ಹೆಬ್ರಿ (ಅ,8): ಇತ್ತೀಚೆಗೆ ಹೆಬ್ರಿ ಸಮೀಪದ ಹೊರ್ಲಾಳಿಯಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರೂಪಕ,ಮಲ್ಟಿಪಲ್ ಯಂಗ್ ಲಯನ್ ಆ್ಯಂಡ್ ಸ್ಟಾರ್ ಲಯನ್ ಆವಾರ್ಡ್ ,ಇಂಟರ್ನ್ಯಾಷನಲ್ ಲಯನ್ಸ್ ಲೀಡರ್ ಶಿಪ್ ಅವಾರ್ಡ್ , ರಾಷ್ಟ್ರೀಯ ರತ್ನ ಸೇರಿದಂತೆ ಹಲವು ಪ್ರಶಸ್ತಿಗೆ ಭಾಜನರಾದ ಉಪನ್ಯಾಸಕ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ, ಯುವ ವಾಗ್ಮಿ ,ಸಂಘಟಕ,ಹತ್ತು ಹಲವು ಸಂಘಟನೆಗಳ ಅಧ್ಯಕ್ಷರಾಗಿ, ತಾಲೂಕು ,ಜಿಲ್ಲಾಧ್ಯಕ್ಷರಾಗಿ, ರಾಜ್ಯ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿರುವ, ಕಲೆ, ಕ್ರೀಡೆ, ಸಾಮಾಜಿಕ ,ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರ ದಲ್ಲಿ ತೊಡಗಿಸಿಕೊಂಡರುವ ಬಹುಮುಖ ಪ್ರತಿಭೆಯ ಅಕ್ಷಯ ಹೆಗ್ಡೆ ಮೊಳಹಳ್ಳಿಯವರನ್ನು ದ.ಕ.ಹಾಲು. ಒಕ್ಕೂಟ ನಿ.ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಕೆ.ಪಿ.ಸುಚರಿತ ಶೆಟ್ಟಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕೊಡವೂರು ರವಿರಾಜ ಹೆಗ್ಡೆ , ಶ್ರೀಮತಿ ಸ್ಮಿತಾ ಆರ್ ಶೆಟ್ಟಿ , ಮುಡಾರು ಸುಧಾಕರ ಶೆಟ್ಟಿ ,ಪ್ರಕಾಶ್ಚಂದ್ರ ಶೆಟ್ಟಿ ,ಬೋಳ ಸದಾಶಿವ ಶೆಟ್ಟಿ ,ಶ್ರೀ ವಿಶ್ವನಾಥ ಅಡಿಗ ಹೊರ್ಲಾಳಿ ಮುಂತಾದವರು ಉಪಸ್ಥಿತರಿದ್ದರು.