ಕುಂದಾಪುರ (ಜ.11): ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆoಟ್ಸ್ ಆಫ್ ಇಂಡಿಯಾ 2023ರ ನವೆಂಬರ್ ತಿಂಗಳಲ್ಲಿ ನಡೆಸಿದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ರಕ್ಷಿತ್ (2017-18) ಉತ್ತೀರ್ಣರಾಗಿದ್ದಾರೆ. ಅಂತಿಮ ಬಿ.ಕಾಂ. ಪದವಿಯ ವಿದ್ಯಾರ್ಥಿಗಳಾದ ವೈಷ್ಣವಿ ಶೆಟ್ಟಿ, ಅಮೃತ ಕೆ. ಸಿ.ಎ. ಇಂಟರ್ ಮೀಡಿಯೆಟ್ ಗ್ರೂಪ್ 2 ರ ಪರೀಕ್ಷೆ ಹಾಗೂ ಸುದರ್ಶನ ಉಪಾಧ್ಯ ಗ್ರೂಪ್ 1 ರ ಪರೀಕ್ಷೆಯಲ್ಲಿ […]
Day: January 13, 2024
ಡಾ.ಗಣೇಶ್ ಗಂಗೊಳ್ಳಿ ಯವರಿಗೆ ‘ಖಿದ್ಮಾ ಸೇವಾರತ್ನ’ ಪ್ರಶಸ್ತಿ ಪ್ರದಾನ
ಕುಂದಾಪುರ ( ಜ.12): ರಾಜ್ಯದ ಪ್ರಸಿದ್ದ ಸುಗಮ ಸಂಗೀತ ಗಾಯಕ ಹಾಗೂ ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ.ಗಣೇಶ್ ಗಂಗೊಳ್ಳಿ ಯವರ ಸಂಘಟನೆ ಹಾಗೂ ಕನ್ನಡ ನಾಡು ನುಡಿ ಸುಗಮ ಸಂಗೀತದಲ್ಲಿ ಅಪಾರ ಮತ್ತು ಅನುಪಮ ಸಾಧನೆಯನ್ನು ಗುರುತಿಸಿ, “”ಖಿದ್ಮಾ ಸೇವಾರತ್ನ”” ರಾಜ್ಯ ಪ್ರಶಸ್ತಿ ಲಭಿಸಿದೆ. ಖಿದ್ಮಾ ಫೌಂಡೇಶನ್ ಕರ್ನಾಟಕ ಮತ್ತು ವಿಜಯ ಕಾಲೇಜು ಜಯನಗರ, ಬೆಂಗಳೂರು ಇವರ ಸಹಯೋಗದಲ್ಲಿ ಕರ್ನಾಟಕ ಸುವರ್ಣ ಮಹೋತ್ಸವ ಪ್ರಯುಕ್ತ ಬೆಂಗಳೂರಿನ ವಿಜಯ […]
ಶ್ರೀ ಜೈನ ಜಟ್ಟಿಗೇಶ್ವರ ದೈವಸ್ಥಾನ ತಗ್ಗರ್ಸೆ: ಜ.19, 20 ರಂದು ವಾರ್ಷಿಕ ಮಹೋತ್ಸವ
ಬೈಂದೂರು (ಜ.12): ಶ್ರೀ ಜೈನ ಜಟ್ಟಿಗೇಶ್ವರ ದೈವಸ್ಥಾನ, ಮೊಗವೀರ ಗರಡಿ ತಗ್ಗರ್ಸೆ ಇದರ ಸಪರಿವಾರ ದೇವರ ಕಲಾಭಿವೃದ್ಧಿ ಹೋಮ, ಶ್ರೀ ನಾಗದೇವರಿಗೆ ನವಕಾಧಿವಾಸ ಹಾಗೂ ವಾರ್ಷಿಕ ಮಹೋತ್ಸವ ಇದೇ ಜನವರಿ 19 ಮತ್ತು 20ರಂದು ನಡೆಯಲಿದೆ. ವಾರ್ಷಿಕ ಗಂಡಸೇವೆ ಹಾಲು ಹಬ್ಬ ಹಾಗೂ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದ್ದು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ರಾಷ್ಟ್ರಮಟ್ಟದಲ್ಲಿ ಮಿಂಚಿದ ಕುಂದಾಪುರದ ವಿ.ಕೆ.ಆರ್.ನ ಕಂಚಿನ ತಾರೆ – ಗಾರ್ಗಿದೇವಿ
ಕುಂದಾಪುರ(ಜ,13): ಭಾರತ ಸರಕಾರದ ಶಿಕ್ಷಣ ಮಂತ್ರಾಲಯವು ನವದೆಹಲಿಯಲ್ಲಿ ನಡೆಸಿದ ರಾಷ್ಟ್ರಮಟ್ಟದ 2023-2024ನೇ ಸಾಲಿನ ಕಲೋತ್ಸವದ ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಗಾರ್ಗಿ ದೇವಿ ಕಂಚಿನ ಪದಕ ಗಳಿಸಿರುತ್ತಾಳೆ. ಈಕೆ ದೇವಲ್ಕುಂದದ ಅಶೋಕ ಮತ್ತು ನಾಟ್ಯ ಗುರು ವಿದೂಷಿ ಪ್ರವಿತಾ […]