ಕೋಟೇಶ್ವರ (ಮಾ.29): ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ) ಅಂಬಲಪಾಡಿ ಹಾಗೂ ಮೊಗವೀರ ಯುವ ಸಂಘಟನೆ(ರಿ) ಉಡುಪಿ ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ ಮೇ 03 ರಂದು ನಡೆಯಲಿರುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಪೂರ್ವಭಾವಿಯಾಗಿ ಸಾಮೂಹಿಕ ವೀಳ್ಯ ಶಾಸ್ತ್ರ ಕಾರ್ಯಕ್ರಮ ಹಾಗೂ ವಧು- ವರರಿಗೆ ಉಡುಗೆ ತೊಡುಗೆಗಳ ವಿತರಣಾ ಕಾರ್ಯಕ್ರಮ ಕುಂದಾಪುರದ ಚಿಕ್ಕನ್ ಸಾಲ್ ರಸ್ತೆ ಬಳಿ ಇರುವ ಮೊಗವೀರ ಭವನದಲ್ಲಿ ಏಪ್ರಿಲ್.05 ರoದು ನಡೆಯಲಿದೆ. ಮಾ.28 ರಂದು […]
Month: March 2023
ಎ.06ಕ್ಕೆ ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದ ರಥೋತ್ಸವ
ಹೆಮ್ಮಾಡಿ (ಮಾ,28) ಕುಂದಾಪುರ ತಾಲೂಕಿನ ಪ್ರಮಖ ದೇವಾಲಯಗಳಲ್ಲಿ ಒಂದಾದ ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದ ವಾರ್ಷಿಕ ಬ್ರಹ್ಮ ರಥೋತ್ಸವ ಇದೇ ಎಪ್ರಿಲ್ 06 ರ ಗುರುವಾರದಂದು ನಡೆಯಲಿದೆ. ರಥೋತ್ಸವದ ಪ್ರಯುಕ್ತ ಎ.0 4ರಿಂದ 08ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು: ವಿಶ್ವ ಜಲ ದಿನಾಚರಣೆ
ಕುಂದಾಪುರ(ಮಾ,29): ಇಲ್ಲಿನ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗ ಹಾಗೂ ಇಕೋ ಕ್ಲಬ್ ಇದರ ಸಹಭಾಗಿತ್ವದಲ್ಲಿ ವಿಶ್ವ ಜಲ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ದಕ್ಷಿಣ ಕನ್ನಡ ನಿರ್ಮಿತಿ ಕೇಂದ್ರ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ರಾಜೇಂದ್ರ ಕಲ್ಬಾವಿ ಇವರು ಆಗಮಿಸಿ ನೀರಿನ ಮಹತ್ವ ಮತ್ತು ಸಂರಕ್ಷಣೆ ವಿಷಯದ ಕುರಿತು ವಿಚಾರ ವಿನಿಮಯ ಮಾಡಿದರು. ನೀರನ್ನು ಜೀವ ಜಲ ಎಂದು ಕರೆಯುತ್ತಾರೆ. ಇತ್ತೀಚಿನ […]
ಡಾ| ಬಿ.ಬಿ.ಹೆಗ್ಡೆ ಕಾಲೇಜು ಕುಂದಾಪುರ: ಪಿಜಿಸಿಇಟಿ ಕುರಿತು ಮಾಹಿತಿ ಕಾರ್ಯಗಾರ
ಕುಂದಾಪುರ (ಮಾ, 28): ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಪ್ರವೇಶಕ್ಕಾಗಿ ನಡೆಸುವ ಪಿಜಿಸಿಇಟಿ ಪರೀಕ್ಷೆಯ ಕುರಿತು ಮಾಹಿತಿ ಕಾರ್ಯಗಾರ ಏರ್ಪಡಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಂಗಳೂರಿನ ಅಭಿಜ್ಞಾ ವಿದ್ಯಾಸಂಸ್ಥೆಯ ನಿರ್ದೇಶಕರಾದ ಶ್ರೀ ಅಭಿಲಾಷ್ ಪರೀಕ್ಷೆಯ ತಯಾರಿ ಹೇಗಿರಬೇಕು, ಪರೀಕ್ಷೆ ಯಾವ ಸಂದರ್ಭದಲ್ಲಿ ನಡೆಸಲಾಗುತ್ತದೆ, ಪರೀಕ್ಷೆಯ ಪೂರ್ವ ತಯಾರಿಯೊಂದಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವುದರ ಬಗ್ಗೆ […]
ಡಾ.ಬಿ.ಬಿ. ಹೆಗ್ಡೆ ಕಾಲೇಜು: ಹಸ್ತಿನಾವತಿ ಕಾದಂಬರಿಯ ಮರು ಅನಾವರಣ
ಕುಂದಾಪುರ(,ಮಾ.28):ಇಲ್ಲಿನ ಡಾ.ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ಆಶ್ರಯದಲ್ಲಿ ‘ಹಸ್ತಿನಾವತಿ’ ಕಾದಂಬರಿಯ ಮರು ಅನಾವರಣ ಕಾರ್ಯಕ್ರಮ ಮಾ.26 ರಂದು ನಡೆಯಿತು. ಬೆಂಗಳೂರು ವಿಶ್ವವಿದ್ಯಾಲಯದ ವಿತ್ತಾಧಿಕಾರಿ ಅಜಿತ್ ಹೆಗ್ಡೆ ಶಾನಾಡಿಯವರು ಜೋಗಿಯವರ ಹಸ್ತಿನಾವತಿ ಕಾದಂಬರಿ ಅನಾವರಣಗೊಳಿಸಿ ಮಾತನಾಡಿದರು. ಈ ಕೃತಿಯಲ್ಲಿ ರಾಜಕೀಯ, ಧಾರ್ಮಿಕ, ಪ್ರೇಮಕತೆ ಎಲ್ಲವೂ ಇದೆ. ಮುಖ್ಯವಾಗಿ ಯುವ ಸಮುದಾಯ ಓದಬೇಕಾದ ಪುಸ್ತಕವಿದು. ಓದುಗರನ್ನು ಬಿಡದಂತೆ ಓದಿಸಿಕೊಂಡು ಹೋಗುವ ಕಲೆ ಜೋಗಿಯವರಿಗೆ ಜನ್ಮತಃ ಸಿದ್ಧಿಯಾಗಿದೆಎಂದರು. ಬದುಕಿನ ವಿಭಿನ್ನ ಪಾತ್ರಗಳನ್ನು […]
ಐ.ಎಂ.ಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಕಾಮರ್ಸ್ ಮೂಡ್ಲಕಟ್ಟೆ:ಶಿಕ್ಷಣ ಮತ್ತು ಜೀವನದ ಬಗ್ಗೆ ಗ್ರಹಿಕೆ ವಿಷಯದ ಕುರಿತು ಕಾರ್ಯಗಾರ
ಕುಂದಾಪುರ(ಮಾ 27): ಇಲ್ಲಿನ ಐ.ಎಂ.ಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಕಾಮರ್ಸ್ ಮೂಡ್ಲಕಟ್ಟೆಯಲ್ಲಿ ‘ಶಿಕ್ಷಣ ಮತ್ತು ಜೀವನದ ಬಗ್ಗೆ ಗ್ರಹಿಕೆ’ ಎಂಬ ವಿಷಯದ ಕುರಿತು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಐ. ಎಂ. ಜೆ. ವಿದ್ಯಾ ಸಂಸ್ಥೆಗಳ ನಿರ್ದೇಶಕರಾದ ಪ್ರೊIದೋಮ ಚಂದ್ರಶೇಖರ್ ಅವರು ವಿಷಯದ ಕುರಿತು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. “ವೇಗವಾಗಿ ಬೆಳೆಯುತ್ತಿರುವ ಸ್ಪರ್ಧಾತ್ಮಕ ಪ್ರಪಂಚಕ್ಕೆ ವಿದ್ಯಾರ್ಥಿಗಳು ಅಣಿಯಾಗುತ್ತಿರುವ ನಿಟ್ಟಿನಲ್ಲಿ ವಿದ್ಯಾರ್ಥಿ ಜೀವನದಲ್ಲಿ ತೊಡಗಿಸಿಕೊಳ್ಳಬಹುದಾದ ವಿಷಯದ ಕುರಿತು ಮಾತನಾಡುತ್ತಾ, […]
ಮೂಡ್ಲಕಟ್ಟೆ:ವಿದ್ಯಾ ಅಕಾಡೆಮಿ ಸ್ಕೂಲ್ ವಾರ್ಷಿಕೋತ್ಸವ
ಮೂಡ್ಲಕಟ್ಟೆ(ಮಾ.27): ಇಲ್ಲಿನ ವಿದ್ಯಾ ಅಕಾಡೆಮಿ ಸ್ಕೂಲಿನ ವಾರ್ಷಿಕೋತ್ಸವವು ಇತ್ತಿಚಿಗೆ ಶಾಲೆಯ ಆವರಣದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಕುಂದಾಪುರದ ಹೆಮ್ಮಾಡಿಯ ಲಕ್ಷ್ಯ ಕ್ಲಿನಿಕ್ ವೈದ್ಯರಾಗಿರುವ ಅಮ್ಮಾಜಿ ಪಿ ಅವರು ಮುಖ್ಯ ಅಥಿತಿಯಾಗಿ ಆಗಮಿಸಿದ್ದರು. ಶಾಲಾ ವಾರ್ಷಿಕೋತ್ಸವವು ಎಳೆಯರಿಗೆ ಜೀವನ ಪರ್ಯಂತ ಸ್ಮರಣೀಯ ಕ್ಷಣಗಳನ್ನು ನೀಡುವ ಅತ್ಯಂತ ಮಹತ್ವದ ದಿನ,ಶಾಲೆಯು ಮಕ್ಕಳಿಗೆ ಮನೆಯ ವಾತಾವರಣದ ಹೊರತಾಗಿ ಹೊರಗಿನ ವಾತಾವರಣವನ್ನು ಅರಿತುಕೋಳ್ಳಲು ಬಹಳ ಸಹಾಯವಾಗುತ್ತದೆ. ವಿದ್ಯಾರ್ಥಿಗಳ ಉನ್ನತಿಯನ್ನೆ ಧೈರ್ಯವಾಗಿಟ್ಟುಕೊಂಡು ಶಾಲೆಯು ಮುನ್ನಡೆಯುತ್ತಿರುವುದು ಪ್ರಶಂಸನೀಯ […]
ಎಕ್ಸಲೆಂಟ್ ಪ್ರೌಢಶಾಲೆ ಸುಣ್ಣಾರಿ: ಬೀಳ್ಕೊಡುಗೆ ಸಮಾರಂಭ
ಕೋಟೇಶ್ವರ (ಮಾ.27): ಮೌಲ್ಯಯುತ, ಪಠ್ಯ ಪಠ್ಯೇತರ ರಂಗದಲ್ಲಿಯೂ ಶಿಸ್ತುಬದ್ದ ಶಿಕ್ಷಣವನ್ನು ನೀಡಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ದಾರಿದೀಪವಾಗಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗೆ ಪೂರಕವಾಗುವಂತಹ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಒಂದಾದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಇತ್ತೀಚೆಗೆ ನಡೆಯಿತು. ಸುಜ್ಞಾನ ಎಜುಕೇಶನ್ ಟ್ರಸ್ಟ ನ ಅಧ್ಯಕ್ಷರಾದ ಶ್ರಿ ರಮೇಶ್ ಶೆಟ್ಟಿಯವರು ಸಮಾರಂಭದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ “ವಿದ್ಯಾರ್ಥಿಗಳು ಪರೀಕ್ಷೆಯ […]
ನೊಂದವರ ನೋವುಗಳನ್ನು ಅರ್ಥ ಮಾಡಿಕೊಳ್ಳಬೇಕಾದುದ್ದು ಸಂಘ ಸಂಸ್ಥೆಗಳ ಜವಾಬ್ದಾರಿ- ಡಾ. ಅಂಪಾರು ನಿತ್ಯಾನಂದ ಶೆಟ್ಟಿ
ಕುಂದಾಪುರ (ಮಾ, 22): ಸಮಾಜದಲ್ಲಿ ಒಂದಷ್ಟು ಜನ ಬೇರೆ ಬೇರೆ ಕಾರಣಗಳಿಂದ ನೋವನ್ನು ಅನುಭವಿಸುತ್ತಿರುತ್ತಾರೆ. ಅಂತವರ ನೋವಿಗೆ ಕಾರಣವಾದ ಸಂಗತಿಯನ್ನು ಅರ್ಥ ಮಾಡಿಕೊಂಡು ಅವರಿಗೆ ಸ್ವಾಂತನದ ಹಿತ ಮಾತುಗಳನ್ನು ಹೇಳಿ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಸಂಘ ಸಂಸ್ಥೆಗಳು ಮಾಡಬೇಕಾಗಿದೆ. ನೊಂದವರ ನೋವುಗಳನ್ನು ಸಾಕ್ಷಿ ಇಲ್ಲದೆ ಅರ್ಥ ಮಾಡಿಕೊಳ್ಳುವುದು ಸಂಘ-ಸಂಸ್ಥೆಗಳ ಬಹುದೊಡ್ಡ ಜವಾಬ್ದಾರಿ ಕೂಡ ಆಗಿದೆ ಎಂದು ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ […]
ಶ್ರೀ ಬಗ್ವಾಡಿ: ಮಹಿಷಾಸುರ ಮರ್ದಿನಿ ದೇವಸ್ಥಾನ: ಮಾರ್ಚ್ 25,26 ರಂದು ನೂತನ ನಾಗದೇವರು ಹಾಗೂ ಪರಿವಾರ ದೇವರುಗಳ ಪ್ರತಿಷ್ಠಾಪನಾ ಕಾರ್ಯಕ್ರಮ
ಹೆಮ್ಮಾಡಿ (ಮಾ.23): ಉಡುಪಿ ಜಿಲ್ಲೆಯ ಪ್ರಮುಖ ಪೌರಾಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಬಗ್ವಾಡಿಯ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದ ಕ್ಷೇತ್ರದ ವಠಾರದಲ್ಲಿ ಮಾರ್ಚ್ 25 ಹಾಗೂ 26ರಂದು ನೂತನವಾಗಿ ನಿರ್ಮಿಸಲಾಗಿರುವ ಶ್ರೀ ನಾಗ ದೇವರು ಮತ್ತು ಪರಿವಾರ ದೇವರುಗಳ ಪ್ರತಿಷ್ಠಾಪನ ಕಾರ್ಯಕ್ರಮ ನೆರವೇರಲಿದೆ. ಮಾರ್ಚ್ ,25 ರಂದು ವಿದ್ವಾನ್ ಕೋಟ ಚಂದ್ರಶೇಖರ ಸೋಮಯಾಜಿ ಯವರ ನೇತೃತ್ವದಲ್ಲಿ ವಿವಿಧ ಪೂಜಾಧಿ ಕಾರ್ಯಕ್ರಮ ಹಾಗೂ ಮಾರ್ಚ್, 26 ಶುಭ ಲಗ್ನ ಸುಮೂರ್ತದಲ್ಲಿ […]