ಕುಂದಾಪುರ(ಮಾ.,08): ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಕುಂದಾಪುರ ಸಿಟಿ ಜೆಸಿಐ ಹಾಗೂ ಕಾಲೇಜಿನ ಎನ್.ಎಸ್.ಎಸ್. ಘಟಕ, ಮಹಿಳಾ ಸಬಲೀಕರಣ ಘಟಕದ ಆಶ್ರಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಾದ ಶರ್ಮಿಳಾ ಬುತೆಲ್ಲೋ (ಉದ್ಯಮ ಕ್ಷೇತ್ರ), ಜ್ಯೋತಿ (ಕೃಷಿ ಮತ್ತು ಹೈನುಗಾರಿಕೆ), ಶ್ರೀನಿಧಿ ಖಾರ್ವಿ(ಸಾಂಸ್ಕೃತಿಕ), ಅಂಕಿತಾ ಸಿ. ಶೇಟ್ (ಬಹುಮುಖ ಪ್ರತಿಭೆ), ಪ್ರತೀಕ್ಷಾ (ಶೈಕ್ಷಣಿಕ), ದಿವ್ಯಾ (ಕ್ರೀಡೆ) ಇವರನ್ನು ಸನ್ಮಾನಿಸಲಾಯಿತು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ […]
Month: March 2023
ವಂಡ್ಸೆ: ಕಂದಾಯ ಇಲಾಖೆಯ ವಿವಿಧ ಸವಲತ್ತು ವಿತರಿಸಿದ ಶಾಸಕ ಶ್ರೀ ಬಿ .ಎಂ ಸುಕುಮಾರ್ ಶೆಟ್ಟಿ
ವಂಡ್ಸೆ(ಮಾ,08): ಕಂದಾಯ ಇಲಾಖೆಯ ವಿವಿಧ ಸವಲತ್ತು ವಿತರಣಾ ಕಾರ್ಯಕ್ರಮವು ವಂಡ್ಸೆಯ ಮಹಾತ್ಮ ಗಾಂಧಿ ಸಭಾಭವನದಲ್ಲಿ ಮಾರ್ಚ್ 08 ರಂದು ನಡೆಯಿತು.ಬೈಂದೂರು ಶಾಸಕರಾದ ಶ್ರೀ ಬಿ .ಎಂ ಸುಕುಮಾರ್ ಶೆಟ್ಟಿ ಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿವಿವಿಧ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಿದರು. ಕ್ಷೇತ್ರದ ಪ್ರತಿಯೊಬ್ಬ ನಾಗರಿಕನಿಗೂ ಮೂಲಭೂತ ಸೌಕರ್ಯಗಳನ್ನು ನೀಡಬೇಕು.ರಸ್ತೆ ಕಾಮಗಾರಿ, ಬೆಳಕು ಯೋಜನೆ, ಕುಡಿಯುವ ನೀರಿನ ವ್ಯವಸ್ಥೆ,94ಸಿ ಹಕ್ಕು ಪತ್ರ , ಏತ ನೀರಾವರಿ ಯೋಜನೆ ಮತ್ತಿತರ ಹಲವು ಯೋಜನೆ ಗಳು ತನ್ನ […]
ಆಕೆ ಹೆಣ್ಣಲ್ಲ…. ಜಗನ್ಮಾತೆ….
ಜಗತ್ತೀನ ಬಹುತೇಕ ರಾಷ್ಟ್ರಗಳಲ್ಲಿ ಮಹಿಳೆಯರಿಗೆ ಪುರುಷರಷ್ಟೇ ಸಮಾನ ಹಕ್ಕು ನೀಡಬೇಕು, ಮಹಿಳೆಯನ್ನು ಪುರುಷರಿಗೆ ಸರಿಸಮನಾಗಿ ನೋಡಿ, ಆಕೆ ಯಾವುದರಲ್ಲೂ ಪುರುಷರಿಗಿಂತ ಕಡಿಮೆ ಇಲ್ಲ, ಪುರುಷರಷ್ಟೇ ಮಹಿಳೆಯರು ಸಮರ್ಥರು ಅವರ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಕಸಿದುಕೊಳ್ಳಬೇಡಿ ಎನ್ನುವ ಕೂಗು ಕೇಳಿಬರುತ್ತಿದೆ. ಆದರೆ ನಮ್ಮ ಸನಾತನ ಧರ್ಮ ಮತ್ತು ಸಂಸ್ಕ್ರತಿಯಲ್ಲಿ ಶತ -ಶತಮಾನಗಳ ಹಿಂದೆಯೇ ಮಹಿಳೆಯನ್ನು ಪುರುಷರಿಗಿಂತ ಉನ್ನತ ಸ್ಥಾನ ನೀಡಿರುವುದು ಈ ಮಾನವ ಜಗತ್ತಿಗೆ ಗೊತ್ತೇ ಇಲ್ಲ. ವೇದಗಳ ಮೊದಲನೇ ಮಂತ್ರ […]
ಉಡುಪಿ: ಎಂಜಿಎಂ ಕಾಲೇಜಿಗೆ ಎರಡು ರ್ಯಾಂಕ್
ಉಡುಪಿ( ಮಾ.07): : ಇಲ್ಲಿನ ಎಂಜಿಎಂ ಪದವಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು 2021-22 ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಪದವಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದಿರುತ್ತಾರೆ. ತೃತೀಯ ಬಿ.ಸಿ.ಎ. ವಿದ್ಯಾರ್ಥಿನಿ ಪೂಜಾ ಆರ್. 96.34% ಅಂಕಗಳೊಂದಿಗೆ ತೃತೀಯ ರ್ಯಾಂಕ್ , ತೃತೀಯ ಬಿ.ಎ. ವಿದ್ಯಾರ್ಥಿನಿ ಚಿನ್ಮಯಿ 85.18% ಅಂಕಗಳೊಂದಿಗೆ ಹತ್ತನೇ ರ್ಯಾಂಕ್ ಪಡೆದಿರುತ್ತಾರೆ ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪುರ : ಉಚಿತ ಮೂಳೆ ಸಾಂದ್ರತೆ ಹಾಗೂ ವೈದ್ಯಕೀಯ ತಪಾಸಣೆ ಶಿಬಿರ
ಕುಂದಾಪುರ(ಮಾ.06): ಶಿವಾನಿ ಡಯಾಗ್ನೋಸ್ಟಿಕ್ & ರಿಸರ್ಚ್ ಸೆಂಟರ್, ನವ್ಯ ಚೇತನ ಶಿಕ್ಷಣ ಸಂಶೋಧನೆ ಮತ್ತು ಕಲ್ಯಾಣ ಟ್ರಸ್ಟ್, ಲಯನ್ಸ್ ಕ್ಲಬ್ ಕುಂದಾಪುರ ಮತ್ತು ಫಾರ್ಮೆಡ್ ಲಿಮಿಟೆಡ್ ಬೆಂಗಳೂರು, ಇವರ ಜಂಟಿ ಆಶ್ರಯದಲ್ಲಿ ಉಚಿತ ಮೂಳೆ ಸಾಂದ್ರತೆ ಮತ್ತು ವೈದ್ಯಕೀಯ ತಪಾಸಣೆ ಶಿಬಿರ ಇಂದು ಕುಂದಾಪುರದ ಶಿವಾನಿ ಡಯಾಗ್ನೋಸ್ಟಿಕ್ ಆವರಣದಲ್ಲಿ ನಡೆಯಿತು. ಶ್ರೀದೇವಿ ನರ್ಸಿಂಗ್ ಹೋಮ್ ಕುಂದಾಪುರದ ರ್ದೇಶಕರಾದ ಡಾ. ರವೀಂದ್ರ ರಾವ್ ರವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಇಂತಹ ಆರೋಗ್ಯ […]
ಗಾಯಕ ಡಾ.ಗಣೇಶ್ ಗಂಗೊಳ್ಳಿ ಯವರಿಗೆ ಕರ್ನಾಟಕ ಯುವ ರತ್ನ ರಾಜ್ಯ ಪ್ರಶಸ್ತಿ
ಉಡುಪಿ (ಮಾ.06): ಶ್ರೀ ವಿಶ್ವನಾಥ ದೇವಾಲಯ ಮೂಲ್ಕಿ ಇಲ್ಲಿ ಏರ್ಪಡಿಸಿದ 13 ನೆ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಶ್ರೀ ವಿದ್ಯಾಲಯ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ , ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು , ಪುನರೂರು ಪ್ರತಿಷ್ಠಾನ ಹಾಗೂ ಪುನರೂರು ಡೇಕಾರೇಟ್ ಇವರ ಸಂಯುಕ್ತ ಆಶ್ರಯದಲ್ಲಿ ನಾಡಿನ ಪ್ರಸಿದ್ಧ ಗಾಯಕ ಹಾಗೂ ಸಂಘಟಕರಾದ ಡಾ.ಗಣೇಶ್ ಗಂಗೊಳ್ಳಿ ಯವರಿಗೆ […]
ಗರ್ಭಪೀಠದಿಂದ ಮರಣಪೀಠದೆಡೆಗೆ…
ಗರ್ಭಪೀಠದಿಂದ ಮರಣಪೀಠದೆಡೆಗೆ ಸಾಗುವ ಮಾನವನ ಬದುಕನ್ನು ಕೆದುಕಿದಾಗ ನಡುಕ ಹುಟ್ಟಿಸುವ ನಿಗೂಢತೆ ಅಡಕವಾಗಿರುವುದು ಗೋಚರಿಸದಿರದು. ಸೃಷ್ಠಿಯ ಪ್ರೇಮಾಂಕುರದ ಪರಾಕಾಷ್ಠೆಯಲ್ಲಿ ಹೊರಬರುತ್ತಲೇ ಗರ್ಭಕೋಶದಲ್ಲಿ ತನ್ನ ಆಸ್ತಿತ್ವಕ್ಕಾಗಿ ಜೀವಾಣುರೂಪದಲ್ಲೇ ಕಾದಾಡುವ ಪರಿ ಕೌತುಕವಾದುದು. ಸಾವಿರ ಸಂಖ್ಯೆಯ ಸಹವರ್ತಿಗಳೊಡನೆ ಅಂಜದೆ ಅಳುಕದೆ ಕಾದಾಡಿ ಜಯಸಿದ ಶುಕ್ಲವೊಂದು ಶೋಣಿತದೊಂದಿಗೆ ಒಂದಾಗಿ ಗರ್ಭ ಪೀಠದಲ್ಲಿ ಸ್ಥಿತವಾಗಿ ಬೆಳೆದು ಹೊರ ಬರುವ ಮಾನವನ ಜನನವೇ ಚಿತ್ರ-ವಿಚಿತ್ರವಾದುದು. ಗರ್ಭಲೋಕದಲ್ಲಿ ಅಂತರ್ಮುಖಿಯಾಗಿ ಸೃಷ್ಟಿಯ ಪರಿಪೂರ್ಣತೆಯನ್ನು ಸಿದ್ದಿಸಿಕೊಂಡು ಹೊರಜಗತ್ತಿಗೆ ದೃಷ್ಟಿ ಹಾಯಿಸುವ ಮನವ […]
ಟ್ರಿಪಲ್ ಜಂಪ್ ಸ್ಪರ್ಧೆ: ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕುಂದಾಪುರದ ಪ್ರಶಾಂತ್ ಶೆಟ್ಟಿ ಮೊರ್ಟು
ಕುಂದಾಪುರ( ಮಾ.04): 42 ನೇ ರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ನ ಟ್ರಿಪಲ್ ಜಂಪ್ ಸ್ಪರ್ಧೆಗೆ ಕುಂದಾಪುರದ ಪ್ರಶಾಂತ್ ಶೆಟ್ಟಿ ಮೊರ್ಟುರವರು ಆಯ್ಕೆಯಾಗಿದ್ದಾರೆ.ಇದೇ ಮಾರ್ಚ್ 27 ರಿಂದ 30 ತನಕ ಬೆಂಗಳೂರಿನ ಕಂಠೀರವ ಸ್ಟೆಂಡಿಯಂನಲ್ಲಿ ನಡೆಯಲಿರುವ ರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ನ ಟ್ರಿಪಲ್ ಜಂಪ್ ಸ್ಪರ್ಧೆಗೆ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಕುಂದಾಪುರದ ಓಕ್ ವುಡ್ ಇಂಡಿಯನ್ ಸ್ಕೂಲ್ ಇದರ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಇವರು ಕುಂದಾಪುರ ಟ್ರ್ಯಾಕ್ & ಫಿಲ್ಡ್ ಅಥ್ಲೆಟಿಕ್ […]
ಡಾ.ಗಣೇಶ್ ಗಂಗೊಳ್ಳಿಯವರಿಗೆ ಸನ್ಮಾನ
ಗಂಗೊಳ್ಳಿ(ಮಾ.05): ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು ಗಂಗೊಳ್ಳಿ ಇದರ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ನಾಡಗೀತೆ ಮತ್ತು ರೈತ ಗೀತೆ ಹಾಗೂ ಇತರ ಹಾಡುಗಳನ್ನು ಹಾಡಲು ಅತ್ಯುತ್ತಮ ರೀತಿಯಲ್ಲಿ ತರಬೇತಿ ನೀಡಿದ ಗಾಯಕ ಹಾಗೂ ಸಂಘಟಕ ಡಾ.ಗಣೇಶ್ ಗಂಗೊಳ್ಳಿ ಅವರಿಗೆ ಸಂಸ್ಥೆಯ ವತಿಯಿಂದ ಮಾ.04 ರಂದು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಶ್ರೀ ಉಮೇಶ್ ಕಾರ್ಣಿಕ್ , ಶ್ರೀ ರಾಘವೇಂದ್ರ , ಹಾಗೂ ಸಹ ಶಿಕ್ಷಕರಾದ ಶ್ರೀ ಗೋಪಾಲ್ ,ಶ್ರೀಮತಿ […]
ಕರಾಟೆ ಕ್ಷೇತ್ರದ ಸಾಧಕ ಪ್ರತಿಭೆ ಶ್ರೀಶ ಗುಡ್ರಿಯನ್ನು ಅಭಿನಂದಿಸಿದ ಶಾಸಕ ಬಿ .ಎಂ ಸುಕುಮಾರ್ ಶೆಟ್ಟಿ
ವoಡ್ಸೆ(ಮಾ.05): ಕರಾಟೆ ಕ್ಷೇತ್ರದಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಯುವ ಪ್ರತಿಭೆ ಶ್ರೀಶ ಗುಡ್ರಿ ಯವರನ್ನು ಬೈoದೂರಿನ ಶಾಸಕರಾದ ಶ್ರೀ ಬಿ ಎಂ ಸುಕುಮಾರ್ ಶೆಟ್ಟಿ ಇವರು ಅಭಿನಂದಿಸಿ ಗೌರವಿಸಿದರು. ಯುವಕನ ಸಾಧನೆಯನ್ನು ಪ್ರಶoಸಿಸಿದ ಶಾಸಕರು ತಾಯಿ ಮೂಕಾಂಬಿಕೆಯ ಆಶೀರ್ವಾದದೊಂದಿಗೆ ಇನ್ನಷ್ಟು ಸಾಧನೆ ಮಾಡಲು ಶುಭ ಹಾರೈಸಿದರು.