Views: 253
ಕುಂದಾಪುರ (ಜ,13): ಸಾಹಿತ್ಯ, ಸಾಂಸ್ಕೃತಿಕ ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಯಲ್ಲಿ ನಿರತರಾಗಿರುವ ಕುಂದಾಪುರದ ಪ್ರತಿಷ್ಠಿತ ಡಾ|ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲರು ಹಾಗೂ ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಯಾದ ಶ್ರೀಚೇತನ್ ಶೆಟ್ಟಿ ಕೊವಾಡಿಯವರಿಗೆ ಜೆ.ಸಿ.ಐ ಕುಂದಾಪುರ ಸಿಟಿ ವತಿಯಿಂದ ಯುವ ರತ್ನ ಪ್ರಶಸ್ತಿಯನ್ನು ಜ.12 ರಂದು ವಿವೇಕಾನಂದ ಜಯಂತಿಯ ಪ್ರಯುಕ್ತ ಹಮ್ಮಿಕೊಂಡ ಯುವ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ .ಉಮೇಶ ಶೆಟ್ಟಿ ವಹಿಸಿದ್ದರು. […]