ಇತ್ತೀಚಿನ ದಿನದಲ್ಲಿ ಸರಕಾರಿ ಪದವಿ ಪೂರ್ವ ಹೊಸಂಗಡಿ ತನ್ನ ಹೊಸ ಛಾಪನ್ನು ಮೂಡಿಸುತ್ತಿದೆ. ಯಾವುದೇ ಖಾಸಗಿ ಕಾಲೇಜುಗಳಿಗಿಂತ ಕಡಿಮೆ ಇಲ್ಲದ ಹಾಗೆ ಸರಕಾರಿ ಪದವಿಪೂರ್ವ ಕಾಲೇಜು ಜನರ ಮನೆ ಮಾತಾಗಿದೆ.
ಇಲ್ಲಿರುವಂತಹ ಕಲಾ ,ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಲ್ಲಿ ನಿರಂತರವಾಗಿರುವ ಉತ್ತಮವಾದ ಫಲಿತಾಂಶ ಹಾಗೂ ಅತ್ಯುತ್ತಮ ಬೋಧನೆ ಹಾಗೂ ಬೋಧನಾ ವಿಧಾನಗಳು, ಶಿಸ್ತು ಹಾಗೂ ನಿಯಮ ಪಾಲನೆ, ಸುಸಜ್ಜಿತವಾಗಿರುವಂತಹ ಸುಂದರವಾಗಿರುವಂತಹ ಕಟ್ಟಡ , ಅತ್ಯುತ್ತಮ ಉಪನ್ಯಾಸಕ ವೃಂದ ,ಕಲಿಕೆಯಲ್ಲಿ ಮುಂದಿರುವ ವ್ಯಕ್ತಿಗಳ ಸಾಮರ್ಥ್ಯಕ್ಕೆ ಬೇಕಾಗಿರುವಂತಹ ಸವಾಲುಗಳು ಮಾರ್ಗದರ್ಶನಗಳು ಹಾಗು ಸೌಲಭ್ಯಗಳು, ಕಲಿಕೆಯಲ್ಲಿ ಹಿಂದಿರುವಂತಹ ವ್ಯಕ್ತಿಗಳ ಬಗ್ಗೆ ವಿಶೇಷ ವೈಯಕ್ತಿಕ ಕಾಳಜಿ, ಪೋಷಕರೊಂದಿಗೆ ನಿರಂತರ ಹಾಗೂ ನೇರ ಸಂಪರ್ಕ ಹಾಗೂ ವಿದ್ಯಾರ್ಥಿಗಳ ಶಿಕ್ಷಣದ ಪ್ರಗತಿಯ ಬಗ್ಗೆ ಚರ್ಚೆ, ಅದರೊಂದಿಗೆ ವಿನೂತನವಾಗಿರುವಂತಹ ಯೋಜನೆಗಳು, ಉಚಿತ ಹಾಗೂ ಅತ್ಯುತ್ತಮ ಸಿಇಟಿ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ, ಉಚಿತ ಕಂಪ್ಯೂಟರ್ ಶಿಕ್ಷಣ, ಪುಸ್ತಕ ಭಂಡಾರ, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಯೋಗಾಲಯ, CET ಹಾಗೂ ಇತರ ಪರೀಕ್ಷೆಗಳಿಗೆ ಅನುಕೂಲವಾಗುವಂತಹ ಪುಸ್ತಕಗಳು ನಾಯಕತ್ವ ಗುಣಗಳನ್ನು ಹಾಗೂ ಇನ್ನಿತರ ಮಾನವೀಯ ಮೌಲ್ಯಗಳನ್ನು ಬೆಳೆಸುವಂತಹ ,ಯಶಸ್ವಿ ಎನ್ಎಸ್ಎಸ್ ಘಟಕ,ಸಾಂಸ್ಕೃತಿಕ ಸಂಘಗಳು ಪ್ರಜಾಪ್ರಭುತ್ವ ಮಾದರಿಯನ್ನ ಪರಿಚಯಿಸುವ ಉದ್ದೇಶದಿಂದ *ಚುನಾವಣೆ ಹಾಗೂ ಮಂತ್ರಿಮಂಡಲ* ಹೀಗೆ ಹೇಳುತ್ತಾ ಹೋದಷ್ಟು ಸಾಧನೆಗಳು ಬೆಳೆಯುತ್ತಾ ಹೋಗುತ್ತಿದೆ.
ಈ ಕಾಲೇಜಿನಿಂದ ಕಲಿತು ಉತ್ತಮ ಅಂಕಗಳನ್ನು ಗಳಿಸಿ ಕಾಲೇಜಿಂದ ಹೊರಹೋದಂತಹ ವಿದ್ಯಾರ್ಥಿಗಳು ನಮ್ಮ ಕಾಲೇಜಿನ ಬಗ್ಗೆ ತೋರಿಸುತ್ತಿರುವಂತಹ ಪ್ರೀತಿ ಹಾಗೂ ಕಾಳಜಿ ನಮ್ಮ ಕಾಲೇಜಿನ ಶ್ರೇಷ್ಠತೆಯನ್ನು ಸಾರುತ್ತಿದೆ. ಸಕ್ರಿಯವಾಗಿರುವಂತಹ ಹಳೆ ವಿದ್ಯಾರ್ಥಿ ಸಂಘ. ರಜತ ಮಹೋತ್ಸವ ಸಮಿತಿ ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿ ಇವೆಲ್ಲವೂ ಕೂಡ ಕಾಲೇಜಿನ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುತ್ತಾರೆ .
ಕಾಲೇಜಿಗೆ ಇಲಾಖೆಯಿಂದ ಲಭ್ಯವಾಗಿರುವಂತಹ 35 ಹೊಸ ಡೆಸ್ಕುಗಳು ವಿದ್ಯಾರ್ಥಿಗಳ ಎಲ್ಲ ಕೊರತೆಯನ್ನು ನೀಗಿಸಿರುತ್ತದೆ . ಇಷ್ಟೆಲ್ಲ ಸೌಲಭ್ಯಗಳನ್ನು ಹೊಂದಿರುವಂತಹ ಸರಕಾರಿ ಪದವಿಪೂರ್ವ ಕಾಲೇಜು ಖಾಸಗಿ ಕಾಲೇಜನ್ನ ಮೀರಿ ಮುಂದುವರಿಯುತ್ತಿರುವುದು ಬಹುಶ ಎಲ್ಲರ ಗಮನಕ್ಕೆ ಬಂದಿರುತ್ತದೆ. ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವನ್ನು ಕಲ್ಪಿಸುತ್ತಿದೆ.
ಅತಿ ಅತಿ ಕಡಿಮೆ ಖರ್ಚಿನಲ್ಲಿ ಯಾವುದೇ ಹೊರೆಯಾಗದ ಹಾಗೆ ಅತ್ಯುತ್ತಮ ಮತ್ತು ಉಜ್ವಲ ಭವಿಷ್ಯಕ್ಕೆ ನಾಂದಿ ಹಾಕಿ ಕೊಡುತ್ತಿರುವಂತಹ ಸರಕಾರಿ ಪದವಿಪೂರ್ವ ಕಾಲೇಜು ಹೊಸಂಗಡಿ ಕಾಲೇಜಲ್ಲಿ ಸೇರಲು ಹೆಸರು ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಗೋಪಾಲ್ ಭಟ್ ಪ್ರಾಂಶುಪಾಲರು 9632933032 ಡೆನಿಸ್ ಡಿಸೋಜಾ9482661156 ರಣಜಿತ್ ಕುಮಾರ್ ಶೆಟ್ಟಿ -9844613381 ಅರುಣ್ ಕುಮಾರ್ ಶೆಟ್ಟಿ -9740402992