ಗಂಗೊಳ್ಳಿ(ಸೆ,03): ಉಡುಪಿ ಜಿಲ್ಲಾ ಪದವಿಪೂರ್ವ ವಾಣಿಜ್ಯ ಶಾಸ್ತ್ರ ಉಪನ್ಯಾಸಕರ ಸಂಘದ 2023-24ನೇ ಸಾಲಿನ ಅಧ್ಯಕ್ಷರಾಗಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ .ಎಂ.ರಾಘವೇಂದ್ರ ಭಟ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಹರೀಶ್ ಕುಮಾರ್ ಎಸ್.ಎಮ್.ಎಸ್.ಪ.ಪೂ.ಕಾಲೇಜು. ಬ್ರಹ್ಮಾವರ ಜೊತೆ ಕಾರ್ಯದರ್ಶಿಗಳಾಗಿ ಬಲರಾಮ ವೈದ್ಯ ಸರ್ಕಾರಿ ಪ.ಪೂ.ಕಾಲೇಜು ಹೆಬ್ರಿ ಮತ್ತು ಹೇಮಲತಾ. ಸರ್ಕಾರಿ ಪ.ಪೂ.ಕಾಲೇಜು ಮಲ್ಪೆ ಹಾಗೂ ಕೋಶಾಧಿಕಾರಿಯಾಗಿ ಪ್ರಮೀಳಾ.ಡಿ.ಅಂಚನ್ ಸ. ಪ. ಪೂ. ಕಾಲೇಜು ತೆಂಕನಿಡಿಯೂರು ಇವರು ಆಯ್ಕೆಯಾದರು.
Day: September 3, 2023
ಬಿಲ್ಲವರ ಹಿತರಕ್ಷಣಾ ವೇದಿಕೆ ಗಂಗೊಳ್ಳಿ : ನಾರಾಯಣ ಗುರುಗಳ ಜನ್ಮ ದಿನಾಚರಣೆ
ಗಂಗೊಳ್ಳಿ (ಸೆ,03): ಗಂಗೊಳ್ಳಿಯ ಬಿಲ್ಲವರ ಹಿತ ರಕ್ಷಣಾ ವೇದಿಕೆಯ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುಗಳ 169ನೇ ಜನ್ಮ ದಿನಾಚರಣೆಯನ್ನು ಸಂಘದ ಕಚೇರಿಯಲ್ಲಿ ಆಚರಿಸಲಾಯಿತು. ಬಿಲ್ಲವರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಜಿ ಗೋಪಾಲ ಪೂಜಾರಿ ಮಾತನಾಡಿ ನಾರಾಯಣ ಗುರುಗಳು ಪ್ರತಿಪಾದಿಸಿದ ಸಿದ್ದಾಂತ ಮತ್ತು ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಒಟ್ಟು ಸಮಾಜದ ಹಿತರಕ್ಷಣೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪ ನಮನವನ್ನು […]
ಗೀತ ಗಾಯನದಲ್ಲಿ ರಾಜ್ಯಮಟ್ಟಕ್ಕೆ ಎಚ್.ಎಮ್.ಎಮ್ ಶಾಲೆಯ ಬುಲ್ ಬುಲ್ ವಿದ್ಯಾರ್ಥಿಗಳು
ಕುಂದಾಪುರ(ಸೆ,03) : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಸೋಸಿಯೇಶನ್ ನ ಆಶ್ರಯದಲ್ಲಿ ಮುಕುಂದ ಕೃಪಾ ಆಂಗ್ಲ ಮಾಧ್ಯಮ ಶಾಲೆ, ಉಡುಪಿಯಲ್ಲಿ ಆಯೋಜಿಸಲ್ಪಟ್ಟ ಜಿಲ್ಲಾ ಮಟ್ಟದ ಗೀತಗಾಯನ ಸ್ಪರ್ಧೆಯಲ್ಲಿ ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್.ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಬುಲ್ ಬುಲ್ ವಿದ್ಯಾರ್ಥಿಗಳು ಭಾಗವಹಿಸಿ, ವಿಜೇತರಾಗಿ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಸಂಸ್ಥೆಯ ಪ್ರಾಥಮಿಕ ವಿಭಾಗದ ಪ್ರಿಯದರ್ಶಿನಿ ಬುಲ್ ಬುಲ್ ಸ್ಕಾಚ್ ತಂಡದ ವಿದ್ಯಾರ್ಥಿಗಳಾದ ಸಂಹಿತಾ, ಗೋಪಿಕಾ, ರಿನೊಲಾ, ಪ್ರಕೃತಿ ಮತ್ತು ಸಿಂಚನಾ […]
ಟೇಬಲ್ ಟೆನಿಸ್ ಪಂದ್ಯಾಟದಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಮತ್ತು ಮೂವರು ವಿದ್ಯಾರ್ಥಿನಿಯರು ರಾಜ್ಯ ಮಟ್ಟಕ್ಕೆ ಆಯ್ಕೆ
ಕುಂದಾಪುರ(ಸೆ.03): ಉಡುಪಿಯ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಉಡುಪಿ ಜಿಲ್ಲಾ ಮಟ್ಟದ ಟೇಬಲ್ ಟೆನಿಸ್ ಪಂದ್ಯಾಟದಲ್ಲಿ ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಬಾಲಕಿಯರ ಟೇಬಲ್ ಟೆನಿಸ್ ತಂಡ ಪ್ರಥಮ ಸ್ಥಾನವನ್ನು ಪಡೆದಿರುತ್ತದೆ. ತಂಡದಲ್ಲಿ ಪ್ರಥಮ ಪಿ.ಯು.ಸಿ ಯ ದೀಪ್ತಿ ಕೆ, ಸಿಂಚನಾ ಶೆಟ್ಟಿ, ಕ್ಷಮಾ ಗೌತಮ್, ಅಂಕಿತಾ, ಭಾರ್ಗವಿ ಇವರು ಭಾಗವಹಿಸಿರುತ್ತಾರೆ. ಅವರಲ್ಲಿ ಮೂವರು ವಿದ್ಯಾರ್ಥಿನಿಯರಾದ ಅಂಕಿತಾ, ಕ್ಷಮಾ ಗೌತಮ್ ಹಾಗೂ ದೀಪ್ತಿ […]
ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು :ಪ್ರೇರಣಾ ಶಿಬಿರ – 2023 ಪ್ರೇರಣೆ– ಉಪನ್ಯಾಸ
ಕುಂದಾಪುರ (ಆ, 23): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನವಾಗಿ ಸೇರ್ಪಡೆಗೊಂಡ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಶ್ರಯದಲ್ಲಿ ‘ಪರಿಚಯ 2023’ ಕಾರ್ಯಕ್ರಮ ಆಯೋಜಿಸಲಾಯಿತು . ಈ ‘ಪ್ರೇರಣಾ ಶಿಬಿರ’ದ ಅಂಗವಾಗಿ ನಡೆದ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಜೆಸಿಐ ತರಬೇತುದಾರರಾದ ಶ್ರೀ ಕೆ.ಕೆ. ಶಿವರಾಮ್ ಅವರು “ಪ್ರೇರಣೆ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭ ವಿದ್ಯಾರ್ಥಿಗಳಿಗೆ ಹಲವು […]
ಸರಸ್ವತಿ ವಿದ್ಯಾಲಯ ಗಂಗೊಳ್ಳಿ:ಉಪನ್ಯಾಸಕ ಕೃಷ್ಣ ಗುಜ್ಜಾಡಿಯವರಿಗೆ ಬೀಳ್ಕೊಡುಗೆ
ಗಂಗೊಳ್ಳಿ(ಸೆ,03): ವಿದ್ಯಾರ್ಥಿಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸುವುದರ ಜೊತೆಗೆ ತಾನು ಕೂಡ ಬೆಳೆಯುವುದು ಓರ್ವ ನಿಜವಾದ ಶಿಕ್ಷಕನ ಸಾಮರ್ಥ್ಯವಾಗಿರುತ್ತದೆ. ಬದುಕಿನಲ್ಲಿ ಕಲಿಕೆ ನಿರಂತರವಾಗಿರಬೇಕು ಎಂದು ಜಿ. ಎಸ್ ವಿ. ಎಸ್ ಅಸೋಸಿಯೇಷನ್ ಕಾರ್ಯದರ್ಶಿ ಎಚ್ ಗಣೇಶ್ ಕಾಮತ್ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ10 ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿ ಇದೀಗ ಸರಕಾರಿ ಶಾಲಾ ಶಿಕ್ಷಕರಾಗಿ ನೇಮಕಗೊಂಡು ಬೇರೆಡೆಗೆ ತೆರಳುತ್ತಿರುವ ಭೌತಶಾಸ್ತ್ರ ಉಪನ್ಯಾಸಕ ಕೃಷ್ಣ ಗುಜ್ಜಾಡಿ […]
ಶ್ರೀ ಮೂಕಾಂಬಿಕಾ ದೇವಳದ ಪಿ .ಯು ಕಾಲೇಜು ಕೊಲ್ಲೂರು :ಉಡುಪಿ ಜಿಲ್ಲಾ ಮಟ್ಟದ ಪದವಿ ಪೂರ್ವ ವಿಭಾಗದ ಕುಸ್ತಿ ಪಂದ್ಯಾಟ
ಕೊಲ್ಲೂರು(ಸೆ,04) : ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಕಾಲೇಜು, ಉಡುಪಿ ಜಿಲ್ಲೆ ಹಾಗೂ ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜು ಕೊಲ್ಲೂರು ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಬಾಲಕ ಬಾಲಕಿಯರ ಕುಸ್ತಿ ಪಂದ್ಯಾಟವನ್ನು ಕಾಲೇಜಿನ ಹಳೆ ವಿದ್ಯಾರ್ಥಿ ಅಂತಾರಾಷ್ಟ್ರೀಯ ಮಟ್ಟದ ವೈಟ್ ಲಿಪ್ಟರ್ ಮಂಜುನಾಥ ಮರಾಠಿ ಉದ್ಘಾಟಿಸಿದರು. ಕ್ರೀಡಾ ಜೀವನದ ಪರಿಶ್ರಮ ಸಾಧನೆ ಮತ್ತು ಬದ್ದತೆಯನ್ನು ಮಕ್ಕಳಿಗೆ ಅವರು ತಿಳಿಸಿದರು. ಕಠಿಣ ಪರಿಶ್ರಮ, […]
ಡಾ| ಬಿ. ಬಿ. ಹೆಗ್ಡೆ ಕಾಲೇಜು : ಒಂದು ದಿನದ ವಿಶೇಷ ಶಿಬಿರ- ಸ್ವಚ್ಛತಾ ಕಾರ್ಯಕ್ರಮ – ಅಮೃತ ಕೆರೆ
ಕುಂದಾಪುರ (ಆ,27): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಶ್ರೀ ಚಂದ್ರಶೇಖರ್ ಆಜಾದ್ ಮಿತ್ರಮಂಡಳಿ, ಬಸ್ರೂರು ಇವರ ಜಂಟಿ ಆಶ್ರಯದಲ್ಲಿ ಒಂದು ದಿನದ ವಿಶೇಷ ಶಿಬಿರದ ಅಂಗವಾಗಿ ‘ಅಮೃತ ಕೆರೆ’ ಎಂಬ ಶೀರ್ಷಿಕೆಯಲ್ಲಿ ಬಸ್ರೂರಿನ ಕೆರೆಕಟ್ಟೆಯ ದೇವರ ಕೆರೆಯ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ತಾಲೂಕ್ ಪಂಚಾಯತ್ ಮಾಜಿ ಉಪಾಧ್ಯಕ್ಷ ಶ್ರೀ ರಾಮ್ಕಿಶನ್ ಹೆಗ್ಡೆ ಶ್ರಮದಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭ […]