ಕುಂದಾಪುರ (ಮೇ 18): ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಆರೋಗ್ಯ ಭಾಗ್ಯ ಯೋಜನೆಯಡಿ ಬೈಂದೂರು ತಾಲೂಕಿನ ಕೊಲ್ಲೂರು ಸಮೀಪದ ಜನ್ನಾಲ್ ನ ಶಂಕರ ಪೂಜಾರಿ ಅವರ ಅನಾರೋಗ್ಯ ನಿಮಿತ್ತ ವೈದ್ಯಕೀಯ ಚಿಕಿತ್ಸೆಗಾಗಿ ಸಂಘದ ವತಿಯಿಂದ 10000 ರೂಪಾಯಿಯನ್ನು ಆವರ ಮಗಳಾದ ಕುಮಾರಿ ಶ್ರೀರಕ್ಷಾ ಇವರಿಗೆ ಸಂಘದ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಚಕ್ ಮೂಲಕ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಡಾ. ಬಿ.ಬಿ ಹೆಗ್ಡೆ.ಕಾಲೇಜಿನ […]
Month: May 2024
ವಂಡ್ಸೆ: ಸರಕಾರಿ ಪ್ರೌಢಶಾಲೆ ನೆಂಪು -ಹಳೆ ವಿದ್ಯಾರ್ಥಿಗಳ ಪುನರ್ಮಿಲನ
ವಂಡ್ಸೆ (ಮೇ,19): ಸರಕಾರಿ ಪ್ರೌಢಶಾಲೆ ನೆಂಪು ಇದರ 2020-21ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ ಮೇ 19ರಂದು ದಿ. ಸಂಜೀವಿ ಭಾಸ್ಕರ್ ಶೆಟ್ಟಿ ಆಡಿಟೋರಿಯಂನಲ್ಲಿ ನಡೆಯಿತು. ಪ್ರೇಮಾನಂದ ಆಚಾರಿ ವಂಡ್ಸೆ ಪ್ರಾರ್ಥನೆಗೈದು ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ವಿವಿಧ ಕ್ರೀಡೆ, ಸ್ಪರ್ಧೆ, ಸಂಗೀತ ಹಾಗೂ ನ್ರತ್ಯ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಹಳೆ ವಿದ್ಯಾರ್ಥಿಗಳು ತಮ್ಮ ಶಾಲಾ ಜೀವನದ ಮಧುರ ಕ್ಷಣಗಳನ್ನು ಮೆಲುಕು ಹಾಕಿದರು. ಕಳೆದ ವರ್ಷ […]
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಸಾಧನೆಗೈದ ದೀಕ್ಷಿತ್ ಗೆ ಸನ್ಮಾನ
ಕುಂದಾಪುರ (ಮೇ 17): ಕೊರಗ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿ ದೀಕ್ಷಿತ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಸಾಧನೆಗೈದ ಹಿನ್ನೆಲೆಯಲ್ಲಿ ಕುಂದಾಪುರದ ಸಹಾಯಕ ಕಮಿಷನರ್ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತಾಧಿಕಾರಿ ಎಸ್. ಆರ್. ರಶ್ರೀ ರವರು ಸನ್ಮಾನಿಸಿ ಶುಭಹಾರೈಸಿದರು. ದೀಕ್ಷಿತ್ ಮುಂದಿನ ದಿನಗಳಲ್ಲೂ ಉತ್ತಮ ಸಾಧನೆಗೈದು ಉನ್ನತ ಸ್ಥಾನದಲ್ಲಿ ಗುರುತಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಹುಸೇನ್ ಹೈಕಾಡಿಯವರಿಗೆ ಸನ್ಮಾನ
ಕುಂದಾಪುರ( ಮೇ,18): ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಂದಾಪುರ ಲೆಜಿನ್ ನ ಪದ ಪ್ರದಾನ ಸಮಾರಂಭ ವು ಕುಂದಾಪುರದ ಜೇಸಿ ಭವನ ದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ರಾಷ್ಟ್ರೀಯ ಉಪಾಧ್ಯಕ್ಷ ರಾದ ಹುಸೇನ್ ಹೈಕಾಡಿ ಯವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಧ್ಯಕ್ಷ ರಾದ ಚಿತ್ರ ಕುಮಾರ್ ರಾಷ್ಟ್ರೀಯ ಸಂಯೋಜಕ ಗಿರೀಶ್ ಶಾನಭಾಗ್, ಬಿಂದು ತಂಕಪ್ಪನ್, ಜಗದೀಶ್ ಕೆಮ್ಮಣ್ಣು, ಪ್ರೀತಿ ತಂಕಪ್ಪನ್, ಕುಂದಾಪುರ ಜೇಸಿ […]
ಕಂಪೆನಿ ಸೆಕ್ರೆಟರಿ ಆಫ್ ಇಂಡಿಯಾ – ಅರ್ಹತಾ ಪರೀಕ್ಷೆ(CSEET): ಜನತಾ ಪಿ ಯು ಕಾಲೇಜಿನ ಧೀರಜ್ ಆಯ್ಕೆ
ಹೆಮ್ಮಾಡಿ( ಮೇ ,17): ಇನ್ಸಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ ಮೇ 4, 2024 ರಂದು ನಡೆಸಿದ CSEET ಅರ್ಹತಾ ಪರೀಕ್ಷೆಯಲ್ಲಿ ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಧೀರಜ್ 119 /200 ಅಂಕಗಳನ್ನು ಪಡೆದು ತೇರ್ಗಡೆಯಾಗುವ ಮೂಲಕ ಮುಂದಿನ ಹಂತದ ಪರೀಕ್ಷೆಗೆ ಅರ್ಹತೆ ಪಡೆದಿದ್ದಾನೆ. ಇನ್ಸಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ ನಡೆಸುವ ರಾಷ್ಟ್ರಮಟ್ಟದ ಪರೀಕ್ಷೆ ಇದಾಗಿದ್ದು ಜನತಾ ಪದವಿಪೂರ್ವ ಕಾಲೇಜಿನವಿದ್ಯಾರ್ಥಿ ಧೀರಜ್ ಪಿಯುಸಿ ಯಲ್ಲಿಯೇ […]
ಎಂ ಸಿ ಎನ್ ನಲ್ಲಿ ವಿಶ್ವ ದಾದಿಯರ ದಿನಾಚರಣೆ
ಕುಂದಾಪುರ (ಮೇ,16): ಖ್ಯಾತ ದಾದಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ಪ್ರಯುಕ್ತ ಆಚರಿಸಲ್ಪಡುವ ವಿಶ್ವ ದಾದಿಯರ ದಿನವನ್ನು ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಸಭಾಂಗಣದಲ್ಲಿ ಮೇ.13 ರಂದು ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದರ ಪ್ರಯುಕ್ತ ಬಿ. ಎಸ್.ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ‘ಬೇಸಿಕ್ ಲೈಫ್ ಸಪೋರ್ಟ್ ‘(ಬಿ. ಎಲ್.ಎಸ್) ತರಬೇತಿಯನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಶ್ರೀಯುತ ಅನೀಶ್ ಐಸಾಕ್ ರವರು (ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಸರ್ಟಿಫೈಡ್ ಟ್ರೈನರ್) ಫ್ಲಾರೆನ್ಸ್ ನೈಟಿಂಗೇಲ್ […]
ಕಂಪೆನಿ ಸೆಕ್ರೆಟರಿ ಆಫ್ ಇಂಡಿಯಾ – ಅರ್ಹತಾ ಪರೀಕ್ಷೆ(CSEET): ಕ್ರಿಯೇಟಿವ್ ಪಿಯು ಕಾಲೇಜಿನ 21 ವಿದ್ಯಾರ್ಥಿಗಳು ಆಯ್ಕೆ
ಕಾರ್ಕಳ(ಮೇ,16): ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರಿ ಆಫ್ ಇಂಡಿಯಾ ರವರು ಮೇ 4, 2024 ರಲ್ಲಿ ನಡೆಸಿದ CSEET ಅರ್ಹತಾ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪ.ಪೂ ಕಾಲೇಜಿನ ವಿದ್ಯಾರ್ಥಿಗಳಾದ ಭಕ್ತಿ ಕಾಮತ್, ಸಾನ್ವಿ ರಾವ್, ಶೆಟ್ಟಿ ತ್ರಿಶಾ ವಿಠ್ಠಲ್, ಹೃತಿಕ್,ಜೀವನ್ ಗೌಡ, ಆಶೆಲ್,ಕೀರ್ತಿ ಪಾಟ್ಕರ್, ಅನ್ವಿತ, ಭವಿಷ್ಯ ಶೆಟ್ಟಿ, ರಾಹುಲ್, ಅನನ್ಯ ಜೈನ್, ಪ್ರತ್ವೀಕ್, ಪ್ರಥಮ್,A.S ಚಿನ್ಮಯ, ಪ್ರಜ್ವಲ್ ರಾವ್, ಸುಖಿ ಸುಭಾಶ್, ಶ್ರೇಯಾ, ವಿನಯ್ ಪ್ರಶಾಂತ್, ಸುಪ್ರೀತ್ ಹೆಗ್ಡೆ, […]
ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ: ಪ್ರಾಚ್ಯ ವಸ್ತುಗಳ ಪ್ರದರ್ಶನ
ಕುಂದಾಪುರ (ಎ. 12): ಪ್ರಾಚ್ಯ ವಸ್ತುಗಳ ಪರಿಚಯ ಮತ್ತು ಅವುಗಳ ಉಪಯೋಗದ ಕುರಿತು ವಿದ್ಯಾರ್ಥಿಗಳು ತಿಳಿದುಕೊಳ್ಳುವ ಮೂಲಕ ಪ್ರಾಚೀನ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ ಪ್ರಾಚ್ಯ ವಸ್ತು ಸಂಗ್ರಹ ಸ್ಪರ್ಧೆಯನ್ನು ಉದ್ದೇಶಿಸಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಹೇಳಿದರು. ಈ ಸಂದರ್ಭ ತೀರ್ಪುಗಾರರಾಗಿ ಆಗಮಿಸಿದ ಪತ್ರಕರ್ತ ಮಂಜುನಾಥ ಕಾಮತ್ ಹಾಗೂ ಶ್ರೀಮತಿ ನಿಮಿತಾ […]
ಬಿ. ಬಿ. ಹೆಗ್ಡೆ ಕಾಲೇಜು: ಬಾರ್ಕ್ಲೇಸ್ ಉದ್ಯೋಗ ಮತ್ತು ಸಂದರ್ಶನ ಕೌಶಲ್ಯಗಳು
ಕುಂದಾಪುರ (ಮೇ 13): ಇಲ್ಲಿನ ಪ್ರತಿಷ್ಠಿತ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವೃತ್ತಿ ಮಾರ್ಗದರ್ಶನ ವಿಭಾಗವು ಬಾರ್ಕ್ಲೇಸ್ ಬ್ಯಾಂಕ್ ಪಿಎಲ್ಸಿ ಇದರ ಸಹಯೋಗದೊಂದಿಗೆ ಹಮ್ಮಿಕೊಂಡ 3 ದಿನಗಳ ಉದ್ಯೋಗ ಮತ್ತು ಸಂದರ್ಶನ ಕೌಶಲ್ಯಗಳ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಮೇ ,13 ರಂದು ನೆರವೇರಿಸಿತು. ಅತಿಥಿ ನೆಲೆಯಲ್ಲಿ ಮಾತನಾಡಿದ ಫ್ರೀಲ್ಯಾನ್ಸ್ ಸಾಫ್ಟ್ ಸ್ಕಿಲ್ಸ್ ತರಬೇತುದಾರರಾದ ಶ್ರೀ ದಾಮೋದರನ್ ಸಿ. ಅವರು ಸಮಯ ನಿರ್ವಹಣೆಯು ವ್ಯಕ್ತಿಯು ಯಶಸ್ಸನ್ನು ಹೊಂದುವಲ್ಲಿ ಪ್ರಮುಖ […]
ಶ್ರೀ ಬೊಬ್ಬರ್ಯ ದೈವಸ್ಥಾನ ದೇವರ ನೂತನ ಶಿಲಾಮಯ ಆಲಯ ಸಮರ್ಪಣೆ ಮತ್ತು ಪುನಃ ಪ್ರತಿಷ್ಠಾ,ಬ್ರಹ್ಮಕಲಶೋತ್ಸವ
ಬೈಂದೂರು( ಮೇ.06): ಮೇ 5 ರಂದು, ಸ್ಥಳೀಯ ನಾಗೂರು ಕುಂಜಾನುಗುಡ್ಡೆಯಲ್ಲ ಶ್ರೀ ಬೊಬ್ಬರ್ಯ ನೂತನ ಶಿಲಾಮಯ ದೈವಸ್ಥಾನವನ್ನು ಶ್ರೀ ಶ್ರೀ ಶ್ರೀ ಕ ಈಶ ವಿಠ್ಠಲ ದಾಸ ಸ್ವಾಮೀಜಿಯವರು ಶ್ರಿ ಕ್ಷೇತ್ರ ಕೇಮಾರು ಲೋಕಾರ್ಪಣೆಗೊಳಿಸಿದರು . ಸ್ವಾಮೀಜಿಯವರು ದೀನ,ಧನ್ಯತೆ,ದಾನ ಈ ಮೂಲಕ ಪ್ರತಿ ಊರಲ್ಲಿ ನಿರ್ಮಾಣ ಸಾದ್ಯ ಎಂದು ಆಶೀರ್ವಚನ ನೀಡಿದರು. ಹಾಗೆಯೇ ಪುನಃ ಪ್ರತಿಷ್ಠಾ,ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ನಡೆಯಿತು. ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ, ನರಸಿಂಹ ಹಳಗೆರಿ,ಮುಂತಾದವರು ಉಪಸ್ಥಿತರಿದ್ದರು. ವರದಿ : […]