ನಾಡ(ಜ.12): ಶ್ರೀ ಕ್ಷೇತ್ರ ಹಾಡಿಗರಡಿ ದೈವಸ್ಥಾನ ನಾಡ ಇದರ ಪರಿವಾರ ದೈವಗಳ ವಾರ್ಷಿಕ ಹಾಲುಹಬ್ಬ, ಗೆಂಡಸೇವೆ, ಮಹಾಪೂಜೆ, ದೈವದರ್ಶನ ಹಾಗೂ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಇದೇ ಜನವರಿ 14 ಮತ್ತು 15 ರಂದು ನಡೆಯಲಿದೆ. ಜಾತ್ರಾ ಪ್ರಯುಕ್ತ ಧಾರ್ಮಿಕ ಸಭಾಕಾರ್ಯಕ್ರಮ , ಸಾಂಸ್ಕೃತಿಕ ಕಾರ್ಯಕ್ರಮ ಸನ್ಮಾನ ಸಮಾರಂಭ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣೆ ಹಾಗೂ ಮಹಾಅನ್ನಸಂತರ್ಪಣೆ ನಡೆಯಲಿರುವುದೆಂದು ದೈವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
Day: January 8, 2024
ಗಂಗೊಳ್ಳಿ: ಶಿಕ್ಷಕ ಉಮೇಶ್ ಕರ್ಣಿಕ್ ಬೀಳ್ಕೊಡುಗೆ ಸಮಾರಂಭ
ಗಂಗೊಳ್ಳಿ( ಜ.08): ಇಲ್ಲಿನ ಸರಸ್ವತಿ ವಿದ್ಯಾಲಯ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ 24 ವರ್ಷ ಹಾಗೂ ಉಪ ಪ್ರಾಂಶುಪಾಲರಾಗಿ ಆರು ವರ್ಷ ಸೇವೆ ಸಲ್ಲಿಸಿದ್ದು ಮಾತ್ರವಲ್ಲದೆ 20 ವರ್ಷಗಳ ಕಾಲ ಎನ್ ಸಿ ಸಿ ಅಧಿಕಾರಿಯಾಗಿ ಕಾರ್ಯವನ್ನು ನಿರ್ವಹಿಸಿ ವಯೋನಿವೃತ್ತಿ ಹೊಂದಿದ ಉಮೇಶ್ ಕರ್ಣಿಕ್ ಎಸ್ ಅವರ ಬೀಳ್ಕೊಡುಗೆ ಸಮಾರಂಭವು ಸರಸ್ವತಿ ವಿದ್ಯಾಲಯದ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಜಿಎಸ್ವಿಎಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಕಾಶಿನಾಥ್ […]
ಟೀಮ್ ಯಕ್ಷ ಬ್ರಹ್ಮ ಶ್ರೀ ವತಿಯಿಂದ ಜ.18 ರಂದು ಮಾನವೀಯ ನೆಲೆಯ ಸಹಾಯಕ್ಕಾಗಿ ಯಕ್ಷಗಾನ
ಸಾಲಿಗ್ರಾಮ (ಜ.08): ಇಲ್ಲಿನ ಟೀಮ್ ಯಕ್ಷ ಬ್ರಹ್ಮ ಶ್ರೀ ಸ್ವಯಂ ಸೇವಾ ಸಂಘಟನೆಯ ವತಿಯಿಂದ ಅನಾರೋಗ್ಯ ಪೀಡಿತ ಶ್ರೀ ಸುರೇಶ್ ಮೊಗವೀರ ರವರ ಚಿಕಿತ್ಸಾ ವೆಚ್ಚ ಬರಿಸಲು ಸಾಲಿಗ್ರಾಮ ಜಾತ್ರೆಯ ಪ್ರಯುಕ್ತ ಜನವರಿ 18 ನೇ ತಾರೀಖಿನಂದು ಸಾಲಿಗ್ರಾಮ ಮೇಳದ ಯಕ್ಷಗಾನವನ್ನು ಹಮ್ಮಿಕೊಂಡಿದೆ. ಕಲಾಭಿಮಾನಿಗಳಾದ ತಾವುಗಳು ಮಾನವೀಯ ನೆಲೆಯ ಈ ಕಾರ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತನು ಮನ ಧನ ಸಹಾಯದೊಂದಿಗೆ ನೊಂದ ಜೀವಕ್ಕೆ ನೆರವಾಗಬೇಕೆಂದು ಸಂಘಟಕರು ತಿಳಿಸಿದ್ದಾರೆ. ವರದಿ:ರಾಘವೇಂದ್ರ ಹಾರ್ಮಣ್.