ಗಂಗೊಳ್ಳಿ(ನ,2): ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಮಂಡಲದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗಾಗಿ ಹಮ್ಮಿಕೊಂಡಿದ್ದ ಗೂಡು ದೀಪ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ನಟರಾಜ, ದ್ವಿತೀಯ ಸ್ಥಾನವನ್ನು ನಾಗಲಕ್ಷ್ಮಿ ಜಿ.ಎನ್ ಮತ್ತು ತೃತೀಯ ಸ್ಥಾನವನ್ನು ನಿಮಿಷ ಪಡೆದರು. ಡಾ. ಬಿ ಆರ್ ಅಂಬೇಡ್ಕರ್ ಯುವಕ ಮಂಡಲದ ಗೌರವಾಧ್ಯಕ್ಷರಾದ ಭಾಸ್ಕರ್ ಎಚ್ ಜಿ ಬಹುಮಾನವನ್ನು ವಿತರಿಸಿದರು.
Year: 2022
ಗಂಗೊಳ್ಳಿ: ರೋಟರಿ ಕ್ಲಬ್ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ
ಗಂಗೊಳ್ಳಿ (ನ,2): ರೋಟರಿ ಕ್ಲಬ್ ಗಂಗೊಳ್ಳಿ ,ರೋಟರಾಕ್ಟ್ ಕ್ಲಬ್ ಗಂಗೊಳ್ಳಿ ಹಾಗೂ ರೋಟರಿ ಕ್ಲಬ್ ಕುಂದಾಪುರ ಮಿಡ್ ಟೌನ್ ಇದರ ಸಂಯುಕ್ತ ಆಶ್ರಯದಲ್ಲಿ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಲೈಬ್ರರಿ ಹಾಲ್ ನಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಂಗೊಳ್ಳಿ ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ಸುಗುಣ ಆರ್ ಕೆ ವಹಿಸಿದ್ದರು. ಪ್ರಧಾನ ಭಾಷಣಕಾರರಾಗಿ ಆಗಮಿಸಿದ ಡಾ. ಬಿ ಬಿ ಪ್ರಥಮ ದರ್ಜೆ ಕಾಲೇಜಿನ ಉಪ […]
ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಟ್ಯಾಲಿ ಕಾರ್ಯಗಾರ
ಶಿರ್ವ(ನ,2): ಆಧುನಿಕ ತಂತ್ರಜ್ಞಾನದಲ್ಲಿ ಗಣಕ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳಿದ್ದು, ವಾಣಿಜ್ಯ ಕ್ಷೇತ್ರದಲ್ಲಿ ಅಕೌಂಟ್ಸ್ ಬಗ್ಗೆ ಅಪಾರ ಜ್ಞಾನ ಹೊಂದಿದರಲ್ಲಿ ಟ್ಯಾಲಿ ಮತ್ತು ಎಸ್ಎಪಿ ಅಂತ ಸಾಫ್ಟ್ವೇರ್ ಕಲಿಕೆ ಸರಳವಾಗುವುದು, ತನ್ಮೂಲಕ ಚಾರ್ಟರ್ಡ್ ಅಕೌಂಟೆನ್ಸಿ ವಿಷಯದ ಬಗ್ಗೆ ಜ್ಞಾನ ಪಡೆದುಕೊಳ್ಳಬಹುದು. ಬಿಸಿಎ ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ವಿದ್ಯಾಭ್ಯಾಸದ ಜೊತೆಗೆ ವಿವಿಧ ಸಂಸ್ಥೆಯಲ್ಲಿ ಲಭ್ಯವಿರುವ ಅಕೌಂಟೆಂಟ್ ಹಾಗೂ ಎಸ್ಎಪಿ ಇಂಜಿನಿಯರ್ ಉದ್ಯೋಗ ಪಡೆಯಲು ಈ ಕಾರ್ಯಗಾರ ಸಹಾಯಕಾರಿ ಎಂದು ಇಲ್ಲಿನ […]
ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ
ಹೆಮ್ಮಾಡಿ(ನ,1): ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ 67 ನೇ ಕನ್ನಡ ರಾಜ್ಯೋತ್ಸವವ ನ್ನು ಸಂಭ್ರಮದಿಂದ ಆಚರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಗಣೇಶ ಮೊಗವೀರರವರು ವಹಿಸಿ ಕನ್ನಡ ಅಭಿಮಾನದ ಬಗ್ಗೆ ಮಹತ್ವ ಸಾರುವ ಸಂದೇಶವನ್ನು ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಜನತಾ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರು ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ನಂದಿ ಇವರು ಕನ್ನಡ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿ […]
ಟೀಮ್ ಕುಂದಾಪುರಿಯನ್ ವತಿಯಿಂದ ಬೆಂಗಳೂರಿನಲ್ಲಿ ಅರ್ಥಪೂರ್ಣ ದೀಪಾವಳಿ ಆಚರಣೆ
ಬೆಂಗಳೂರು ( ಅ,31): ಇಲ್ಲಿನ ಕೂಡ್ಲು ಸಮೀಪ ಇರುವ ವಲಸೆ ಕಾರ್ಮಿಕರ ಕೇರಿಯ ಜನರೊಂದಿಗೆ ಟಿಮ್ ಕುಂದಾಪುರಿಯನ್ ತಂಡದವರು ಸಂಭ್ರಮದಿಂದ ದೀಪಾವಳಿ ಹಬ್ಬ ಮತ್ತು ಪುನೀತ್ ರಾಜ್ಕುಮಾರ್ ಪುಣ್ಯ ಸ್ಮರಣೆ ಆಚರಿಸಿದರು. ಈ ಸಂದರ್ಭದಲ್ಲಿ ಟಿಮ್ ಕುಂದಾಪುರಿಯನ್ ತಂಡದ ಸದಸ್ಯ ಮತ್ತು ಮಾಧ್ಯಮ ನಿರೂಪಕ ರಂಜಿತ್ ಶಿರಿಯಾರ ಮಾತನಾಡಿ ಮಹಾನಗರದ ಒತ್ತಡದ ಜೀವನದ ಮಧ್ಯೆ ಬಿಡುವು ಮಾಡಿಕೊಂಡು ನಿಮ್ಮೊಂದಿಗೆ ನಾವು ನಮ್ಮ ಪೋಷಕರನ್ನು ಕಾಣುತ್ತವೆ. ನಿಮ್ಮ ಮಕ್ಕಳ ಮುಂದಿನ ಶೈಕ್ಷಣಿಕ ಜೀವನ […]
ಗಂಗೊಳ್ಳಿ: ಜಿಲ್ಲಾ ಮಟ್ಟದ ಪುರುಷರ ಶೆಟಲ್ ಬ್ಯಾಡ್ಮಿಂಟನ್ ಉದ್ಘಾಟನೆ
ಗಂಗೊಳ್ಳಿ( ಅ,31): ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳನ್ನು ಪೋಷಿಸುವಲ್ಲಿ ಪ್ರತಿಯೊಬ್ಬರು ಮನಸ್ಸು ಮಾಡಬೇಕಿದೆ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ತಮ್ಮನ್ನು ಹೆಚ್ಚು ಮುತುವರ್ಜಿಯಿಂದ ತೊಡಗಿಸಿಕೊಳ್ಳಬೇಕಿದೆ ಎಂದು ಲಿಫ್ಟ್ ನ್ ಒಲಿವೆರಾ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಗುಜ್ಜಾಡಿ ಗೋಪಾಲ್ ನಾಯಕ್ ರೋಟರಿ ಸಭಾಂಗಣದಲ್ಲಿ ಎಸ್ಎಂಎಲ್ ಫ್ರೆಂಡ್ಸ್ ವತಿಯಿಂದ ಆಯೋಜಿಸಲ್ಪಟ್ಟ ಉಡುಪಿ ಜಿಲ್ಲಾ ಮಟ್ಟದ ಪುರುಷರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಜಿಎಸ್ವಿಎಸ್ ಅಸೋಸಿಯೇಷನ್ ಅಧ್ಯಕ್ಷ ಡಾ. […]
ಸರಕಾರಿ ಪದವಿ ಪೂರ್ವ ಕಾಲೇಜು ಹೊಸಂಗಡಿ: ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ
ಹೊಸಂಗಡಿ(ಅ,30): ಸರಕಾರಿ ಪದವಿ ಪೂರ್ವ ಕಾಲೇಜು ಹೊಸಂಗಡಿ ಇದರ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರವು ಸರಕಾರಿ ಪ್ರೌಢ ಶಾಲೆ, ಬಂಗ್ಲೆಗುಡ್ಡೆ ಇಲ್ಲಿ ಅ,29 ರ ಶನಿವಾರ ಉದ್ಘಾಟನೆಗೊಂಡಿತು. ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಭಾಸ್ಕರ ಶೆಟ್ಟಿ ಇವರು ಶಿಬಿರ ಉದ್ಘಾಟನೆ ಮಾಡಿ ವಿದ್ಯಾರ್ಥಿಗಳು ಆತ್ಮ ವಿಶ್ವಾಸ ಹಾಗೂ ಸ್ವಾವಲಂಬಿಯಾಗಿ ಬದುಕಬೇಕು, ಹಾಗೆ ಬದುಕಬೇಕಾದರೆ ಎನ್ ಎಸ್ ಎಸ್ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು. ಈ ಕಾರ್ಯಕ್ರಮದ […]
ಆಪದ್ಬಾಂಧವ ಈಶ್ವರ ಮಲ್ಪೆಯವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಉಡುಪಿ(ಅ.30) : ಸಮಾಜ ಸೇವಕ, ಮುಳುಗು ತಜ್ಞ, ಜೀವರಕ್ಷಕ, ಆಪದ್ಬಾಂಧವ ಉಡುಪಿಯ ಈಶ್ವರ ಮಲ್ಪೆಯವರು ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ . ತಮ್ಮ ವೈಯುಕ್ತಿಕ ಹಾಗೂ ಕೌಟುಂಬಿಕ ಬದುಕಿನ ಸಾಕಷ್ಟು ಸವಾಲುಗಳ ನಡುವೆಯೂ ಜನಸೇವೆ ಮಾಡಬೇಕೆಂದು ಸ್ವಯಂ ಪ್ರೇರಣೆಯಿಂದ, ನಿಸ್ವಾರ್ಥ ಸೇವೆಯಲ್ಲಿ ತಲ್ಲೀನರಾಗಿರುವುದರ ಜೊತೆಗೆ ತುರ್ತು ಆಂಬ್ಯುಲೆನ್ಸ್ ಸೇವೆಯಲ್ಲಿ ನಿರತರಾಗಿ ,ನೀರಿಗೆ ಬಿದ್ದವರನ್ನು ಅಪಾಯದಿಂದ ಪಾರುಮಾಡುವ ,ಹಾಗೆಯೇ ನೀರಿಗೆ ಬಿದ್ದು ನಾಪತ್ತೆಯಾಗಿ ಕಣ್ಮರೆಯಾಗಿರುವ ಅದೆಷ್ಟೋ ಮ್ರತ ದೇಹವನ್ನು […]
ಮಾರಣಕಟ್ಟೆಯ ಕರ್ಣ, ಕೊಡುಗೈ ದಾನಿ ಶ್ರೀ ಕೃಷ್ಣಮೂರ್ತಿ ಮಂಜರಿಗೆ ರಾಜ್ಯೋತ್ಸವ ಪ್ರಶಸ್ತಿ
ಕುಂದಾಪುರ (ಅ,30): ಮಾರಣಕಟ್ಟೆಯ ಕರ್ಣ, ಕೊಡುಗೈ ದಾನಿ, ಸಮಾಜಸೇವಕ, ಶಿಕ್ಷಣ ಪ್ರೇಮಿ, ತನ್ನ ದುಡಿಮೆಯ ಅರ್ಧ ಭಾಗಕ್ಕೂ ಹೆಚ್ಚು ಹಣವನ್ನು ಸಮಾಜಕ್ಕೆ ನೀಡುವ ಕೃಷ್ಣಮೂರ್ತಿ ಮಂಜರು ಈ ಬಾರಿಯ ರಾಜ್ಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಎಂ.ಎಸ್. ಮಂಜ ಚಾರಿಟೇಬಲ್ ಟ್ರಸ್ಟ್ ಮೂಲಕ ನೂರಾರು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಕಾರಣರಾದವರು, ತನ್ನ ದುಡಿಮೆ ಹಣವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳದೇ ಸಮಾಜಕ್ಕಾಗಿ ವಿನಿಯೋಗಿಸುವ ಧೀಮಂತ ವ್ಯಕ್ತಿತ್ವದ ಶ್ರೀ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರುರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರೋದು […]
ಎಚ್. ಎಮ್. ಎಮ್ ಮತ್ತು ವಿ.ಕೆ.ಆರ್ ಶಾಲೆಯಲ್ಲಿ ಕನ್ನಡ ಕೋಟಿ ಕಂಠ ಗಾಯನ
ಕುಂದಾಪುರ (ಅ ,28) : ಕನ್ನಡದ ಅಸ್ಮಿತೆಯನ್ನು ಸಾರುವ ವಿನೂತನ ಅಭಿಯಾನ ʼಕೋಟಿ ಕಂಠ ಗಾಯನʼವು ಅ.28 ರಂದು ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿತು. ಕನ್ನಡ ,ನಾಡು -ನುಡಿಯ ಮಹತ್ವವನ್ನು ಸಾರುವ ಆರು ಹಾಡುಗಳನ್ನು ವಿದ್ಯಾರ್ಥಿಗಳು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು ಒಕ್ಕೊರಲಿನಿಂದ ಹಾಡಿ ಕನ್ನಡಾಭಿಮಾನವನ್ನು ಮೆರೆದರು.