ಬೈಂದೂರು (ಜ.12): ಶ್ರೀ ಜೈನ ಜಟ್ಟಿಗೇಶ್ವರ ದೈವಸ್ಥಾನ, ಮೊಗವೀರ ಗರಡಿ ತಗ್ಗರ್ಸೆ ಇದರ ಸಪರಿವಾರ ದೇವರ ಕಲಾಭಿವೃದ್ಧಿ ಹೋಮ, ಶ್ರೀ ನಾಗದೇವರಿಗೆ ನವಕಾಧಿವಾಸ ಹಾಗೂ ವಾರ್ಷಿಕ ಮಹೋತ್ಸವ ಇದೇ ಜನವರಿ 19 ಮತ್ತು 20ರಂದು ನಡೆಯಲಿದೆ.
ವಾರ್ಷಿಕ ಗಂಡಸೇವೆ ಹಾಲು ಹಬ್ಬ ಹಾಗೂ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದ್ದು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.