೇಜು ಕುಂದಾಪುರ ಇವರಸಂಯುಕ್ತ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು 61 ಕೆ.ಜಿ ವಿಭಾಗದಲ್ಲಿ ನಿಶ್ಚಲ್ ಫಿಲಿಪ್ ಬೆಳ್ಳಿ ಪದಕ, 65 ಕೆ.ಜಿ ವಿಭಾಗದಲ್ಲಿ ಕ್ರಮವಾಗಿ ಅನುಲ್ ಚಿನ್ನದ ಪದಕ ಹಾಗೂ ಡೆನ್ಜಿಲ್ ಡಯಸ್ ಬೆಳ್ಳಿಯ ಪದಕ, 70ಕೆ.ಜಿ ಮೇಲ್ಪಟ್ಟ ವಿಭಾಗದಲ್ಲಿ ಸೂರಜ್ ಡಯಾಸ್ ಕಂಚಿನ ಪದಕ, 79 […]
ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಗಾಂಧಿ-ಶಾಸ್ತ್ರಿ ಜಯಂತಿ
ಕಾರ್ಕಳ(ಅ.07): ಇಲ್ಲಿನ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಮಹಾತ್ಮ ಗಾಂಧೀಜಿ ಮತ್ತು ದೇಶದ ದ್ವಿತೀಯ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಅ.02 ರಂದು ಆಚರಿಸಲಾಯಿತು. ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ಮಾತನಾಡಿ ಇಂದು ಗಾಂಧೀಜಿಯವರ ಸಾಮರಸ್ಯ ಚಿಂತನೆ ಜೀವನದ ಆದರ್ಶ ನಮಗೆ ದಾರಿದೀಪವಾಗಬೇಕಿದೆ ಮತ್ತು ದೇಶ ಕಂಡ ಅಪ್ರತಿಮ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ “ಜೈ ಜವಾನ್ ಜೈ ಕಿಸಾನ್” ಘೋಷಣೆ ಹಾಗೂ ಪ್ರಬುದ್ಧತೆಯನ್ನು ಯುವಜನತೆ ಅರಿತು […]
ಸ್ವಾತಂತ್ರ್ಯ ಹೋರಾಟಗಾರ ಹಂದಾಡಿ ಸಂಜೀವ ಶೆಟ್ಟಿ ಬೆಣ್ಣೆಕುದ್ರು ಮನೆಗೆ ನಾಮಫಲಕ ಅನಾವರಣ ಕಾರ್ಯಕ್ರಮ
ಬ್ರಹ್ಮಾವರ (ಅ,7): ಬ್ರಹ್ಮಾವರ ತಾಲೂಕು ಹಂದಾಡಿ ಸ್ವಾತಂತ್ರ್ಯ ಹೋರಾಟಗಾರರಾಗಿರುವ ಸಂಜೀವ ಶೆಟ್ಟಿ ಬೆಣ್ಣೆಕುದ್ರು ಇವರ ಮನೆಗೆ ನಾಮ ಫಲಕ ಅಳವಡಿಸುವ ಕಾರ್ಯಕ್ರಮ ಸೆ.25 ರಂದು ನಡೆಯಿತು . ” ಸ್ವರಾಜ್ಯ75 “ಸಂಘಟನೆಯ ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮಫಲಕ ಅಳವಡಿಸುವ ಅಭಿಯಾನದ 17ನೇ ಮನೆಯ ನಾಮಫಲಕ ಅನಾವರಣ ಕಾಯ೯ಕ್ರಮವನ್ನು ಸ.ಪ್ರ.ದ.ಕಾಲೇಜು ಕಾಲೇಜು ಶಂಕರನಾರಾಯಣ ನಿವೃತ್ತ ಪ್ರಾಂಶುಪಾಲರಾಗಿರುವ ಡಾ.ಉದಯ್ ಕುಮಾರ್ ಶೆಟ್ಟಿರವರು ನೆರವೇರಿಸಿದರು. ರಾಷ್ಟ್ರ ಧ್ವಜಕ್ಕೆ ಪುಷ್ಪಾರ್ಚನೆಯ ಮೂಲಕ ಶ್ರೀ ಚಂದ್ರಶೇಖರ […]
ಎಚ್. ಎಮ್. ಎಮ್ ಮತ್ತು ವಿ. ಕೆ. ಆರ್ ಶಾಲೆಯಲ್ಲಿ ಗಾಂಧಿ & ಶಾಸ್ತ್ರಿಜಿ ಜಯಂತಿ
ಕುಂದಾಪುರ (ಅ,7) : ಕುಂದಾಪುರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಆಚರ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು. ಸಂಸ್ಥೆಯ ಉಪ ಪ್ರಾಂಶುಪಾಲೆ ಹಾಗೂ ಹೈಸ್ಕೂಲ್ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಶುಭಾ ಕೆ. ಎನ್ ಮತ್ತು ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಜಗದೀಶ್ ಆಚಾರ್ ಸಾಸ್ತಾನ, ಮಹಾತ್ಮರ ಭಾವಚಿತ್ರಕ್ಕೆ […]
ಲ. ಅಶೋಕ್ ಶೆಟ್ಟಿ ಸಂಸಾಡಿಯವರಿಗೆ ಪಿತ್ರ ವಿಯೋಗ
ಕುಂದಾಪುರ(ಅ,6): ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ನ ಸ್ಥಾಪಕಾಧ್ಯಕ್ಷರು, ಕುಂದಾಪುರದ ಪ್ರತಿಷ್ಠಿತ ಶುಭಲಕ್ಷ್ಮಿ ಹೋಟೆಲ್ಸ್ ಪ್ರೈವೇಟ್ ಲಿಮಿಟೆಡ್ ನ ಆಡಳಿತ ಪಾಲುದಾರರಾದ ಲ. ಅಶೋಕ್ ಶೆಟ್ಟಿ ಸಂಸಾಡಿ ಅವರ ತಂದೆ ಬಡಾಕೆರೆ ಶಂಕರ ಶೆಟ್ಟಿ (88 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಅ.6 ರಂದು ನಿಧನರಾಗಿದ್ದಾರೆ. ಮೃತರು ಧರ್ಮಪತ್ನಿ ಸೇರಿದಂತೆ ಐದು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.