ಕುಂದಾಪುರ ( ಜ,02): ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಇಲ್ಲಿ ಕಲಾಂ ಜೀವನ ಧರ್ಮ ಮತ್ತು ಮಿಷನ್ ಇಂಡಿಯಾ 2020 ರ ಕುರಿತಾಗಿ ಹಿರಿಯ ಸಾಹಿತಿ DRDO ಕೇಂದ್ರ ರಕ್ಷಣಾ ಸಂಶೋಧನಾ ಇಲಾಖೆಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಅಬ್ದುಲ್ ಕಲಾಂ ಒಡನಾಡಿನಾಗಿದ್ದ ಶ್ರೀ ಜಯಪ್ರಕಾಶ ಪುತ್ತೂರುವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು.
ಹಿರಿಯ ಉಪನ್ಯಾಸಕರಾದ ಶ್ರೀ ಭುಜಂಗ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರಾಂಶುಪಾಲರಾದ ಶ್ರೀರಾಮಕೃಷ್ಣ ಬಿ.ಜಿ ಯವರು ಮತ್ತು ಹಿರಿಯ ವಿಜ್ಞಾನ ಉಪನ್ಯಾಸಕರಾದ ಶ್ರೀ ಸೋಮಶೇಖರ ಆರ್ ರವರು ಉಪಸ್ಥಿತರಿದ್ದರು.
ರಸಾಯನಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಸುಮಿತ್ರಾ ಸ್ವಾಗತಿಸಿದರೆ, ಜೀವಶಾಸ್ತ್ರ ಉಪನ್ಯಾಸಕ ಶ್ರೀ ಸೋಮಶೇಖರ ಆರ್ ವಂದಿಸಿದರು.
ಉಪನ್ಯಾಸಕ ಶ್ರೀ ಉದಯ ಕುಮಾರ ಶೆಟ್ಟಿ ಕಾಳಾವರ ಕಾರ್ಯಕ್ರಮ ನಿರೂಪಿಸಿದರು.