ಕಾರ್ಕಳ(ಅ.07): ಇಲ್ಲಿನ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಮಹಾತ್ಮ ಗಾಂಧೀಜಿ ಮತ್ತು ದೇಶದ ದ್ವಿತೀಯ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಅ.02 ರಂದು ಆಚರಿಸಲಾಯಿತು. ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ಮಾತನಾಡಿ ಇಂದು ಗಾಂಧೀಜಿಯವರ ಸಾಮರಸ್ಯ ಚಿಂತನೆ ಜೀವನದ ಆದರ್ಶ ನಮಗೆ ದಾರಿದೀಪವಾಗಬೇಕಿದೆ ಮತ್ತು ದೇಶ ಕಂಡ ಅಪ್ರತಿಮ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ “ಜೈ ಜವಾನ್ ಜೈ ಕಿಸಾನ್” ಘೋಷಣೆ ಹಾಗೂ ಪ್ರಬುದ್ಧತೆಯನ್ನು ಯುವಜನತೆ ಅರಿತು […]
Year: 2022
ಸ್ವಾತಂತ್ರ್ಯ ಹೋರಾಟಗಾರ ಹಂದಾಡಿ ಸಂಜೀವ ಶೆಟ್ಟಿ ಬೆಣ್ಣೆಕುದ್ರು ಮನೆಗೆ ನಾಮಫಲಕ ಅನಾವರಣ ಕಾರ್ಯಕ್ರಮ
ಬ್ರಹ್ಮಾವರ (ಅ,7): ಬ್ರಹ್ಮಾವರ ತಾಲೂಕು ಹಂದಾಡಿ ಸ್ವಾತಂತ್ರ್ಯ ಹೋರಾಟಗಾರರಾಗಿರುವ ಸಂಜೀವ ಶೆಟ್ಟಿ ಬೆಣ್ಣೆಕುದ್ರು ಇವರ ಮನೆಗೆ ನಾಮ ಫಲಕ ಅಳವಡಿಸುವ ಕಾರ್ಯಕ್ರಮ ಸೆ.25 ರಂದು ನಡೆಯಿತು . ” ಸ್ವರಾಜ್ಯ75 “ಸಂಘಟನೆಯ ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮಫಲಕ ಅಳವಡಿಸುವ ಅಭಿಯಾನದ 17ನೇ ಮನೆಯ ನಾಮಫಲಕ ಅನಾವರಣ ಕಾಯ೯ಕ್ರಮವನ್ನು ಸ.ಪ್ರ.ದ.ಕಾಲೇಜು ಕಾಲೇಜು ಶಂಕರನಾರಾಯಣ ನಿವೃತ್ತ ಪ್ರಾಂಶುಪಾಲರಾಗಿರುವ ಡಾ.ಉದಯ್ ಕುಮಾರ್ ಶೆಟ್ಟಿರವರು ನೆರವೇರಿಸಿದರು. ರಾಷ್ಟ್ರ ಧ್ವಜಕ್ಕೆ ಪುಷ್ಪಾರ್ಚನೆಯ ಮೂಲಕ ಶ್ರೀ ಚಂದ್ರಶೇಖರ […]
ಎಚ್. ಎಮ್. ಎಮ್ ಮತ್ತು ವಿ. ಕೆ. ಆರ್ ಶಾಲೆಯಲ್ಲಿ ಗಾಂಧಿ & ಶಾಸ್ತ್ರಿಜಿ ಜಯಂತಿ
ಕುಂದಾಪುರ (ಅ,7) : ಕುಂದಾಪುರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಆಚರ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು. ಸಂಸ್ಥೆಯ ಉಪ ಪ್ರಾಂಶುಪಾಲೆ ಹಾಗೂ ಹೈಸ್ಕೂಲ್ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಶುಭಾ ಕೆ. ಎನ್ ಮತ್ತು ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಜಗದೀಶ್ ಆಚಾರ್ ಸಾಸ್ತಾನ, ಮಹಾತ್ಮರ ಭಾವಚಿತ್ರಕ್ಕೆ […]
ಲ. ಅಶೋಕ್ ಶೆಟ್ಟಿ ಸಂಸಾಡಿಯವರಿಗೆ ಪಿತ್ರ ವಿಯೋಗ
ಕುಂದಾಪುರ(ಅ,6): ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ನ ಸ್ಥಾಪಕಾಧ್ಯಕ್ಷರು, ಕುಂದಾಪುರದ ಪ್ರತಿಷ್ಠಿತ ಶುಭಲಕ್ಷ್ಮಿ ಹೋಟೆಲ್ಸ್ ಪ್ರೈವೇಟ್ ಲಿಮಿಟೆಡ್ ನ ಆಡಳಿತ ಪಾಲುದಾರರಾದ ಲ. ಅಶೋಕ್ ಶೆಟ್ಟಿ ಸಂಸಾಡಿ ಅವರ ತಂದೆ ಬಡಾಕೆರೆ ಶಂಕರ ಶೆಟ್ಟಿ (88 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಅ.6 ರಂದು ನಿಧನರಾಗಿದ್ದಾರೆ. ಮೃತರು ಧರ್ಮಪತ್ನಿ ಸೇರಿದಂತೆ ಐದು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ನಮ್ಮ ನಡಿಗೆ ಗ್ರಾಮದೆಡೆಗೆ-ಸ್ವಾತಂತ್ರ್ಯಹೋರಾಟಗಾರರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮ “ಹೊಂಬೆಳಕು”
ಕುಂದಾಪುರ (ಅ.05) : ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟೀಯ ಸೇವಾ ಯೋಜನಾ ಘಟಕ ಹಾಗೂ ಸ್ವರಾಜ್ಯ 75 ಸಂಘಟನೆಯ ಸಹಭಾಗಿತ್ವದಲ್ಲಿ ಸ್ವಾತಂತ್ರ್ಯಹೋರಾಟಗಾರ ತಲ್ಲೂರು ಎಸ್.ಎನ್. ಸುಬ್ಬಣ್ಣ ಗುಪ್ತ ಅವರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮ ಅ.02 ರಂದು ನಡೆಯಿತು. ರಾಷ್ಟ್ರ ಧ್ವಜಕ್ಕೆ ಪುಪ್ಪಾರ್ಚನೆಯ ಮೂಲಕ ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭೀಮವ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಶ್ವದಾಖಲೆಯ ಯೋಗಪಟು ತಲ್ಲೂರು ನಿರಂಜನ ಶೆಟ್ಟಿ ನಾಮಫಲಕ […]
ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ , ಬೈಂದೂರು -ಶಿರೂರು ಘಟಕ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಕಡಲ ಕಿನಾರೆಯಲ್ಲಿ ಉದ್ಯಾನವನ
ಬೈಂದೂರು(ಅ,4): ಉಡುಪಿ ಜಿಲ್ಲೆಯ ಪ್ರಸಿದ್ಧ ನೈಸರ್ಗಿಕ ಕಡಲ ತೀರದಲ್ಲಿ ಒಂದಾದ ಅಳ್ವೆಗದ್ದೆ ಬೀಚ್ ನಲ್ಲಿ ಇಂದು ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ , ಬೈಂದೂರು -ಶಿರೂರು ಘಟಕ, ಶ್ರೀ ಮಹಾಗಣಪತಿ ದೇವಸ್ಥಾನ ಅಳ್ವೆಗದ್ದೆ ಶಿರೂರು ಹಾಗೂ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಬೀಚ್ ಅಭಿವೃದ್ಧಿಯ ದೃಷ್ಟಿಯಿಂದ ‘ಕಡಲ ಕಿನಾರೆಯಲ್ಲಿ ಉದ್ಯಾನವನ’ ಕಾರ್ಯಕ್ರಮದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಯಿತು. ಪ್ರವಾಸಿಗರಿಗೆ ನೆರಳು ನೀಡುವ ಹಾಗೂ ಮರಳನ್ನು ಸಂರಕ್ಷಿಸುವ […]
ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕ : ತಲ್ಲೂರಿನ ನಾರಾಯಣ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ನಾಡೋಜ ಡಾ.ಜಿ.ಶಂಕರ್ ರವರ 67 ನೇ ಹುಟ್ಟು ಹಬ್ಬ ಆಚರಣೆ
ತಲ್ಲೂರು(ಆ.05): ಸಮಾಜ ಸೇವಕ, ಶಿಕ್ಷಣ ಪ್ರೇಮಿ, ಧಾರ್ಮಿಕ, ಸಾಮಾಜಿಕ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿರುವ ನಾಡೋಜ ಡಾ. ಜಿ.ಶಂಕರ್ ರವರ 67 ನೇ ಹುಟ್ಟು ಹಬ್ಬವನ್ನು ಮೊಗವೀರ ಯುವ ಘಟನೆಯ ಹೆಮ್ಮಾಡಿ ಘಟಕದ ಆಶ್ರಯದಲ್ಲಿ ತಲ್ಲೂರಿನ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ಅ .05 ರಂದು ಆಚರಿಸಲಾಯಿತು. ಕೇಕ್ ಕತ್ತರಿಸಿ ವಿದ್ಯಾರ್ಥಿಗಳಿಗೆ ಸಿಹಿ ಹಂಚುವುದರ ಜೊತೆಗೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸುವುದರ ಜೊತೆಗೆ ವಿಶೇಷ ಭೋಜನ ವ್ಯವಸ್ಥೆ ಮಾಡಲಾಯಿತು.ಮೊಗವೀರ […]
ಕುಂದಾಪುರದ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧಿ ಮತ್ತು ಶಾಸ್ತ್ರೀ ಜಯಂತಿ ಆಚರಣೆ
ಕುಂದಾಪುರ (ಅ.04):ಗಾಂಧಿ ಮತ್ತು ಶಾಸ್ತ್ರೀ ಇಬ್ಬರು ರಾಷ್ಟ್ರ ನಾಯಕರ ನಾಯಕತ್ವದ ಗುಣಗಳು ಮತ್ತು ದೇಶದ ಬಗೆಗಿನ ಕಾಳಜಿ ಅವರ ಬಗ್ಗೆ ನಮ್ಮ ವೈಯುಕ್ತಿಕ ಒಲವು-ನಿಲುವುಗಳನ್ನು ಮೀರಿ ನಿಲ್ಲುತ್ತವೆ.ಈ ನಿಟ್ಟಿನಲ್ಲಿ ಮಹಾತ್ಮಾ ಗಾಂಧೀ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಯವರನ್ನು ನಾವೆಲ್ಲರೂ ಸದಾ ನೆನಪಿಸಿಕೊಳ್ಳಬೇಕು” ಎಂದು ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ತಿಳಿಸಿದರು. ಗಾಂಧೀಜಿ- ಶಾಸ್ತ್ರೀಜಿ ಜಯಂತಿಯ ಅಂಗವಾಗಿ ಇಬ್ಬರೂ ಮಹಾನ್ […]
ಸ್ವಾತಂತ್ರ್ಯ ಹೋರಾಟಗಾರ ತಲ್ಲೂರು ಎಸ್ ಎನ್ ಸುಬ್ಬಣ್ಣ ಗುಪ್ತ ಮನೆಗೆ ನಾಮಫಲಕ ಅನಾವರಣ ಕಾರ್ಯಕ್ರಮ
ತಲ್ಲೂರು(ಅ.04): ಸ್ವರಾಜ್ಯ 75 ಸಂಘಟನೆಯ ಆಶ್ರಯದಲ್ಲಿ ಹಮ್ಮಿಕೊಂಡಿರುವ ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮಫಲಕ ಅಳವಡಿಕೆ ಅಭಿಯಾನದ ಅಂಗವಾಗಿ ಅಕ್ಟೋಬರ್ 2 ರಂದು ಕುಂದಾಪುರ ತಾಲೂಕು ಸ್ವಾತಂತ್ರ್ಯ ಹೋರಾಟಗಾರರಾಗಿರುವ ಎಸ್.ಎನ್. ಸುಬ್ಬಣ್ಣ ಗುಪ್ತ ಇವರ ಮನೆಗೆ ನಾಮ ಫಲಕ ಅಳವಡಿಸಲಾಯಿತು. ” ಸ್ವರಾಜ್ಯ 75 ರ ” 18 ನೇ ಮನೆ ಯಲ್ಲಿ ವಿಶ್ವ ದಾಖಲೆಯ ಯೋಗ ಪಟು ಶ್ರೀ ನಿರಂಜನ್ ಶೆಟ್ಟಿ ತಲ್ಲೂರು ಇವರಿಂದ ನಾಮ ಫಲಕ ಅನಾವರಣ ನೆರವೇರಿಸಿದರು. […]
ಸಂತ ಮೇರಿ ಕಾಲೇಜು, ಶಿರ್ವ ” ಸಿ ಪ್ರೋಗ್ರಾಮ್ ಮೇಡ್ ಈಜಿ” – ಪ್ರಶ್ನೋತ್ತರ ಮಾಲಿಕೆ ಪುಸ್ತಕ ಬಿಡುಗಡೆ
ಶಿವ೯(ಅ,4):: ಇಲ್ಲಿನ ಶಿರ್ವ ಸಂತಮೇರಿ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗದ ವತಿಯಿಂದ ಏರ್ಪಡಿಸಿದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಾಲೇಜಿನ ಕಚೇರಿ ಅಧೀಕ್ಷಕ್ಕಿ ಶ್ರೀಮತಿ ಡೋರಿನ್ ಡೀಸಿಲ್ವ ಅವರು ಉಪನ್ಯಾಸಕ ಕೆ.ಪ್ರವೀಣ್ ಕುಮಾರ್ರವರ “ಸಿ ಪ್ರೋಗ್ರಾಮ್ ಮೇಡ್ ಈಜಿ” – ಪ್ರಶ್ನೋತ್ತರ ಮಾಲಿಕೆ ಪುಸ್ತಕ ಬಿಡುಗಡೆಗೊಳಿಸಿದರು. ಪ್ರತಿಯೊಂದು ಪುಸ್ತಕ ಒಂದು ಒಳ್ಳೆಯ ಸ್ನೇಹಿತ, ಪುಸ್ತಕಗಳ ಓದುವ ಮೂಲಕ ಅನೇಕ ವಿಷಯಗಳನ್ನು ಸಂಗ್ರಹಿಸಬಹುದು ಮತ್ತು ವಿವಿಧ ಜ್ಞಾನಾರ್ಜನೆಗಳನ್ನು ವಿದ್ಯಾರ್ಥಿಗಳು ವೃದ್ಧಿಸಿಕೊಳ್ಳಬಹುದು.ಪರೀಕ್ಷಾ […]