ಕುಂದಾಪುರ (ಸೆಪ್ಟೆಂಬರ್ 21) : ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗ ನಡೆಸಿದ ವಿಶ್ವವಿದ್ಯಾನಿಲಯ ವ್ಯಾಪ್ತಿಯ 220 ಕಾಲೇಜುಗಳ ಕ್ರೀಡಾ ರ್ಯಾಂಕಿoಗ್ನಲ್ಲಿ ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಪುರುಷ ವಿಭಾಗದಲ್ಲಿ 7ನೇ ರ್ಯಾಂಕ್ ಮಹಿಳೆಯರ ವಿಭಾಗದಲ್ಲಿ 11ನೇ ರ್ಯಾಂಕ್ ಪಡೆಯುವ ಮೂಲಕ ಸಮಗ್ರ 7ನೇ ರ್ಯಾಂಕ್ ಪಡೆದಿದೆ. ಉಡುಪಿ ಜಿಲ್ಲಾ ವ್ಯಾಪ್ತಿಯ ಕಾಲೇಜುಗಳಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಉತ್ಕೃಷ್ಟ ಸಾಧನೆಗೈದಿದೆ. ಕಾಲೇಜು ಆಡಳಿತ […]
Year: 2023
ಎಂಐಟಿ ಕುಂದಾಪುರ: ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇಂಡಕ್ಷನ್ ಕಾರ್ಯಕ್ರಮ
ಕುಂದಾಪುರ(ಸೆ.21): ಇಲ್ಲಿನ ಎಂಐಟಿ ಕಾಲೇಜಿನಲ್ಲಿ ಪ್ರಥಮ ವರ್ಷದ ಇಂಡಕ್ಷನ್ ಕಾರ್ಯಕ್ರಮ 2023-24ರ ಅಂಗವಾಗಿ, ಎನ್ಐಟಿಕೆ ಸುರತ್ಕಲ್ನ ಸಿಎಸ್ಇ ವಿಭಾಗದ ಪ್ರಾಧ್ಯಾಪಕ ಡಾ. ಮೋಹಿತ್ ತಹಿಲಿಯಾನಿ ಅವರಿಂದ ವೃತ್ತಿಪರ ಬೆಳವಣಿಗೆಯಲ್ಲಿ ಸಂಘದ ಸದಸ್ಯತ್ವದ ಪಾತ್ರ*ವಿಷಯದ ಕುರಿತು ಸಂವಾದವನ್ನು ಏರ್ಪಡಿಸಲಾಗಿತ್ತು. ಅವರು ವಿದ್ಯಾರ್ಥಿಗಳಿಗೆ ಅದರ ಪ್ರಾಮುಖ್ಯತೆ, ಅನುಕೂಲಗಳು, ಸ್ಕಾಲರ್ಶಿಪ್ಗಳು ಮತ್ತು ವಿದ್ಯಾರ್ಥಿಗಳು ವೃತ್ತಿಪರ ಸಂಸ್ಥೆಗಳ ಸದಸ್ಯರಾಗಿದ್ದರೆ ಅವರಿಗೆ ಇರುವ ಜಾಗತಿಕ ಅವಕಾಶಗಳನ್ನು ಐಇಇಇ ಯ ಉದಾಹರಣೆಯನ್ನು ಉಲ್ಲೇಖಿಸಿ ವಿವರಿಸಿದರು. ಸದಸ್ಯತ್ವ ಶುಲ್ಕವನ್ನು ಪಾವತಿಸಿ […]
ಕುಂದಾಪುರ ತಾಲೂಕು ಯುವ ಬಂಟರ ಸಂಘದ ದಶಮ ಸಂಭ್ರಮ: 10 ಮಂದಿ ಹಿರಿಯ ಸಾಧಕರಿಗೆ ದಶಮ ಸಂಭ್ರಮ ಪ್ರಶಸ್ತಿ
ಕುಂದಾಪುರ(ಸೆ,20): ಕುಂದಾಪುರ ತಾಲೂಕು ಯುವ ಬಂಟರ ಸಂಘದ ದಶಮ ಸಂಭ್ರಮದ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಂಟ ಸಮಾಜದ ಹತ್ತು ಮಂದಿ ಸಾಧಕರಿಗೆ ದಶಮ ಸಂಭ್ರಮ ಪ್ರಶಸ್ತಿ ನೀಡಿ ಗೌರವಿಸಲಿದೆ. ಹಿರಿಯ ಸಾಧಕರಾದ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಪ್ರೊ. ಇಆರ್. ಮೊಳಹಳ್ಳಿ ಸುಬ್ಬಣ್ಣ ಶೆಟ್ಟಿ ಕೋಟೇಶ್ವರ, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ವೈ ಎಸ್ ಹೆಗ್ಡೆ ಹಿರಿಯ ನೇತ್ರ ಶಸ್ತ್ರಚಿಕಿಸ್ತಕರು ಕುಂದಾಪುರ, ಲೆಕ್ಕಪರಿಶೋಧನ ಕ್ಷೇತ್ರದಲ್ಲಿ ಶ್ರೀ ಸುಧಾಕರ ಹೆಗ್ಡೆ ಹಿರಿಯ ಲೆಕ್ಕ […]
ಜೈಕುಂದಾಪ್ರ ಸೇವಾ ಟ್ರಸ್ಟ್(ರಿ.) ಕುಂದಾಪುರ: ಮಾನವೀಯ ನೆಲೆಯ ನೆರವು
ಕುಂದಾಪುರ( ಸೆ,18): ರಾಜ್ಯದ ಹಲವು ಜಿಲ್ಲೆಯ ಅದೇಷ್ಟೋ ಜನರ ಬದುಕಿಗೆ ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಹಸ್ತ ಚಾಚುತ್ತಿರುವ ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ.) ಕುಂದಾಪುರ ಸಂಸ್ಥೆಯು ಕೋಟೇಶ್ವರದ ಬೀಜಾಡಿಯ ನಿವಾಸಿ ಹೃದಯ ಸಂಭಂದಿ ಅನಾರೋಗ್ಯದಿಂದ ಬಳಲುತ್ತಿರುವ ಕೃಷ್ಣ ಎನ್ನುವವರ ವೈದ್ಯಕೀಯ ಚಿಕಿತ್ಸೆಗೆ ಮಾನವೀಯ ನೆಲೆಯ ಸಹಾಯ ಹಸ್ತ ಚಾಚಿದ್ದಾರೆ. ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬ ಹಾಗೂ ಮೂವರು ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ಜವಾಬ್ದಾರಿ […]
ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ.) ಕುಂದಾಪುರ:ವೈದ್ಯಕೀಯ ಚಿಕಿತ್ಸೆಗೆ ನೆರವು
ಕುಂದಾಪುರ( ಸೆ,18): ತೆರೆಮರೆಯಲ್ಲಿ ಹಲವಾರು ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ.) ಕುಂದಾಪುರ ಸಂಸ್ಥೆ ವತಿಯಿಂದ ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಕುಂದಾಪುರದ ತಲ್ಲೂರಿನ ನಿವಾಸಿ ಮಧುರಾ ಭಂಡಾರಿಯವರ ವೈದ್ಯಕೀಯ ಚಿಕಿತ್ಸೆಗೆ ಸಂಸ್ಥೆಯಿಂದ 5000/-ರೂ ಗಳ ಚೆಕ್ ಸಹಾಯ ಹಸ್ತವನ್ನು ಸೆಪ್ಟೆಂಬರ್ 10 ರಂದು ಕುಂಭಾಶಿಯಲ್ಲಿ ಅವರ ಕುಟುಂಬಕ್ಕೆ ನೀಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಪುಂಡಲೀಕ ಮೊಗವೀರ,ಪದಾಧಿಕಾರಿಗಳಾದ ಮನೀಶ್ ಕುಲಾಲ್, ಶಿವರಾಮ್ ಕೋಡಿ, ಸಂಸ್ಥೆಯ ಪೋಷಕರಾದ […]
ಡಾ| ಬಿ. ಬಿ. ಹೆಗ್ಡೆ ಕಾಲೇಜು: ಹಿoದಿ ದಿವಸ್ ಆಚರಣೆ
ಕುಂದಾಪುರ, (ಸೆ. 15): ಭಾಷೆ ಕೇವಲ ಸಂವಹನ ಮಾಧ್ಯಮವಲ್ಲ, ಅದು ಸಂಸ್ಕೃತಿಯ ಪ್ರತೀಕ. ಹೀಗೆ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿ ರಾಷ್ಟ್ರದ ಅಧಿಕ್ರತ ಭಾಷೆಯಾದ ಹಿಂದಿಯನ್ನು ಕಾಣಬಹುದು. ಹೀಗಾಗಿ ಸಂಸ್ಕೃತಿ ಸಂಸ್ಕಾರವನ್ನು ಗೌರವಿಸಿ ಅನುಸರಿಸಿ ಎಂದು ಜಿ.ಎಮ್. ವಿದ್ಯಾನಿಕೇತನ್ ಆಂಗ್ಲ ಮಾಧ್ಯಮ ಶಾಲೆಯ ಹಿಂದಿ ಶಿಕ್ಷಕಿ ಶ್ರೀಮತಿ ಕಿರಣಾ ತಿವಾರಿ ಹೇಳಿದರು. ಅವರು ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಹಿಂದಿ ವಿಭಾಗ ಆಯೋಜಿಸಿದ ಹಿಂದಿ ದಿವಸ್ ಕಾರ್ಯಕ್ರಮದಲ್ಲಿ […]
ತ್ರಾಸಿ:ಆರಾಧ್ಯ ಯೋಗ ತರಬೇತಿ ಕೇಂದ್ರ ಉದ್ಘಾಟನೆ
ತ್ರಾಸಿ(ಸೆ.18): ಯೋಗ ಕೇವಲ ದೈಹಿಕ ಕಸರತ್ತು ಮಾತ್ರವಲ್ಲದೇ ದೇಹ ಮತ್ತು ಮನಸ್ಸನ್ನು ಸದೃಢಗೊಳಿಸುವ ಒಂದು ಸಾಧನ. ಯೋಗ ಬಲ್ಲವನು ನಿರೋಗಿಯಾಗಿ ಆರೋಗ್ಯಪೂರ್ಣ ಬದುಕನ್ನು ಸಾಗಿಸಬಹುದು ಆ ನಿಟ್ಟಿನಲ್ಲಿ ತ್ರಾಸಿಯಲ್ಲಿ ಆರಂಭಗೊಂಡಿರುವ ಆರಾಧ್ಯ ಯೋಗ ಕೇಂದ್ರದ ಸುದುಪಯೋಗವನ್ನು ಪಡೆದುಕೊಳ್ಳಿ ಎಂದು ಖ್ಯಾತ ಯೋಗ ಗುರು ಸುಬ್ಬಯ್ಯ ದೇವಾಡಿಗ ಅರೆಹೊಳೆ ಹೇಳಿದರು. ಅವರು ತ್ರಾಸಿ ಕಲ್ಲಾಣಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಆರಾಧ್ಯ ಯೋಗ ಕೇಂದ್ರ ದ ಉದ್ಘಾಟನೆ ಕಾರ್ಯಕ್ರಮದ ಮುಖ್ಯ […]
ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ:ಭಾರತದ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮ
ಕುಂದಾಪುರ(ಸೆ,17): ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಭಾರತದ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ 1864 ವಿದ್ಯಾರ್ಥಿಗಳು ಮತ್ತು ಉಪಪ್ರಾಂಶುಪಾಲರಾದ ಶ್ರೀ ಕಿರಣ ಹೆಗ್ಡೆ, ಉಪನ್ಯಾಸಕರು, ಅಧ್ಯಾಪಕರು ಭಾಗವಹಿಸಿದರು. ಪ್ರಾಂಶುಪಾಲರಾದ ಶ್ರೀ ರಾಮಕೃಷ್ಣ ಬಿ.ಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸಂವಿಧಾನದ ಪ್ರತಿಜ್ಞಾ ವಿಧಿಯನ್ನು ಉಪನ್ಯಾಸಕರಾದ ಶ್ರೀ ಉದಯ ಕುಮಾರ ಶೆಟ್ಟಿ ಬೋಧಿಸಿದರು.
ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದಲ್ಲಿ ಹಿಂದಿ ದಿನಾಚರಣೆ
ಗಂಗೊಳ್ಳಿ( ಸೆ.16): ಭಾರತದಲ್ಲಿ ಅತಿ ಹೆಚ್ಚು ಜನರು ಮಾತನಾಡುವ ಭಾಷೆ ಹಿಂದಿ ಯಾಗಿದೆ. ಅದನ್ನು ನಮ್ಮ ರಾಷ್ಟ್ರಭಾಷೆ ಎನ್ನಲು ನಾವು ಹೆಮ್ಮೆ ಪಡಬೇಕು. ಹೊಸ ಭಾಷೆಗಳನ್ನು ಕಲಿಯುವುದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದು ಹಿರಿಯಡಕ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿಂದಿ ಭಾಷಾ ಉಪನ್ಯಾಸಕರಾದ ಅನಂತರಾಮ ನಾಯಕ್ ಅಭಿಪ್ರಾಯ ಪಟ್ಟರು. ಅವರು ಕಳೆದ ಗುರುವಾರ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಹಿಂದಿ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ […]
ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದಲ್ಲಿ ಸಂವಿಧಾನ ಪೀಠಿಕೆ ಓದು
ಗಂಗೊಳ್ಳಿ(ಸೆ.15): ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು, ಸರಸ್ವತಿ ವಿದ್ಯಾಲಯ ಕನ್ನಡ ಮಾಧ್ಯಮ ಪ್ರೌಢಶಾಲೆ ಮತ್ತು ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ಸಹಭಾಗಿತ್ವದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಭಾರತದ ಸಂವಿಧಾನ ಪೀಠಿಕೆ ವಾಚನ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿನಿ ನಿಶಾ ಬಿ ಪೂಜಾರಿ ಪೀಠಿಕೆಯನ್ನು ವಾಚಿಸಿದರು. ಪ್ರಾಂಶುಪಾಲರು ಮುಖ್ಯೋಪಾ ದ್ಯಾಯರು ಉಪನ್ಯಾಸಕರು ಶಿಕ್ಷಕರು ಮತ್ತು ವಿದ್ಯಾರ್ಥಿ ವೃಂದ ಮತ್ತು ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.