ಸಾಲಿಗ್ರಾಮ (ಜ.08): ಇಲ್ಲಿನ ಟೀಮ್ ಯಕ್ಷ ಬ್ರಹ್ಮ ಶ್ರೀ ಸ್ವಯಂ ಸೇವಾ ಸಂಘಟನೆಯ ವತಿಯಿಂದ ಅನಾರೋಗ್ಯ ಪೀಡಿತ ಶ್ರೀ ಸುರೇಶ್ ಮೊಗವೀರ ರವರ ಚಿಕಿತ್ಸಾ ವೆಚ್ಚ ಬರಿಸಲು ಸಾಲಿಗ್ರಾಮ ಜಾತ್ರೆಯ ಪ್ರಯುಕ್ತ ಜನವರಿ 18 ನೇ ತಾರೀಖಿನಂದು ಸಾಲಿಗ್ರಾಮ ಮೇಳದ ಯಕ್ಷಗಾನವನ್ನು ಹಮ್ಮಿಕೊಂಡಿದೆ. ಕಲಾಭಿಮಾನಿಗಳಾದ ತಾವುಗಳು ಮಾನವೀಯ ನೆಲೆಯ ಈ ಕಾರ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತನು ಮನ ಧನ ಸಹಾಯದೊಂದಿಗೆ ನೊಂದ ಜೀವಕ್ಕೆ ನೆರವಾಗಬೇಕೆಂದು ಸಂಘಟಕರು ತಿಳಿಸಿದ್ದಾರೆ. ವರದಿ:ರಾಘವೇಂದ್ರ ಹಾರ್ಮಣ್.
Month: January 2024
ಎಚ್. ಎಮ್. ಎಮ್. & ವಿ. ಕೆ. ಆರ್. ಶಾಲೆಯ ಗಾರ್ಗಿ ದೇವಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಕುಂದಾಪುರ(ಜ.02): ಇಲ್ಲಿನ ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಗಾರ್ಗಿ ದೇವಿ 2023-2024ನೇ ಸಾಲಿನ ಕಲೋತ್ಸವದ ಭರತನಾಟ್ಯ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಈಕೆ ದೇವಲ್ಕುಂದದ ಅಶೋಕ ಮತ್ತು ನಾಟ್ಯ ಗುರು ವಿದೂಷಿ ಪ್ರವಿತಾ ಇವರ ಪುತ್ರಿ
ಕುಂದಾಪುರ ವಿ. ಕೆ. ಆರ್. ಶಾಲೆಯಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ
ಕುಂದಾಪುರ ( ಜ.02): ವಿದ್ಯಾರ್ಥಿಗಳ ಜೀವನದಲ್ಲಿ ಹಲವಾರು ಅವಕಾಶಗಳು ಬರುತ್ತವೆ. ಕೇವಲ ಒಂದೇ ಗುರಿ ನಮ್ಮದಾಗಬಾರದು. ನಮ್ಮ ಆಯ್ಕೆ ಮುಕ್ತವಾಗಿರಬೇಕು ಎಂದು ಮಣಿಪಾಲ ಡಾಟ್ ನೆಟ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕರಾದ ಶ್ರೀ ನಾಗರಾಜ ಕಟೀಲ್ ಹೇಳಿದರು. ಅವರು ಕುಂದಾಪು ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಪ್ರೌಢ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಆಯೋಜಿಸಿದ […]
ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ: ಕಲಾಂ ಜೀವನ ಧರ್ಮ ಮತ್ತು ಮಿಷನ್ ಇಂಡಿಯಾ 2020 ಉಪನ್ಯಾಸ
ಕುಂದಾಪುರ ( ಜ,02): ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಇಲ್ಲಿ ಕಲಾಂ ಜೀವನ ಧರ್ಮ ಮತ್ತು ಮಿಷನ್ ಇಂಡಿಯಾ 2020 ರ ಕುರಿತಾಗಿ ಹಿರಿಯ ಸಾಹಿತಿ DRDO ಕೇಂದ್ರ ರಕ್ಷಣಾ ಸಂಶೋಧನಾ ಇಲಾಖೆಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಅಬ್ದುಲ್ ಕಲಾಂ ಒಡನಾಡಿನಾಗಿದ್ದ ಶ್ರೀ ಜಯಪ್ರಕಾಶ ಪುತ್ತೂರುವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು. ಹಿರಿಯ ಉಪನ್ಯಾಸಕರಾದ ಶ್ರೀ ಭುಜಂಗ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರಾಂಶುಪಾಲರಾದ ಶ್ರೀರಾಮಕೃಷ್ಣ […]
ಬಂಟರ ಯಕ್ಷ ಸಂಭ್ರಮ -ಯಕ್ಷ ಭೂಷಣ ಪ್ರಶಸ್ತಿ ಪ್ರಧಾನ
ಕುಂದಾಪುರ. (ಡಿ,30) : ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಇಲ್ಲಿನ ಆರ್ ಎನ್ ಶೆಟ್ಟಿ ಸಭಾಭವನದಲ್ಲಿ ಶನಿವಾರ ಬಂಟರ ಯಕ್ಷ ಸಂಭ್ರಮ ಹಾಗೂ ಬಂಟ ಯಕ್ಷ ಭೂಷಣ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಸಮಾರಂಭವನ್ನು ಆಸ್ಟ್ರೇಲಿಯಾದ ಉದ್ಯಮಿ ಶ್ರೀ ದಯಾನಂದ ಶೆಟ್ಟಿ ಉದ್ಘಾಟಿಸಿದರು. ಇಂಗ್ಲೆಂಡ್ ನ ವೈದ್ಯ ಡಾ.ಅಸೋಡು ಅನಂತರಾಮ್ ಶೆಟ್ಟಿ ಅವರು 10 ಮಂದಿ ಸಾಧಕರಿಗೆ ಬಂಟ ಯಕ್ಷ ಭೂಷಣ ಪ್ರಶಸ್ತಿ ಪ್ರಧಾನ ಮಾಡಿದರು. ಯಕ್ಷದ್ರುವ […]
ಡಾ|ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ: ವಿಸ್ತರಣಾ ಚಟುವಟಿಕೆ
ಕುಂದಾಪುರ (ಜ.01) : ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ನೇಚರ್ ಕ್ಲಬ್ ಆಶ್ರಯದಲ್ಲಿ ಆಲೂರಿನ ಗುರುವಂದನ ಪೊಟರಿಯಲ್ಲಿ ವಿಸ್ತರಣಾ ಚಟುವಟಿಕೆ ಜರುಗಿತು. ಸಂಸ್ಥಾಪಕರಾದ ಶ್ರೀ ರಘುರಾಮ್ ಕುಲಾಲ್ ವಿದ್ಯಾರ್ಥಿಗಳಿಗೆ ಕುಂಬಾರಿಕೆಯ ಮೇಲೆ ಆಧುನಿಕತೆಯ ಪರಿಣಾಮವನ್ನು ವಿವರಿಸುವ ಜೊತೆಗೆ, ಸರ್ಕಾರ ಒದಗಿಸುವ ಹಲವಾರು ಯೋಜನೆಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ವರ್ತಮಾನದ ಪ್ಲಾಸ್ಟಿಕ್ ಯುಗದಲ್ಲಿ ಅಳಿಯುವಿಕೆಯ ಅಂಚಿನಲ್ಲಿರುವ ಕುಂಬಾರಿಕೆಗೆ ವಿಶ್ವಮಾನ್ಯತೆ ದೊರೆಯುವಂತೆ ಮಾಡುವ […]