ಉಡುಪಿ( ಮಾ.07): : ಇಲ್ಲಿನ ಎಂಜಿಎಂ ಪದವಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು 2021-22 ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಪದವಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದಿರುತ್ತಾರೆ.
ತೃತೀಯ ಬಿ.ಸಿ.ಎ. ವಿದ್ಯಾರ್ಥಿನಿ ಪೂಜಾ ಆರ್. 96.34% ಅಂಕಗಳೊಂದಿಗೆ ತೃತೀಯ ರ್ಯಾಂಕ್ , ತೃತೀಯ ಬಿ.ಎ. ವಿದ್ಯಾರ್ಥಿನಿ ಚಿನ್ಮಯಿ 85.18% ಅಂಕಗಳೊಂದಿಗೆ ಹತ್ತನೇ ರ್ಯಾಂಕ್ ಪಡೆದಿರುತ್ತಾರೆ ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.