ಕಾರ್ಕಳ(ಫೆ.08): ಇಲ್ಲಿನ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಮಹತ್ವಾಕಾಂಕ್ಷಿ ಯೋಜನೆಯಾದ “ಮೊಬೈಲ್ ಬಿಡಿ, ಪುಸ್ತಕ ಹಿಡಿ” ಅಭಿಯಾನ ಯುವಜನರು ಮತ್ತು ವಿದ್ಯಾರ್ಥಿಗಳನ್ನು ಓದಿನ ಕಡೆಗೆ ಸೆಳೆಯಬೇಕು, ಮೊಬೈಲ್ ನ ಬಳಕೆಯನ್ನು ಹಿತಮಿತವಾಗಿ ಮಾಡಬೇಕೆಂಬ ಉದ್ದೇಶವಿರಿಸಿಕೊಂಡು ಕಾರ್ಕಳ, ಉಡುಪಿ, ಪುತ್ತೂರು, ಸುಳ್ಯದ ಶಾಲೆಗಳಿಗೆ ಮತ್ತು ಆಸಕ್ತ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸುವ ಕಾರ್ಯ ನಡೆಯಿತು. ಸಾಹಿತ್ಯಕ್ಷೇತ್ರ ಓದುಗರ ಬರ ಎದುರಿಸುತ್ತಿದೆ ಎಂಬ ಮಾತಿನ ನಡುವೆಯೂ “ದಿನಕ್ಕೊಂದು ಪುಸ್ತಕ”ವನ್ನು ಶಾಲೆಗಳಿಗೆ ತಲುಪಿಸುವ ಕಾರ್ಯ ಮಾಡಲಾಯಿತು. ಕಾರ್ಕಳ […]
Month: February 2024
ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಚಿತ್ರಕಲಾ ಶಿಕ್ಷಕ ರಮೇಶ್ ಹಾಂಡರಿಗೆ ಅಭಿನಂದನೆ
ಕುಂದಾಪುರ( ಫೆ.03): ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೆಂಗಳೂರು, ಶಿಕ್ಷಕರ ಕಲ್ಯಾಣ ನಿಧಿ, ಬೆಂಗಳೂರು, ಜಿಲ್ಲಾ ಪಂಚಾಯತ್ ಮತ್ತು ಶಾಲಾ ಶಿಕ್ಷಣ ಇಲಾಖೆ ತುಮಕೂರು ಇವರ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕg ಸಹಪಠ್ಯ ಚಟುವಟಿಕೆಗಳ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. […]
ಈ ಅವಿಸ್ಮರಣೀಯ ದಿನ ಸಾಧಿಸುವ ಛಲ ಇನ್ನಷ್ಟು ಹೆಚ್ಚು ಮಾಡಿದೆ: ಗಾರ್ಗಿ ದೇವಿ
ಕುಂದಾಪುರ(ಫೆ.03): ನನ್ನ ಜೀವನದಲ್ಲಿ ಇದೊಂದು ಅವಿಸ್ಮರಣೀಯ ಕ್ಷಣ. ಜೀವನದಲ್ಲಿ ಏನಾದರನ್ನು ಸಾಧಿಸುವ ಛಲ ಹೊಂದಿದ್ದೇನೆ. ಆದರೆ ಸಾಧನೆಯ ಪಥದ ಬಾಗಿಲು ನನ್ನ ಜೀವನದಲ್ಲಿ ಬೇಗನೆ ತೆರೆದಿದೆ. ಈ ಮೆರವಣಿಗೆ, ಸನ್ಮಾನ ಎನ್ನುವುದು ನನಗೆ ಸಾಧಿಸುವ ಜವಾಬ್ದಾರಿ ಇನ್ನೂ ಹೆಚ್ಚಾಗಿರಿಸಿದೆ ಎಂದು ರಾಷ್ಟçಮಟ್ಟದ ಕಲೋತ್ಸವದ ಶಾಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದ 9ನೇ ತರಗತಿ ವಿದ್ಯಾರ್ಥಿನಿ ಗಾರ್ಗಿ ದೇವಿ ಹೇಳಿದರು. ಅವರು ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. […]
ಪ್ರವೀಣ್ ಯಕ್ಷಿಮಠ ರವರ ಅಯೋಧ್ಯಾ ಸಂಗ್ರಾಮ ಪುಸ್ತಕ ಅನಾವರಣಗೊಳಿಸಿದ ಪೇಜಾವರ ಶ್ರೀಗಳು
ಕುಂದಾಪುರ (ಫೆ.02): ಪತ್ರಕರ್ತ, ಯುವ ಸಾಹಿತಿ ಪ್ರವೀಣ್ ಯಕ್ಷಿಮಠರವರ ಅಯೋಧ್ಯಾ ಸಂಗ್ರಾಮ’ ಪುಸ್ತಕವನ್ನು ಅಯೋಧ್ಯೆಯ ಪ್ರಭು ಶ್ರೀರಾಮನ ಸನ್ನಿಧಿಯಲ್ಲಿ ಫೆಬ್ರವರಿ 02 ರಂದು ಪೇಜಾವರ ಶ್ರೀಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥರು ಅನಾವರಣಗೊಳಿಸಿದರು. ಈ ಸಂಧರ್ಭದಲ್ಲಿ ರವೀಂದ್ರ ಹೇರೂರು, ಖ್ಯಾತ ಲೆಕ್ಕಪರಿಶೋಧಕರಾದ ಶ್ರೀ ಜೀವನ್ ಶೆಟ್ಟಿ, ವೇದಮೂರ್ತಿ ಶ್ರೀಆನಂದ ಭಟ್, ಹಾಗೂ ಶ್ರೀ ರಾಘವೇಂದ್ರ ತಂತ್ರಿಗಳು ಹಾಗೂ ಗೋರಕ್ಪುರ ಹಿಂದು ಯುವವಾಹಿನಿಯ ಮಹಾಮಂತ್ರಿ ದೀಪಕ್ ಮಿಶ್ರಾ ಉಪಸ್ಥಿತರಿದ್ದರು. ಅಯೋಧ್ಯಾ ಸಂಗ್ರಾಮ ಪುಸ್ತಕ […]
ಕುಂದಾಪುರ: ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿoದ ಕೈಗಾರಿಕಾ ಪರಿವೀಕ್ಷಣೆ
ಕುಂದಾಪುರ(ಫೆ.2): ಇಲ್ಲಿನ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ‘ಕೈಗಾರಿಕಾ ಪರಿವೀಕ್ಷಣೆಯ ಅಂಗವಾಗಿ ಉಪ್ಪೂರಿನ ‘ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ‘ ಘಟಕ ಹಾಗೂ ಮಸಾಲೆ ಉತ್ಪನ್ನ ಮತ್ತು ಮಾರಾಟದ ಗೃಹ ಕೈಗಾರಿಕಾ ಕೇಂದ್ರವಾದ ವಕ್ವಾಡಿಯ ‘ಆನೆಗುಡ್ಡೆ ಉಪಾಧ್ಯಾಯ ಇಂಡಸ್ಟ್ರೀಸ್ ‘ ಗೆ ಭೇಟಿಯನ್ನು ಆಯೋಜಿಸಲಾಯಿತು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸುಷ್ಮಾ ಶೆಣೈ ಮತ್ತು ಇತರ ಉಪನ್ಯಾಸಕರು ವಿದ್ಯಾರ್ಥಿಗಳೊಂದಿಗೆ […]
ಸರಕಾರಿ ಪಿ ಯು ಕಾಲೇಜು ಕುಂದಾಪುರ: ಉಪನ್ಯಾಸಕ ಸೋಮಶೇಖರ ಆರ್ ಇವರಿಗೆ ಸನ್ಮಾನ
ಕುಂದಾಪುರ ( ಫೆ.1): ಸರಕಾರಿ ಪದವಿ ಪೂರ್ವ ಕಾಲೇಜು, ಕುಂದಾಪುರ ಇಲ್ಲಿ ಸುಮಾರು ಏಳು ವರ್ಷಗಳ ಕಾಲ ಜೀವಶಾಸ್ತ್ರ ಉಪನ್ಯಾಸಕರಾದ ಶ್ರೀ ಸೋಮಶೇಖರ ಆರ್ ರವರು ವಯೋನಿವೃತ್ತಿ ಹೊಂದಿದ ಪ್ರಯುಕ್ತ ಕಾಲೇಜಿನಲ್ಲಿ ಇತ್ತೀಚಿಗೆ ಪ್ರಾಂಶುಪಾಲರಾದ ಶ್ರೀ ರಾಮಕೃಷ್ಣ ಬಿ.ಜಿ ಯವರ ಅಧ್ಯಕ್ಷತೆಯಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಹಿರಿಯ ಉಪನ್ಯಾಸಕರಾದ ಶ್ರೀ ಭುಜಂಗ ಶೆಟ್ಟಿ, ಉಪನ್ಯಾಸಕ ಕಾರ್ಯದರ್ಶಿ ಕಾಳಾವರ ಶ್ರೀ ಉದಯ ಕುಮಾರ ಶೆಟ್ಟಿ ಶುಭ ಹಾರೈಸಿದರು. […]
ಎಚ್.ಎಮ್.ಎಮ್ & ವಿ.ಕೆ.ಆರ್. ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ 75ನೇ ಗಣರಾಜ್ಯೋತ್ಸವ
ಕುಂದಾಪುರ (ಜ.26) : ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ 75ನೇ ಗಣರಾಜ್ಯೋತ್ಸವವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿರುವ ಕುಂದಾಪುರದ ವಿದ್ಯುತ್ ಗುತ್ತಿಗೆದಾರರೂ ಆಗಿರುವ ಕೆ. ರತ್ನಾಕರ್ ನಾಯಕ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ವಿದ್ಯಾವಂತರಾಗುತ್ತಾರೆ, ಆರ್ಥಿಕವಾಗಿ ಸಭಲರಾಗುತ್ತಾರೆ, ಹಣವಂತರಾಗುತ್ತಾರೆ. ಆದರೆ ಹೃದಯವಂತರಾಗುವುದೂ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಸಂವಿಧಾನದ ಶಿಲ್ಪಿ ಅಂಬೇಡ್ಕರ್ ಆದರೆ ಇಂದಿನ […]
ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಶಾಲೆ : ಕರಾಟೆಯಲ್ಲಿ ಸಾಧನೆ
ಕುಂದಾಪುರ (ಫೆ.1) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಏಷಿಯನ್ ಶೀಟೋ – ರೂ ಸ್ಪೋರ್ಟ್ಸ್ ಕರಾಟೆ – ಡೊ ಅಸೋಸಿಯೇಷನ್ ವತಿಯಿಂದ ಮುಂಬೈನಲ್ಲಿ ನಡೆದ 7th ಇಂಟರ್ ನ್ಯಾಷನಲ್ ಓಪನ್ ಕರಾಟೆ ಚಾಂಪಿಯನ್ ಶಿಪ್ – 2024 ಏಷ್ಯಾ ಕಪ್ ನಲ್ಲಿ ಭಾಗವಹಿಸಿ ಹಲವು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಾದ ಆರ್ಯನ್ ಕೆ ಪೂಜಾರಿ, ಅರ್ನೋನ್ ಡಿ ಅಲ್ಮೇಡಾ, ಅಥರ್ವ […]
ವಿಜಯ ಮಕ್ಕಳಕೂಟ ಶಾಲೆಯ ವಿದ್ಯಾರ್ಥಿನಿ ಸಿಂಚನ ಗೆ ರಾಜ್ಯಪುರಸ್ಕಾರ
ಕುಂದಾಪುರ (ಜ.27): ಬೆಂಗಳೂರಿನ ರಾಜಭವನದಲ್ಲಿ ಇತ್ತೀಚೆಗೆ ನಡೆದ ಸ್ಕೌಟ್ ಹಾಗೂ ಗೈಡ್ಸ್ ರಾಜ್ಯ ಪುರಸ್ಕಾರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅತ್ರಾಡಿ-ವಂಡ್ಸೆಯ ವಿಜಯ ಮಕ್ಕಳಕೂಟ ಶಾಲೆಯ ವಿದ್ಯಾರ್ಥಿನಿ ಸಿಂಚನ ಕ್ರಷ್ಣ ಮೊಗವೀರ ಇವರಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಶಸ್ತಿ ಪತ್ರ ಪ್ರದಾನ ಮಾಡಿದರು. ಇಕೆ ಕುಂದಾಪುರದ ಬಾಳಿಕೆರೆ ನಿವಾಸಿ ಶ್ರೀಮತಿ ಶ್ಯಾಮಲಾ ಹಾಗೂ ಶ್ರೀ ಕ್ರಷ್ಣ ಮೊಗವೀರ ರವರ ಪುತ್ರಿ.
ಎಸ್.ಆರ್.ಕೆಟರರ್ಸ್ ಬೆಂಗಳೂರು: ಹೊಸ ವರ್ಷದ ಕ್ಯಾಲೆಂಡರ್ ಅನಾವರಣಗೊಳಿಸಿ ಶುಭ ಹಾರೈಸಿದ ಶ್ರೀ ಸುಬುಧೇಂದ್ರ ತೀರ್ಥರು
ಬೆಂಗಳೂರು (ಜ.9): ಬೆಂಗಳೂರಿನ ಪ್ರಸಿದ್ದ ಕೆಟರಿಂಗ್ ಸಂಸ್ಥೆಯಾದ ಕುಂದಾಪುರ ಮೂಲದ ಶ್ರೀ ರಾಘವೇಂದ್ರ ಹಾರ್ಮಣ್ ಮಾಲಕತ್ವದ ಎಸ್.ಆರ್.ಕ್ಯಾಟರರ್ಸ ನ ಹೊಸ ವರ್ಷದ ಕ್ಯಾಲೆಂಡರ್ ನ್ನು ಬೆಂಗಳೂರಿನ ಜಯನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂತ್ರಾಲಯದ ಪರಮಪೂಜ್ಯ ಸ್ವಾಮಿಜಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ಇತ್ತೀಚೆಗೆ ಅನಾವರಣಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಎಸ್.ಆರ್.ಕ್ಯಾಟರರ್ಸ ನ ಮಾಲಕ ಶ್ರೀ ರಾಘವೇಂದ್ರ ಹಾರ್ಮಣ್ ಹಾಗೂ ಗುರುದತ್ತ್ ಕುಲಕರ್ಣಿ ಉಪಸ್ಥಿತರಿದ್ದರು.










