ಕುಂದಾಪುರ( ಸೆ,18): ರಾಜ್ಯದ ಹಲವು ಜಿಲ್ಲೆಯ ಅದೇಷ್ಟೋ ಜನರ ಬದುಕಿಗೆ ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಹಸ್ತ ಚಾಚುತ್ತಿರುವ ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ.) ಕುಂದಾಪುರ ಸಂಸ್ಥೆಯು ಕೋಟೇಶ್ವರದ ಬೀಜಾಡಿಯ ನಿವಾಸಿ ಹೃದಯ ಸಂಭಂದಿ ಅನಾರೋಗ್ಯದಿಂದ ಬಳಲುತ್ತಿರುವ ಕೃಷ್ಣ ಎನ್ನುವವರ ವೈದ್ಯಕೀಯ ಚಿಕಿತ್ಸೆಗೆ ಮಾನವೀಯ ನೆಲೆಯ ಸಹಾಯ ಹಸ್ತ ಚಾಚಿದ್ದಾರೆ. ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬ ಹಾಗೂ ಮೂವರು ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ಜವಾಬ್ದಾರಿ […]
Day: September 18, 2023
ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ.) ಕುಂದಾಪುರ:ವೈದ್ಯಕೀಯ ಚಿಕಿತ್ಸೆಗೆ ನೆರವು
ಕುಂದಾಪುರ( ಸೆ,18): ತೆರೆಮರೆಯಲ್ಲಿ ಹಲವಾರು ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ.) ಕುಂದಾಪುರ ಸಂಸ್ಥೆ ವತಿಯಿಂದ ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಕುಂದಾಪುರದ ತಲ್ಲೂರಿನ ನಿವಾಸಿ ಮಧುರಾ ಭಂಡಾರಿಯವರ ವೈದ್ಯಕೀಯ ಚಿಕಿತ್ಸೆಗೆ ಸಂಸ್ಥೆಯಿಂದ 5000/-ರೂ ಗಳ ಚೆಕ್ ಸಹಾಯ ಹಸ್ತವನ್ನು ಸೆಪ್ಟೆಂಬರ್ 10 ರಂದು ಕುಂಭಾಶಿಯಲ್ಲಿ ಅವರ ಕುಟುಂಬಕ್ಕೆ ನೀಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಪುಂಡಲೀಕ ಮೊಗವೀರ,ಪದಾಧಿಕಾರಿಗಳಾದ ಮನೀಶ್ ಕುಲಾಲ್, ಶಿವರಾಮ್ ಕೋಡಿ, ಸಂಸ್ಥೆಯ ಪೋಷಕರಾದ […]
ಡಾ| ಬಿ. ಬಿ. ಹೆಗ್ಡೆ ಕಾಲೇಜು: ಹಿoದಿ ದಿವಸ್ ಆಚರಣೆ
ಕುಂದಾಪುರ, (ಸೆ. 15): ಭಾಷೆ ಕೇವಲ ಸಂವಹನ ಮಾಧ್ಯಮವಲ್ಲ, ಅದು ಸಂಸ್ಕೃತಿಯ ಪ್ರತೀಕ. ಹೀಗೆ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿ ರಾಷ್ಟ್ರದ ಅಧಿಕ್ರತ ಭಾಷೆಯಾದ ಹಿಂದಿಯನ್ನು ಕಾಣಬಹುದು. ಹೀಗಾಗಿ ಸಂಸ್ಕೃತಿ ಸಂಸ್ಕಾರವನ್ನು ಗೌರವಿಸಿ ಅನುಸರಿಸಿ ಎಂದು ಜಿ.ಎಮ್. ವಿದ್ಯಾನಿಕೇತನ್ ಆಂಗ್ಲ ಮಾಧ್ಯಮ ಶಾಲೆಯ ಹಿಂದಿ ಶಿಕ್ಷಕಿ ಶ್ರೀಮತಿ ಕಿರಣಾ ತಿವಾರಿ ಹೇಳಿದರು. ಅವರು ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಹಿಂದಿ ವಿಭಾಗ ಆಯೋಜಿಸಿದ ಹಿಂದಿ ದಿವಸ್ ಕಾರ್ಯಕ್ರಮದಲ್ಲಿ […]
ತ್ರಾಸಿ:ಆರಾಧ್ಯ ಯೋಗ ತರಬೇತಿ ಕೇಂದ್ರ ಉದ್ಘಾಟನೆ
ತ್ರಾಸಿ(ಸೆ.18): ಯೋಗ ಕೇವಲ ದೈಹಿಕ ಕಸರತ್ತು ಮಾತ್ರವಲ್ಲದೇ ದೇಹ ಮತ್ತು ಮನಸ್ಸನ್ನು ಸದೃಢಗೊಳಿಸುವ ಒಂದು ಸಾಧನ. ಯೋಗ ಬಲ್ಲವನು ನಿರೋಗಿಯಾಗಿ ಆರೋಗ್ಯಪೂರ್ಣ ಬದುಕನ್ನು ಸಾಗಿಸಬಹುದು ಆ ನಿಟ್ಟಿನಲ್ಲಿ ತ್ರಾಸಿಯಲ್ಲಿ ಆರಂಭಗೊಂಡಿರುವ ಆರಾಧ್ಯ ಯೋಗ ಕೇಂದ್ರದ ಸುದುಪಯೋಗವನ್ನು ಪಡೆದುಕೊಳ್ಳಿ ಎಂದು ಖ್ಯಾತ ಯೋಗ ಗುರು ಸುಬ್ಬಯ್ಯ ದೇವಾಡಿಗ ಅರೆಹೊಳೆ ಹೇಳಿದರು. ಅವರು ತ್ರಾಸಿ ಕಲ್ಲಾಣಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಆರಾಧ್ಯ ಯೋಗ ಕೇಂದ್ರ ದ ಉದ್ಘಾಟನೆ ಕಾರ್ಯಕ್ರಮದ ಮುಖ್ಯ […]