ಕೋಟೇಶ್ವರ (ನ,15): ಇಲ್ಲಿನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಕ್ರೀಡಾಕೂಟದ ಜೊತೆಗೆ ಮಕ್ಕಳ ದಿನಾಚರಣೆಯನ್ನು ನ.14 ರಂದು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕೋಟೇಶ್ವರದ ಹೆಸರಾಂತ ವೈದ್ಯರಾದ ಡಾ. ಶ್ರೀಪಾದ್ ಹೆಗ್ಡೆ ಯವರು ಶಾಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರ ವಿತರಿಸಿದರು. ನಿವೃತ್ತ ಮೆಸ್ಕಾಂ ಅಧಿಕಾರಿ ಬಾಬಣ್ಣ ಪೂಜಾರಿ ಕಾರ್ಯಕ್ರಮ ಉದ್ದೇಶಿಸಿ ಮಾತಾನಾಡಿ ಮಕ್ಕಳು ಉತ್ತಮ ವಿದ್ಯಾಭ್ಯಾಸದ ಜೊತೆಗೆ ಉತ್ತಮ ಸಂಸ್ಕಾರ ಪಡೆಯುವುದರ ಮೂಲಕ ನಮ್ಮೂರಿಗೆ ಕೀರ್ತಿ ತರುವುದರ ಜೊತೆಗೆ ಇಡೀ ದೇಶದ ಆಸ್ತಿಯಾಗಬೇಕು, […]
Day: November 15, 2022
ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ನಲ್ಲಿ ಮಕ್ಕಳ ದಿನಾಚರಣೆ
ಕುಂದಾಪುರ( ನ,15) : ಇಲ್ಲಿನ ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಆಚಾರ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ ಇಂದು ಮಕ್ಕಳ ದಿನಾಚರಣೆಯನ್ನು ನ.14 ರಂದು ಆಚರಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲೆ ಡಾ. ಚಿಂತನಾ ರಾಜೇಶ್, ಉಪ ಪ್ರಾಂಶುಪಾಲೆ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶುಭಾ ಕೆ.ಎನ್, ಸಹಾಯಕ ಮುಖ್ಯ ಶಿಕ್ಷಕ ಚಂದ್ರಶೇಖರ್ ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಜಗದೀಶ್ ಆಚಾರ್ ಸಾಸ್ತಾನ, ಸಹಾಯಕ […]
ಡಾ| ಬಿ. ಬಿ. ಹೆಗ್ಡೆ ಕಾಲೇಜು: ಅoತಿಮ ವರ್ಷದ ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಕೌಶಲ್ಯ ತರಬೇತಿ ಕಾರ್ಯಕ್ರಮ
ಕುಂದಾಪುರ (ನ,15): ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉದ್ಯೋಗ ಮಾಹಿತಿ ಮತ್ತು ತರಬೇತಿ ವಿಭಾಗದ ವತಿಯಿಂದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಕೌಶಲ್ಯ ತರಬೇತಿಯ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ರಿಸರ್ಚ್ ಎಂಡ್ ಟ್ರೈನಿಂಗ್ , ಎಮ್.ಡಿ.ಎನ್. ಲ್ಯಾಬ್ಸ್, ಮಣಿಪಾಲ್ನ ಡೈರೆಕ್ಟರ್ರಾದ ಡಾ| ನಿರಂಜನ್ ಯು.ಸಿ. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳನ್ನುದ್ಧೇಶಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀಮತಿ ಎಮ್.ಎಸ್. ಸುಪರ್ಣಾ ಶೆಟ್ಟಿ ಉದ್ಯೋಗಾಧಾರಿತ ಕೌಶಲ್ಯಗಳ ಬಗ್ಗೆ […]
ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜು ಕುಂದಾಪುರ: ವಾರ್ಷಿಕ ಕ್ರೀಡಾಕೂಟ
ಕುಂದಾಪುರ (ನ,15): ಇವತ್ತಿನ ನಮ್ಮ ದೈನಂದಿನ ಜೀವನದಲ್ಲಿ ದೇಹದಂಡನೆ ಕಡಿಮೆಯಾಗಿರುವುದರಿಂದ ವ್ಯವಸ್ಥಿತವಾದ ತರಬೇತಿ ಆಧರಿತ ಕ್ರೀಡೆಯ ಅಗತ್ಯವಿದೆ. ದಿನ ನಿತ್ಯವೂ ಅಲ್ಪ ಸಮಯವನ್ನಾದರೂ ನಾವು ದೇಹಬಲವನ್ನು ಹೆಚ್ಚಿಸುವಂಥ ಕಾರ್ಯಗಳಿಗೆ ನೀಡಬೇಕು” ಎಂದು ಕುಂದಾಪುರ ತಾಲೂಕು ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿಯವರಾದ ಶ್ರೀ ಕುಸುಮಾಕರ ಶೆಟ್ಟಿಯವರು ಹೇಳಿದರು . ಅವರು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ […]
ಸೇವಾ ಚೇತನ ಟ್ರಸ್ಟ್ ಮೂಡುಬಗೆ: ಮನೆ ಹಸ್ತಾಂತರ ಕಾರ್ಯಕ್ರಮ
ಅoಪಾರು( ನ,15): ಬಡ ಕುಟುಂಬದ ವನಜ ಪೂಜಾರಿ ಇವರು ಮನೆಯನ್ನು ಕಟ್ಟಬೇಕು ಎಂದು ನಿರ್ಧರಿಸಿದ ಆ ಸಮಯದಲ್ಲಿ ತನ್ನ ಗಂಡನನ್ನು ಮಾರಕ ಕ್ಯಾನ್ಸರ್ ಖಾಯಿಲೆಯಿಂದ ಕಳೆದುಕೊಂಡಾಗ ಅವರೊಂದಿಗೆ ಇದ್ದಿದ್ದು ಎಂಡೋಸಲ್ಫನ್ ಪೀಡಿತ ಬುದ್ಧಿಮಾಂದ್ಯ ಮಗ. ಮಗನನ್ನು ಬಿಟ್ಟು ಕೂಲಿಗೂ ಹೋಗಲಾಗದ ಪರಿಸ್ಥಿತಿ. ಇವರ ಮನೆ ನಿರ್ಮಾಣ ಕಾರ್ಯ ಪೂರ್ಣ ಗೊಳಿಸಬೇಕೆಂದು ಅನೇಕರು ಪ್ರಯತ್ನ ಪಟ್ಟರೂ ಕೂಡ ಸಾಧ್ಯವಾಗದಿದ್ದಾಗ ಇವರು ಸಂಪರ್ಕಿಸಿದ್ದು ಸೇವಾ ಚೇತನ ಟ್ರಸ್ಟ್ . ಅವರ ಕಷ್ಟವನ್ನು […]