ಇತ್ತೀಚಿನ ದಿನದಲ್ಲಿ ಸರಕಾರಿ ಪದವಿ ಪೂರ್ವ ಹೊಸಂಗಡಿ ತನ್ನ ಹೊಸ ಛಾಪನ್ನು ಮೂಡಿಸುತ್ತಿದೆ. ಯಾವುದೇ ಖಾಸಗಿ ಕಾಲೇಜುಗಳಿಗಿಂತ ಕಡಿಮೆ ಇಲ್ಲದ ಹಾಗೆ ಸರಕಾರಿ ಪದವಿಪೂರ್ವ ಕಾಲೇಜು ಜನರ ಮನೆ ಮಾತಾಗಿದೆ. ಇಲ್ಲಿರುವಂತಹ ಕಲಾ ,ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಲ್ಲಿ ನಿರಂತರವಾಗಿರುವ ಉತ್ತಮವಾದ ಫಲಿತಾಂಶ ಹಾಗೂ ಅತ್ಯುತ್ತಮ ಬೋಧನೆ ಹಾಗೂ ಬೋಧನಾ ವಿಧಾನಗಳು, ಶಿಸ್ತು ಹಾಗೂ ನಿಯಮ ಪಾಲನೆ, ಸುಸಜ್ಜಿತವಾಗಿರುವಂತಹ ಸುಂದರವಾಗಿರುವಂತಹ ಕಟ್ಟಡ , ಅತ್ಯುತ್ತಮ ಉಪನ್ಯಾಸಕ ವೃಂದ ,ಕಲಿಕೆಯಲ್ಲಿ ಮುಂದಿರುವ […]
Day: April 19, 2023
ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್ ಮೂಡ್ಲಕಟ್ಟೆ :ಯುವ ರೆಡ್ ಕ್ರಾಸ್ ಘಟಕ ಉದ್ಘಾಟನೆ
ಕುಂದಾಪುರ:(ಏ:18): ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್ ಮೂಡ್ಲಕಟ್ಟೆ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕದ ಉದ್ಘಾಟನೆಯನ್ನು ಭಾರತೀಯ ರೆಡ್ ಕ್ರಾಸ್ ಘಟಕ ಕುಂದಾಪುರ ಇದರ ಅಧ್ಯಕ್ಷರಾದ ಶ್ರೀಯುತ ಜಯಕರ್ ಶೆಟ್ಟಿಯವರು ನೆರವೇರಿಸಿ, ಪ್ರತಿಯೊಂದು ಕಾಲೇಜುಗಳಲ್ಲಿ ಯುವ ರೆಡ್ ಕ್ರಾಸ್ ಘಟಕಗಳು ಪ್ರಾರಂಭಗೊಳ್ಳಬೇಕು ಎಂದರು . ಮಾನವೀಯತೆಯ ನೆಲೆಯಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವಂತಹದ್ದು, “ಯಾವುದೇ ಜಾತಿ, ಮತ, ಧರ್ಮ ಭೇದವಿಲ್ಲದೆ ಯಾರು ಕಷ್ಟದಲ್ಲಿ ಇರುತ್ತಾರೆಯೋ ಅಂತವರಿಗೆ ಸಹಾಯ ಮಾಡುವುದು ರೆಡ್ ಕ್ರಾಸ್ ಸಂಸ್ಥೆಯ ಮುಖ್ಯ ಉದ್ದೇಶ” ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಯುವ ರೆಡ್ ಕ್ರಾಸ್ ಕುಂದಾಪುರ ಇದರ ಸಂಯೋಜಕರಾದ ಶ್ರೀಯುತ ಸತ್ಯನಾರಾಯಣ್ ಪುರಾಣಿಕ್ ಇವರು ಪ್ರತಿಜ್ಞಾವಿಧಿಯನ್ನು ವಿದ್ಯಾರ್ಥಿಗಳ ಸಮ್ಮುಖದಲ್ಲಿ ನೆರವೇರಿಸಿದರು. ಹಾಗೆಯೇ […]
ಗಂಗೊಳ್ಳಿ ಪ್ರಬಂಧ ಸ್ಪರ್ಧೆ ಫಲಿತಾಂಶ
ಗಂಗೊಳ್ಳಿ( ಎ,17): ಡಾ.ಬಿ.ಆರ್ ಅಂಬೇಡ್ಕರ್ ಯುವಕ ಮಂಡಲ(ರಿ),ಅಮೃತಾ ಯುವತಿ ಮಂಡಲ (ರಿ) ಮತ್ತು ಅರ್ಚನಾ ಮಹಿಳಾ ಮಂಡಲ ಮೇಲ್ ಗಂಗೊಳ್ಳಿ. ಗಂಗೊಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ 132ನೇ ಜನ್ಮ ದಿನಾಚರಣೆಯ ಪ್ರಯುಕ್ತ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ನನ್ನ ಅರಿವಿನ ಅಂಬೇಡ್ಕರ್ ವಿಷಯದ ಕುರಿತಾದ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ. ಕುಂದಾಪುರದ ಡಾ. ಬಿ […]
ಜಗತ್ತು ವಿಶೇಷ ಪ್ರತಿಭೆಗಳನ್ನು ಗುರುತಿಸುತ್ತದೆ-ಜೆಸಿಐ ರಾಷ್ಟ್ರೀಯ ತರಬೇತುದಾರ ಕೆ. ರಾಜೇಂದ್ರ ಭಟ್
ಕಾರ್ಕಳ (ಎ,19): ವಿಶೇಷ ಪರಿಶ್ರಮದಿಂದ ಕೂಡಿದ ಪ್ರಯತ್ನ ಯಶಸ್ಸನ್ನು ದೊರಕಿಸಿಕೊಡುತ್ತದೆ. ತನ್ಮೂಲಕ ವಿಶ್ವವ್ಯಾಪಿಯನ್ನಾಗಿಸಿ ಪ್ರಪಂಚವನ್ನು ಆಳಲು ತೊಡಗುತ್ತದೆ. ಆದ್ದರಿಂದ ಕ್ರಿಯಾಶೀಲತೆಯೇ ಇಂದಿನ ವಿದ್ಯಾರ್ಥಿಗಳಿಗೆಪ್ರೇರಣೆಯಾಗಲಿ ಎಂದು ಜೆಸಿಐ ರಾಷ್ಟ್ರೀಯ ತರಬೇತುದಾರ,ಖ್ಯಾತ ವಾಗ್ಮಿ ಕೆ. ರಾಜೇಂದ್ರ ಭಟ್ ನುಡಿದರು. ಅವರು ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಾಹಿತ್ಯ ಸಾಂಗತ್ಯ ಸರಣಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು. ಸಾಧನೆಯ ಕಡೆಗೆ ತುಡಿತ, ಅವಕಾಶವನ್ನು ಸೃಷ್ಟಿಸುವುದು ನಮ್ಮ ಗುರಿಯಾಗಬೇಕೆಂದು ಕರೆ ನೀಡಿದರು. […]
ಡಾ| ಬಿ.ಬಿ.ಹೆಗ್ಡೆ ಕಾಲೇಜು:‘ವಿ-ಗ್ರೋ’ ಬ್ಯುಸಿನೆಸ್ ಡೇ – ವ್ಯವಹಾರ ಯೋಜನೆ ಪ್ರಸ್ತುತಿ
ಕುಂದಾಪುರ, (ಏ, 17) : ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಕೌಶಲ್ಯ ಬೆಳೆಸುವ ಉದ್ಧೇಶದಿಂದ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗವು ಆಯೋಜಿಸಿರುವ ‘ವಿ-ಗ್ರೋ’ ಬ್ಯುಸಿನೆಸ್ ಡೇ ಇದರ ಮೊದಲನೇ ಹಂತದ ವ್ಯವಹಾರ ಯೋಜನೆ ಪ್ರಸ್ತುತಿ ಕಾರ್ಯಕ್ರಮ ನೆರವೇರಿತು. ವಿದ್ಯಾರ್ಥಿಗಳು ತಮ್ಮಲ್ಲಿರುವ ವ್ಯವಹಾರ ಜ್ಞಾನವನ್ನು, ಹೊಸ ಹೊಸ ಕ್ರಿಯಾ ಯೋಜನೆ ಮತ್ತು ಯೋಚನೆಯನ್ನು ಪ್ರಸ್ತುತ ಪಡಿಸುವ ಮೂಲಕ, ಕೌಶಲ್ಯ ಅಭಿವೃದ್ಧಿಗೆ ಇದೊಂದು ಸೂಕ್ತ […]