ಗಂಗೊಳ್ಳಿ(ಜೂ,17): ಡಾ. ಬಿ ಆರ್ ಅಂಬೇಡ್ಕರ್ ಯುವಕ ಮಂಡಲದ ವತಿಯಿಂದ ಮೇಲ್ ಗಂಗೊಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ಮತ್ತು ಕಲಿಕಾ ಪರಿಕರಗಳನ್ನು ಹಾಗು ಇಂಗ್ಲೀಷ್ ಭಾಷಾ ಕಲಿಕೆಯ ಪುಸ್ತಕಗಳನ್ನು ಹಂಚುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ಯುವಕ ಮಂಡಲದ ಸ್ಥಾಪಕಾಧ್ಯಕ್ಷರಾದ ಶ್ರೀ ಭಾಸ್ಕರ್. ಹೆಚ್. ಜಿ, ಎಸ್ ಡಿ ಎಂ ಸಿ ಅಧ್ಯಕ್ಷರಾದ ರಾಘವೇಂದ್ರ ಮತ್ತು ಎಲ್ಲಾ ಸದಸ್ಯರು, […]
Month: June 2023
ಸರಸ್ವತಿ ವಿದ್ಯಾಲಯ ಗಂಗೊಳ್ಳಿ : ಉಪನ್ಯಾಸಕ -ಪೋಷಕರ ಸಮ್ಮಿಲನ ಕಾರ್ಯಕ್ರಮ
ಗಂಗೊಳ್ಳಿ(ಜೂ,17) : ಮಕ್ಕಳ ತಪ್ಪುಗಳನ್ನು ಪ್ರೀತಿಯಿಂದಲೇ ತಿದ್ದುವ ಅಭ್ಯಾಸವನ್ನು ಪೋಷಕರು ಬೆಳೆಸಿಕೊಳ್ಳಬೇಕು. ಮಕ್ಕಳ ಜೊತೆ ನಿರಂತರವಾದ ಉತ್ತಮ ಸಂವಹನ ಮತ್ತು ಸಂಬಂಧವನ್ನು ಕಾಪಿಟ್ಟುಕೊಳ್ಳಬೇಕು ಎಂದು ಬಸ್ರೂರು ಶಾರದ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆ.ರಾಧಾಕೃಷ್ಣ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು,ವಿದ್ಯಾರ್ಥಿಗಳು ಮತ್ತು ಹೆತ್ತವರ ಸಮ್ಮಿಲನ ಕಾರ್ಯಕ್ರಮದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ ಸಿ […]
ಡಾ| ಬಿ.ಬಿ. ಹೆಗ್ಡೆ ಕಾಲೇಜು: ಡಿಮ್ಯಾಟ್ ಅಕೌಂಟ್ ಓಪನಿಂಗ್ ಡ್ರೈವ್
ಕುಂದಾಪುರ,(ಜೂನ್ 17): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ಸ್ಟಾಕ್ ಮಾರ್ಕೆಟ್ ಆಪರೇಷನ್ಸ್ ಸರ್ಟಿಫಿಕೇಟ್ ಕೋರ್ಸ್ ಸಂಯುಕ್ತ ಆಶ್ರಯದಲ್ಲಿ ಡಿಮ್ಯಾಟ್ ಖಾತೆ ತೆರೆಯುವ ಕಾರ್ಯಗಾರ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ ಮಾತನಾಡಿ, ಕಾಲೇಜಿನ ವಿದ್ಯಾರ್ಥಿ ಗಳಿಗೆ ಶಿಕ್ಷಣದ ಜೊತೆಗೆ ಹೂಡಿಕೆಯ ಅರಿವು ಮತ್ತು ಅದರ ಮಹತ್ವ ಅತ್ಯವಶ್ಯಕ ಎಂದು ತಿಳಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ […]
ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು, ಕುಂದಾಪುರ: ಸಿ. ಇ. ಟಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ
ಕುಂದಾಪುರ(ಜೂ,17): ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ.ಇ.ಟಿ 2023 ) ಫಲಿತಾಂಶವು ಗುರುವಾರ ಬಿಡುಗಡೆಯಾಗಿದ್ದು , ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಕುಂದಾಪುರ ಇದರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಕುಂದಾಪುರ ಇಲ್ಲಿನ ವಿದ್ಯಾರ್ಥಿಗಳು ಸಿ.ಇ.ಟಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. ಸಿ.ಇ.ಟಿ 2023 ರ ಪರೀಕ್ಷೆಗೆ ಕುಳಿತ 123 ವಿದ್ಯಾರ್ಥಿಗಳ ಪೈಕಿ, ಲತೀಫಾ ರಫಾ 897 ರ್ಯಾಂಕ್ಗಳೊoದಿಗೆ ಅತ್ಯುತ್ತಮ ಸಾಧನೆಯನ್ನು ತೋರಿದ್ದಾರೆ. […]
ನೀಟ್ ಫಲಿತಾಂಶ ಪ್ರಕಟ: ಕ್ರಿಯೇಟಿವ್ ಪಿ ಯು ಕಾಲೇಜಿನ ಜಾಗೃತಿ ಕೆ ಪಿ ಗೆ ಆಲ್ ಇಂಡಿಯಾ 23 ನೇ ರ್ಯಾಂಕ್
ಕಾರ್ಕಳ(ಜೂ,16): ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸಿದ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಂಸ್ಥೆ ಪ್ರಾರಂಭವಾದ ದ್ವಿತೀಯ ವರ್ಷದಲ್ಲೇ ಅತ್ಯುತ್ತಮ ಫಲಿತಾಂಶ ಗಳಿಸಿದ್ದಾರೆ. ಆಲ್ ಇಂಡಿಯಾ ರ್ಯಾಂಕಿಂಗ್ನಲ್ಲಿ ಕುಮಾರಿ ಜಾಗೃತಿ ಕೆ ಪಿ 661 ಅಂಕಗಳೊಂದಿಗೆ 23 ನೇ ರ್ಯಾಂಕ್ ಗಳಿಸಿ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಮೆಡಿಕಲ್ ಸೀಟ್ ಪಡೆದುಕೊಳ್ಳಲು ಅರ್ಹರಾಗಿದ್ದಾರೆ. ಈಕೆಯ ಈ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, […]
ಕೆ-ಸಿಇಟಿ ಫಲಿತಾಂಶ-2023: ಹೆಮ್ಮಾಡಿಯ ಜನತಾ ಸ್ವತಂತ್ರ ಪಿ . ಯು ಕಾಲೇಜಿನ ವಿದ್ಯಾರ್ಥಿಗಳ ಸಾಧನೆ
ಹೆಮ್ಮಾಡಿ(ಜೂ,16): ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ನಡೆಯುವ ರಾಜ್ಯ ಮಟ್ಟದ ಪ್ರವೇಶ ಪರೀಕ್ಷೆ ಕೆ-ಸಿಇಟಿ ಫಲಿತಾಂಶದಲ್ಲಿ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಐಶ್ವರ್ಯ ಖಾರ್ವಿ B.sc Agri-450,BNYS-1050,ಇಂಜಿನಿಯರಿಂಗ್-1189 ರ್ಯಾಂಕ್ ಗಳನ್ನು,ನೇಶಲ್ -ಇಂಜಿನಿಯರಿಂಗ್ 1966ನೇ ರ್ಯಾಂಕ್,ಆಯುಷ್ ಜೆ.ಸಿ- ಇಂಜಿನಿಯರಿಂಗ್ -2060ನೇ ರ್ಯಾಂಕ್, ತಿಲಕ್ ಇಂಜಿನಿಯರಿಂಗ್-2500ನೇ ರ್ಯಾಂಕ್,ಧನುಷ್ಯ-ಇಂಜಿನಿಯರಿಂಗ್-3958ನೇ ರ್ಯಾಂಕ್,ಸುಮಂತ್- ಇಂಜಿನಿಯರಿಂಗ್-4062ನೇ ರ್ಯಾಂಕ್,ಓಂಕಾರ್ ಪ್ರಭು-ಇಂಜಿನಿಯರಿಂಗ್-4203ನೇ ರ್ಯಾಂಕ್,ಸಂಪದ-ಇಂಜಿನಿಯರಿಂಗ್-5620ನೇ ರ್ಯಾಂಕ್,ತನಿಷಾ-ಇಂಜಿನಿಯರಿಂಗ್-5923ನೇ ರ್ಯಾಂಕ್ ,ಶ್ರೀಶ್ ಶೆಟ್ಟಿ-6560ನೇ ರ್ಯಾಂಕ್ಗಳನ್ನು ಪಡೆದು ಅರ್ಹತೆಯನ್ನು ಪಡೆದಿರುತ್ತಾರೆ. 100ಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ […]
ಸಿಇಟಿ ಫಲಿತಾಂಶ : ಕಾರ್ಕಳ ಕ್ರಿಯೇಟಿವ್ ಪಿ ಯು ಕಾಲೇಜು ದ್ವಿತೀಯ ವರ್ಷವೂ ಅತ್ಯುತ್ತಮ ಸಾಧನೆ
ಕಾರ್ಕಳ(ಜೂ,16): ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೇ 2023 ರಲ್ಲಿ ನಡೆಸಿದ ವಿವಿಧ ವೃತ್ತಿಪರ ಕೋರ್ಸ್ಗಳಿಗೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಗಳಿಸಿ ರಾಜ್ಯದ ವಿವಿಧ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ. ಜಾಗೃತಿ ಕೆ ಪಿ ಕೃಷಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 17 ನೇ ರ್ಯಾಂಕ್, ಪಶುವೈದ್ಯಕೀಯದಲ್ಲಿ 107ನೇ ರ್ಯಾಂಕ್, ಬಿ. ಎನ್ ವೈ ಎಸ್ ನಲ್ಲಿ 53 […]
ನೀಟ್ ಫಲಿತಾಂಶ ಪ್ರಕಟ:ಕ್ರಿಯೇಟಿವ್ನ ಜಾಗೃತಿ ಕೆ ಪಿ ಗೆ ಆಲ್ ಇಂಡಿಯಾ 23 ನೇ ರ್ಯಾಂಕ್
ಕಾರ್ಕಳ (ಜೂ,15): ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸಿದ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಂಸ್ಥೆ ಪ್ರಾರಂಭವಾದ ದ್ವಿತೀಯ ವರ್ಷದಲ್ಲೇ ಅತ್ಯುತ್ತಮ ಫಲಿತಾಂಶ ಗಳಿಸಿದ್ದಾರೆ. ಆಲ್ ಇಂಡಿಯಾ ರ್ಯಾಂಕಿಂಗ್ನಲ್ಲಿ ಕುಮಾರಿ ಜಾಗೃತಿ ಕೆ ಪಿ 661 ಅಂಕಗಳೊಂದಿಗೆ ಕೆಟೆಗರಿಯಲ್ಲಿ 23 ನೇ ರ್ಯಾಂಕ್, ಉದ್ಭವ್ ಎಂ ಆರ್ 625 ಅಂಕಗಳೊಂದಿಗೆ ಕೆಟೆಗರಿಯಲ್ಲಿ 72 ನೇ ರ್ಯಾಂಕ್ ಗಳಿಸಿದ್ದಾರೆ. ಹಾಗೆಯೇ ಸಂಸ್ಥೆಯ ವಿದ್ಯಾರ್ಥಿಗಳಾದ ತನುಶ್ರೀ ಕೆ […]
ಕುಂದಾಪುರದ ಮೂಲದ ವೈದ್ಯ ಡಾ| ಅಸೋಡು ಅನಂತರಾಮ ಶೆಟ್ಟಿ ಕೆಂಟ್ ನ ಲಾರ್ಡ್ ಲೆಫ್ಟಿನೆಂಟ್ ಆಗಿ ಆಯ್ಕೆ
ಕುಂದಾಪುರ (ಜೂ,15): ಕುಂದಾಪುರ ಮೂಲದ ಅಂತರಾಷ್ಟ್ರೀಯ ಖ್ಯಾತಿಯ ವೈದ್ಯ ಡಾ| ಅಸೋಡು ಅನಂತರಾಮ ಶೆಟ್ಟಿಯವರನ್ನು ಇಂಗ್ಲೆಂಡಿನ 3 ನೇ ಕಿಂಗ್ ಚಾರ್ಲ್ಸ್ ರವರು ಕೆಂಟ್ನ ಲಾರ್ಡ್ ಲೆಫ್ಟಿನೆಂಟ್ (ಗವರ್ನರ್) ಆಗಿ ನೇಮಕ ಮಾಡಿರುತ್ತಾರೆ. ಇದು ಗೌರವಾನ್ವಿತ ಮತ್ತು ಸಾಂವಿಧಾನಿಕ ಹುದ್ದೆಯಾಗಿದ್ದು, 3 ಸ್ಟಾರ್ ಜನರಲ್ ಶ್ರೇಣಿಯಾಗಿದೆ ಮತ್ತು ಭಾರತದಿಂದ ಆಯ್ಕೆಯಾದ ಎಕೈಕ ವ್ಯಕ್ತಿ ಇವರಾಗಿದ್ದಾರೆ.ಈ ಹಿಂದೆ ಡಾ ಎ.ಎ ಶೆಟ್ಟಿಯವರು ವೈದ್ಯಕೀಯ ಕ್ಷೇತ್ರದ ಉತ್ಕೃಷ್ಟ ಮನ್ನಣೆಯಾದ ಸರ್ಜಿಕಲ್ ನೋಬೆಲ್ ಪ್ರಶಸ್ತಿಯನ್ನು […]
ಎಂ ಐ ಟಿ ಮೂಡ್ಲಕಟ್ಟೆ: ಹೊಸ ಇಂಜಿನಿಯರಿಂಗ್ ಕೋರ್ಸ್ ಪ್ರಾರಂಭ
ಕುಂದಾಪುರ(ಜೂ,15): ಇಲ್ಲಿನ ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹೊಸ ಇಂಜಿನಿಯರಿಂಗ್ ಕೋರ್ಸ್ ಇನ್ಫರ್ಮೇಷನ್ ಸೈನ್ಸ್ & ಇಂಜಿನಿಯರಿಂಗ್ ಅನ್ನು ಆರಂಭಿಸಲು ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಇಂದ ಅನುಮೋದನೆ ದೊರೆತಿದೆ. ಸಾಫ್ಟ್ ವೇರ್ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಪಡೆಯಲು ಬಯಸುವ ವಿದ್ಯಾರ್ಥಿಗಳು ಈ ಕೋರ್ಸ್ ನ್ನು ಆಯ್ಕೆ ಮಾಡುತ್ತಿರುವುದನ್ನು ಗಮನದಲ್ಲಿಟ್ಟು ಬೇಡಿಕೆ ಹೆಚ್ಚಿದ್ದರಿಂದ ಈ ಶೈಕ್ಷಣಿಕ ವರ್ಷದಿಂದ ಹೊಸ ಕೋರ್ಸ್ ಅರಂಭಿಸುತ್ತಿದ್ದೇವೆ. ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಕಾಲೇಜಿನ […]










