ಬೆಂಗಳೂರು ( ಅ,31): ಇಲ್ಲಿನ ಕೂಡ್ಲು ಸಮೀಪ ಇರುವ ವಲಸೆ ಕಾರ್ಮಿಕರ ಕೇರಿಯ ಜನರೊಂದಿಗೆ ಟಿಮ್ ಕುಂದಾಪುರಿಯನ್ ತಂಡದವರು ಸಂಭ್ರಮದಿಂದ ದೀಪಾವಳಿ ಹಬ್ಬ ಮತ್ತು ಪುನೀತ್ ರಾಜ್ಕುಮಾರ್ ಪುಣ್ಯ ಸ್ಮರಣೆ ಆಚರಿಸಿದರು.
ಈ ಸಂದರ್ಭದಲ್ಲಿ ಟಿಮ್ ಕುಂದಾಪುರಿಯನ್ ತಂಡದ ಸದಸ್ಯ ಮತ್ತು ಮಾಧ್ಯಮ ನಿರೂಪಕ ರಂಜಿತ್ ಶಿರಿಯಾರ ಮಾತನಾಡಿ ಮಹಾನಗರದ ಒತ್ತಡದ ಜೀವನದ ಮಧ್ಯೆ ಬಿಡುವು ಮಾಡಿಕೊಂಡು ನಿಮ್ಮೊಂದಿಗೆ ನಾವು ನಮ್ಮ ಪೋಷಕರನ್ನು ಕಾಣುತ್ತವೆ. ನಿಮ್ಮ ಮಕ್ಕಳ ಮುಂದಿನ ಶೈಕ್ಷಣಿಕ ಜೀವನ ಬಲಿಷ್ಠವಾಗಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ ಅರುಣ್ ಕುಮಾರ್ ಕಲ್ಗದ್ದೆ , ಮಾಧ್ಯಮ ವರದಿಗಾರ ರೂಪೇಶ್ ಬೈಂದೂರು, ಉದ್ಯಮಿ ರಾಘವೇಂದ್ರ ಹಾರ್ಮಣ್, ಪ್ರಶಾಂತ್ ಶೆಟ್ಟಿ ಗುಲ್ವಾಡಿ, ಸ್ಥಳೀಯ ಮುಖಂಡ ಸಿದ್ದು ಉಪಸ್ಥಿತರಿದ್ದರು. ಹಬ್ಬದ ಪ್ರಯುಕ್ತ ಟೀಮ್ ಕುಂದಾಪುರಿಯನ್ ತಂಡದ ಸದಸ್ಯರು ವಲಸೆ ಕಾರ್ಮಿಕರ ಜೊತೆಗೆ ಮನರಂಜನೆ ಮತ್ತು ಮಕ್ಕಳ ಜೊತೆಗೆ ಆಟವಾಡಿ ಸಿಹಿತಿಂಡಿ ವಿತರಿಸಿ ಭೋಜನ ಸವಿದರು.