ಗಂಗೊಳ್ಳಿ( ಜ,24): ರೋಟರಿ ಕ್ಲಬ್ ಗಂಗೊಳ್ಳಿ ವತಿಯಿಂದ ಇಂಟರಾಕ್ಟ್ ಕ್ಲಬ್ ಸಹಯೋಗದೊಂದಿಗೆ ” ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ಪರೀಕ್ಷೆಯನ್ನುಎದುರಿಸುವಾಗ ಬರುವ ಒತ್ತಡಗಳ ನಿವಾರಣೆ ಕುರಿತಾದ ಕಾರ್ಯಗಾರವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು. ರೊಟೇರಿಯನ್ ಕುಮಾರ್ ಕಾಂಚನ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ನಿರ್ಭಯವಾಗಿ ಪರೀಕ್ಷೆಯನ್ನು ಎದುರಿಸುವ ಬಗೆ ತಿಳಿಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋ ಸುಗುಣ ಆರ್ ಕೆ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಕೆ ರಾಮನಾಥ ನಾಯಕ್ ಕ್ಲಬ್ಬಿನ ಇಂಟರಾಕ್ಟ್ […]
Month: January 2023
ಕಾರ್ಕಳ: ನೇತಾಜಿ ಸುಭಾಶ್ಚಂದ್ರ ಬೋಸ್ ಜನ್ಮದಿನ ಆಚರಣೆ
ಕಾರ್ಕಳ(ಜ.24): ಕ್ರಿಯೇಟಿವ್ ಪಿ ಯು ಕಾಲೇಜಿನಲ್ಲಿ ನೇತಾಜಿ ಸುಭಾಶ್ಚಂದ್ರ ಬೋಸ್ ರವರ ಜನ್ಮದಿನವನ್ನು ಪರಾಕ್ರಮ್ ದಿವಸ್ ನ್ನು ಜನವರಿ,23 ರಂದು ಆಚರಿಸಲಾಯಿತು. ಇಡೀ ಭಾರತದಲ್ಲಿ ಸ್ವಾತಂತ್ರ್ಯದ ರಣಕಹಳೆ ಮೊಳಗಿಸಿ ನಿಮ್ಮ ರಕ್ತ ನೀಡಿ, ದೇಶಕ್ಕೆ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂಬ ಸಿಡಿಲಬ್ಬರದ ಘರ್ಜನೆಯನ್ನು ಮಾಡಿದ ಅಪ್ರತಿಮ ಸಾಹಸಿ ನೇತಾಜಿಯವರ ದೇಶಪ್ರೇಮ ನಮಗೆ ಮಾದರಿಯಾಗಬೇಕು ಎಂದು ಹಿಂದಿ ಉಪನ್ಯಾಸಕ ವಿನಾಯಕ ಜೋಗ್ ಕರೆ ನೀಡಿದರು. ಈ ಸಂದರ್ಭದಲ್ಲಿ ಕ್ರಿಯೇಟಿವ್ ವಿದ್ಯಾಸಂಸ್ಥೆಯ ಉಪನ್ಯಾಸಕರಾದ ನಂದೀಶ್ […]
ಎಚ್. ಎಮ್. ಎಮ್ ವಿ. ಕೆ. ಆರ್ ಶಾಲೆಯಲ್ಲಿ ತಾರಾಲಯ ವೀಕ್ಷಣೆ
ಕುಂದಾಪುರ(ಜ,24): ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ, ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಮತ್ತು ವಿ. ಕೆ. ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಆರ್ಯಭಟ ಮೊಬೈಲ್ ತಾರಾಲಯ ವೀಕ್ಷಣಾ ಕಾರ್ಯಕ್ರಮ 20 ಜನವರಿ 2023 ಶುಕ್ರವಾರದಂದು ನಡೆಯಿತು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಹವ್ಯಾಸಿ ಖಗೋಳ ಶಾಸ್ತ್ರಜ್ಞರೂ, ಖಗೋಳ ಚಿತ್ರಕರೂ ಆಗಿರುವ […]
ಶಿಕ್ಷಕ ದಂಪತಿ ರಾಷ್ಟ್ರಮಟ್ಟಕ್ಕೆ ಆಯ್ಕೆ
ಕುಂದಾಪುರ (ಜ,23): ಕರ್ನಾಟಕ ರಾಜ್ಯ ಮಾಸ್ಟರ್ಸ್ ಗೇಮ್ಸ್ ಅಸೋಸಿಯೇಷನ್(ರಿ.) ಇವರು ಶಿವಮೊಗ್ಗದಲ್ಲಿ ಆಯೋಜಿಸಿದ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಕಂಚುಗೋಡಿನ ನಿವಾಸಿ ನಾಗರಾಜ ಖಾರ್ವಿ ಮತ್ತು ಕೃಪಾ ದಂಪತಿ ಚಿನ್ನದ ಪದಕದೊಂದಿಗೆ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಪದವೀಧರ ಪ್ರಾಥಮಿಕ ಶಿಕ್ಷಕ ನಾಗರಾಜ ಖಾರ್ವಿ 50 ಮೀ. ಬ್ರೆಸ್ಟ್ ಸ್ಟ್ರೋಕ್ ಚಿನ್ನದ ಪದಕ 100 ಮೀ. ಬ್ರೆಸ್ಟ್ ಸ್ಟ್ರೋಕ್ ಚಿನ್ನದ ಪದಕ 200 ಮೀ. ಬ್ರೆಸ್ಟ್ ಸ್ಟ್ರೋಕ್ […]
ಎಕ್ಸಲೆಂಟ್ ಪ್ರೌಢಶಾಲೆ ಸುಣ್ಣಾರಿಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತಾ ಕಾರ್ಯಗಾರ
ಕುಂದಾಪುರ (ಜ, 20) : ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತಾ ಕರ್ಯಗಾರವು ಜೆ.ಸಿ.ಐ ಇವರ ಸಹಭಾಗಿತ್ವದಲ್ಲಿ ಎಕ್ಸಲೆಂಟ್ ಪ್ರೌಢಶಾಲೆ, ಸುಣ್ಣಾರಿ ಇಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ. ಜಗದೀಶ್ ಜೋಗಿಯವರು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ವಿದ್ಯಾರ್ಥಿಗಳ ಪರೀಕ್ಷಾ ಆತಂಕವನ್ನು ದೂರಮಾಡುತ್ತಾ ಸಮಯವು ಅತ್ಯಂತ ಮಹತ್ವಪೂರ್ಣವಾಗಿದ್ದು, ಕಳೆದು ಹೋದ ಸಮಯ ಮರಳಿಬಾರದು, ಎನ್ನುವ ಕಟುಸತ್ಯವನ್ನು ಅರಿತು ಶಿಸ್ತುಬದ್ಧವಾದ ಅಧ್ಯಯನ ನಡೆಸಬೇಕೆಂದರು. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಅಧ್ಯಯನ ವೇಳಾಪಟ್ಟಿ ಹಾಕಿಕೊಂಡು ನಿರಂತರ ಓದುವುದು […]
ಶಿಕ್ಷ ಪ್ರಭಾ ಅಕಾಡೆಮಿ ಕುಂದಾಪುರ : ಸಿಎಸ್ ಪರೀಕ್ಷೆಯಲ್ಲಿ ಶ್ರೇಷ್ಠ ಸಾಧನೆ.
ಕುಂದಾಪುರ (ಜ,20) : ಕುಂದಾಪುರ ಕುಂದೇಶ್ವರ ರಸ್ತೆಯ ಸಿರಿ ಬಿಲ್ಡಿಂಗ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ ಸಿಎ/ಸಿಎಸ್ ತರಬೇತಿ ಸಂಸ್ಥೆ (ಸ್ಪೇಸ್) ಇದರ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ ಜನವರಿ 2023 ರಲ್ಲಿ ನಡೆಸಿದ ಸಿಎಸ್ ಫೌಂಡೇಶನ್ (ಸಿಎಸ್ಇಇಟಿ) ಪರೀಕ್ಷೆ ಬರೆದ 14 ವಿದ್ಯಾರ್ಥಿಗಳಲ್ಲಿ 12 ವಿದ್ಯಾರ್ಥಿಗಳು ತೇರ್ಗಡೆ ಹೊಂದುವುದರ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಪ್ರೀತನ್ […]
ನೆಂಪು: ಗುರುವಂದನೆ ಕಾರ್ಯಕ್ರಮ
ವಂಡ್ಸೆ ( ಜ,18): ಸುಮಾರು 22 ವರ್ಷ (2000/01)ರ ಸಾಲಿನಲ್ಲಿ ಸರ್ಕಾರಿ ಪ್ರೌಢಶಾಲೆ ನೆಂಪು ವಂಡ್ಸೆಯಲ್ಲಿ ವ್ಯಾಸಂಗ ಮಾಡಿದ ವಿಧ್ಯಾರ್ಥಿಗಳು ತಮಗೆ ಶಿಕ್ಷಣ ನೀಡಿದ ಅಧ್ಯಾಪಕರಿಗೆ ಗುರುವಂದನೆ ಸಲ್ಲಿಸಿದ ಅಪರೂಪದ “ಗುರುವಂದನೆ”- ಪುನರ್ಮಿಲನ ಕಾರ್ಯಕ್ರಮ ಇತ್ತೀಚೆಗೆ ಚಿತ್ತೂರಿನ ಸಕಲ ಹಾಲ್ ಅಲ್ಲಿ ನೆರವೇರಿತು.
ಮೊಗವೀರ ಭವನ – ಜ.22 ರಂದು ಸುಸಜ್ಜಿತ, ಹವಾನಿಯಂತ್ರಿತ ಸಭಾಭವನ ಉದ್ಘಾಟನೆ
ಕುಂದಾಪುರ(ಜ,18): ಮೊಗವೀರ ಮಹಾಜನ ಸೇವಾ ಸಂಘ (ರಿ) (ಬಗ್ವಾಡಿ ಹೋಬಳಿ-1941) ಮುಂಬೈ, ಕುಂದಾಪುರ ಶಾಖೆಯ ಆಡಳಿತಕ್ಕೆ ಒಳಪಟ್ಟ , ಕುಂದಾಪುರದಲ್ಲಿ ಚಿಕನ್ಸಾಲ್ ರಸ್ತೆಯಲ್ಲಿ ಪ್ರಸ್ತುತ ಜನರ ಅಭಿರುಚಿ, ಬೇಡಿಕೆಗೆ ಅನುಗುಣವಾಗಿ ಬಹುಕೋಟಿ ವೆಚ್ಚದಲ್ಲಿ ಸುಸಜ್ಜಿತ, ಹವಾನಿಯಂತ್ರಿತ ಮೊಗವೀರ ಭವನ ನಿರ್ಮಾಣವಾಗಿದ್ದು ಇದೇ ಜನವರಿ,22 ರಂದು ಉದ್ಘಾಟನೆ ಗೊಳ್ಳಲ್ಲಿದೆ. ಕೊರೋನಾ ಸಂಕಷ್ಟದ ಕಾರಣಗಳಿಂದಾಗಿ ಭವನ ನಿರ್ಮಾಣ ಕಾಮಗಾರಿ ವಿಳಂಬವಾಗಿದ್ದು ಇತ್ತೀಚೆಗೆ ಕಾಮಗಾರಿ ವೇಗ ಪಡೆದುಕೊಂಡು, ಈಗ ಅಂದುಕೊoಡ ತೆ ಮೊಗವೀರ ಭವನ […]
ಶ್ರೀ ಚೇತನ್ ಶೆಟ್ಟಿ ಕೊವಾಡಿಯವರಿಗೆ ಯುವರತ್ನ ಪ್ರಶಸ್ತಿ
ಕುಂದಾಪುರ (ಜ,13): ಸಾಹಿತ್ಯ, ಸಾಂಸ್ಕೃತಿಕ ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಯಲ್ಲಿ ನಿರತರಾಗಿರುವ ಕುಂದಾಪುರದ ಪ್ರತಿಷ್ಠಿತ ಡಾ|ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲರು ಹಾಗೂ ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಯಾದ ಶ್ರೀಚೇತನ್ ಶೆಟ್ಟಿ ಕೊವಾಡಿಯವರಿಗೆ ಜೆ.ಸಿ.ಐ ಕುಂದಾಪುರ ಸಿಟಿ ವತಿಯಿಂದ ಯುವ ರತ್ನ ಪ್ರಶಸ್ತಿಯನ್ನು ಜ.12 ರಂದು ವಿವೇಕಾನಂದ ಜಯಂತಿಯ ಪ್ರಯುಕ್ತ ಹಮ್ಮಿಕೊಂಡ ಯುವ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ .ಉಮೇಶ ಶೆಟ್ಟಿ ವಹಿಸಿದ್ದರು. […]
ಶಿಕ್ಷ ಪ್ರಭ ಅಕಾಡೆಮಿ ಕುಂದಾಪುರ: ಸಿ ಎ ಪರೀಕ್ಷೆಯಲ್ಲಿ ಉತ್ಕ್ರಷ್ಟ ಸಾಧನೆ
ಕುಂದಾಪುರ(ಜ,12): ಸಿಎ/ಸಿಎಸ್ ಪ್ರೊಫೆಶನಲ್ ಕೋರ್ಸುಗಳ ಹೆಸರಾಂತ ತರಬೇತಿ ಸಂಸ್ಥೆ ಕುಂದಾಪುರ ಕುಂದೇಶ್ವರ ದೇವಸ್ಥಾನ ರಸ್ತೆಯ ಸಿರಿ ಬಿಲ್ಡಿಂಗ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ (ಸ್ಪೇಸ್)ನ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟ್ ಡ್ ಅಕೌಂಟೆoಟ್ಸ್ ಆಫ್ ಇಂಡಿಯ ನವೆಂಬರ್ 2022 ರಲ್ಲಿ ನೆಡೆಸಿದ ಸಿಎ ಇಂಟರ್ಮೀಡಿಯೇಟ್ ಮತ್ತು ಸಿಎ ಅಂತಿಮ ಪರೀಕ್ಷೆಯಲ್ಲಿ ಅನೇಕ ವಿದ್ಯಾರ್ಥಿಗಳು ಉತ್ತಮ ಅಂಕಗಳೊo ದಿಗೆ ತೇರ್ಗಡೆ ಹೊಂದುದರ ಮೂಲಕ ಶ್ರೇಷ್ಠ ಸಾಧನೆಗೈದಿದ್ದಾರೆ. […]