ಕುಂದಾಪುರ (ಅ.15): ಸರಕಾರಿ ಪದವಿ ಪೂರ್ವ ಕಾಲೇಜು, ಕುಂದಾಪುರ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ 07 ದಿನಗಳ ವಾರ್ಷಿಕ ವಿಶೇಷ ಶಿಬಿರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆದೂರು ಇಲ್ಲಿ ಉದ್ಘಾಟನೆಗೊಂಡಿತು. ಕೆದೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಉದ್ಯಮಿಗಳಾದ ಶಾನಾಡಿ ಶ್ರೀ ಸಂಪತ್ ಕುಮಾರ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಕೆದೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಈ ಶಿಬಿರದ ನೇತೃತ್ವ ವಹಿಸಿರುವ […]
Day: October 15, 2023
ಸರ್ಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ: ರಾಜ್ಯಮಟ್ಟದ ಕಬ್ಬಡ್ಡಿ ಮತ್ತು ಕೋ ಕೋ ಪಂದ್ಯಾಟಕ್ಕೆ ಆಯ್ಕೆ
ಕುಂದಾಪುರ (ಆ,12): ಜನತ ಪದವಿ ಪೂರ್ವ ಕಾಲೇಜು ಹೆಮ್ಮಾಡಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾಟದಲ್ಲಿ ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ರಿಷಿಕ್,ಸುಜಯ್ ಹಾಗೂ ಪ್ರವೀಕ್ಷಾ ಶೆಟ್ಟಿ ಆಯ್ಕೆಯಾಗಿದ್ದಾರೆ. ಹಾಗೆಯೇ ದುರ್ಗಾಪರಮೇಶ್ವರಿ ಪದವಿ ಪೂರ್ವ ಕಾಲೇಜು ಮುಂದಾರ್ತಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕೋ ಕೋ ಪಂದ್ಯಾಟದಲ್ಲಿ ದರ್ಶನ್ ಮತ್ತು ಸಹನಾ ಆಯ್ಕೆಯಾಗಿದ್ದಾರೆ. ಕಾಲೇಜಿನ ಪ್ರಾಂಶುಪಾಲರು, ಬೋಧಕ -ಬೋಧಕೇತರ ವ್ರಂದ ವಿದ್ಯಾರ್ಥಿಗಳಿಗೆ ಶುಭಹಾರೈಸಿದ್ದಾರೆ.
ಅ.15 ರಂದು ಬೆಂಗಳೂರಿ ನಲ್ಲಿ ಆಪದ್ಬಾಂಧವ- ಜೀವ ರಕ್ಷಕ ಈಶ್ವರ್ ಮಲ್ಪೆಯವರಿಗೆ ಡಾ.ಎ ಪಿ ಜಿ ಕಲಾಂ ಪ್ರಶಸ್ತಿ ಪ್ರದಾನ
ಕುಕಂದಾಪುರ(ಅ.15): ಕರಾವಳಿಯ ಆಪದ್ಬಾಂಧವ- ಜೀವ ರಕ್ಷಕ ಈಶ್ವರಮಲ್ಪೆ ಯವರು ಅಕ್ಟೋಬರ್ 15 ಬೆಂಗಳೂರಿನಲ್ಲಿ ಅಕ್ಷಯ ಪಾತ್ರೆ ಮಾನವ ಫೌಂಡೇಶನ್ ವತಿಯಿಂದ ಕೊಡಲಾಗುವ ಡಾ. ಎಪಿಜೆ ಕಲಾಂ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಯನ್ನು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಪ್ರಧಾನ ಮಾಡಲಿದ್ದು ಈ ಕಾರ್ಯಕ್ರಮದಲ್ಲಿ ದಿ ಗ್ರೇಟ್ ಕಲಿ ಮಹಿಮಾ ಚೌದ್ರಿ ಬಾಲಿವುಡ್ ಸಿಂಗರ್ ಜಾವೇದ್ ಆಲಿ ಮಿಸ್ ಇಂಡಿಯಾ ಸಿಮ್ರಾನ್ ಅಹುಜಾ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಗಣ್ಯ […]