ಕೋಟೇಶ್ವರ ( ಜು,23): ಎಸ್ ಕೆ ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿ ಲಿ. ಮಂಗಳೂರು: ಇದರ ವಜ್ರ ಮಹೋತ್ಸವದ ಸಂಭ್ರಮಾಚರಣೆ 2024 ಪ್ರಯುಕ್ತ ಇದರ ಕೋಟೇಶ್ವರ ಶಾಖೆಯಲ್ಲಿ ವನಮಹೋತ್ಸವ ಮತ್ತು ಸಸಿ ವಿತರಣಾ ಕಾರ್ಯಕ್ರಮ ಜೂನ್ 22 ರಂದು ಜರಗಿತು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪಿ. ಉಪೇಂದ್ರ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ, ವಾರಾಹಿ ಪವರ್ […]
Day: June 23, 2024
ಗಂಗೊಳ್ಳಿ: ಬಿಲ್ಲವರ ಹಿತರಕ್ಷಣಾ ವೇದಿಕೆಯ ವತಿಯಿಂದ ಕಲಿಕಾ ಸಾಮಗ್ರಿಗಳ ಉಚಿತ ವಿತರಣೆ
ಗಂಗೊಳ್ಳಿ(ಜು,20): ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವಲ್ಲಿ ಪರಿಶ್ರಮವನ್ನು ಪಡಬೇಕು. ಆಗ ಯಶಸ್ಸು ತಾನಾಗಿಯೇ ಬರುತ್ತದೆ ಎಂದು ಗಂಗೊಳ್ಳಿಯ ಬಿಲ್ಲವರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜಿ ಗೋಪಾಲ ಪೂಜಾರಿ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಬಿಲ್ಲವರ ಹಿತರಕ್ಷಣಾ ವೇದಿಕೆಯ ವತಿಯಿಂದ ನಡೆದ ಉಚಿತ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿಗಳ ವಿತರಣಾ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು. ಯಾವುದೇ ಸಮಾಜದ ಅಭಿವೃದ್ಧಿಯಲ್ಲಿ ಶಿಕ್ಷಣವು ಬಹಳ ಪ್ರಮುಖ […]
ಸರಸ್ವತಿ ವಿದ್ಯಾಲಯದಲ್ಲಿ ಉಪನ್ಯಾಸಕರಿಗೆ ಬೀಳ್ಕೊಡುಗೆ
ಗಂಗೊಳ್ಳಿ(ಜು,21): ಇಲ್ಲಿನ ಸರಸ್ವತಿ ವಿದ್ಯಾಲಯ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಮತ್ತು ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸ ವಿಭಾಗದ ಉಪನ್ಯಾಸಕರಾಗಿ 34 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ವಯೋನಿವೃತ್ತಿ ಹೊಂದಿದ ಹೆಚ್ ಭಾಸ್ಕರ ಶೆಟ್ಟಿ ಮತ್ತು ನಿವೃತ್ತಿಯ ಬಳಿಕ ಎರಡು ವರ್ಷಗಳ ಕಾಲ ದೈಹಿಕ ಶಿಕ್ಷಣ ಉಪನ್ಯಾಸಕರಾಗಿ ವಿಶೇಷ ಸೇವೆಯನ್ನು ಸಲ್ಲಿಸಿದ ನಾಗರಾಜ ಶೆಟ್ಟಿ ಅವರ ಬೀಳ್ಕೊಡುಗೆ ಸಮಾರಂಭವು ಸರಸ್ವತಿ ವಿದ್ಯಾಲಯದ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ […]
ಬಿ. ಬಿ. ಹೆಗ್ಡೆ ಕಾಲೇಜು: ವಿಶ್ವ ಯೋಗ ದಿನ
ಕುಂದಾಪುರ (ಜೂನ್ 21): ಯೋಗ ಮನುಷ್ಯನ ಶರೀರ ಮತ್ತು ಮನಸ್ಸನ್ನು ಸಮತೋಲನದಲ್ಲಿರಿಸಲು ಸಹಕಾರಿಯಾಗುತ್ತದೆ. ಯೋಗವನ್ನು ಪ್ರಾಣಯಾಮ, ದೈಹಿಕ ಕಸರತ್ತು ಎನ್ನುವ ಸೀಮಿತ ಅರ್ಥದಲ್ಲಿ ಗ್ರಹಿಸದೆ, ಅದು ಬದುಕಿನ ಸರ್ವಾಂಗೀಣ ವಿಕಸನಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ತಿಳಿಯಬೇಕು. ಯೋಗ ಆತ್ಮ ದರ್ಶನಕ್ಕೆ ಹೊರತು ಪ್ರದರ್ಶನಕ್ಕೆ ಅಲ್ಲ ಎಂದು ನಿವೃತ್ತ ಶಿಕ್ಷಕ, ಯೋಗ ತರಬೇತುದಾರ ಶ್ರೀ ಕರುಣಾಕರ ಶೆಟ್ಟಿ ಕಟ್ಕೇರಿ ಹೇಳಿದರು. ಅವರು ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ […]
ಕುಂದಾಪುರ: ಆರ್.ಎನ್.ಶೆಟ್ಟಿ ಪಿ ಯು ಕಾಲೇಜಿನ ವಿದ್ಯಾರ್ಥಿಗಳಿಂದ ಕೋಡಿ ಸೀ ವಾಕ್ ನಲ್ಲಿ ಯೋಗ ಪ್ರದರ್ಶನ
ಕುಂದಾಪುರ(ಜು.23):ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಕುಂದಾಪುರದ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಕೋಡಿ ಸಮುದ್ರ ತೀರದ ಸೀ ವಾಕ್ ನಲ್ಲಿ ಯೋಗ ಪ್ರದರ್ಶನ ನಡೆಯಿತು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ರಾಮ್ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಈ ಯೋಗ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.
ಯುವ ಬಂಟರ ಸಂಘದಿಂದ ಗ್ರಹ ಚೇತನಕ್ಕೆ ಆರ್ಥಿಕ ನೆರವು
ಕುಂದಾಪುರ (ಜೂ,15): ಕುಂದಾಪುರ ತಾಲೂಕು ಯುವ ಬಂಟರ ಸಂಘದ ಗ್ರಹ ಚೇತನ ಯೋಜನೆಯಡಿಯಲ್ಲಿ ಯಡಾಡಿ ಮತ್ಯಾಡಿ ಗ್ರಾಮದ ಕ್ಯಾಸನಮಕ್ಕಿ ಸಂಜೀವ ಎನ್ನುವವರ ಮನೆಗೆ ದುಷ್ಕರ್ಮಿ ರಾತ್ರಿ ಬೆಂಕಿ ಹಚ್ಚಿದ ಕಾರಣದಿಂದ ಸುಟ್ಟು ಕರಕಲಾದ ಕುಟುಂಬಕ್ಕೆ ತುರ್ತು ಪರಿಹಾರವಾಗಿ ಸಂಘದ ಮಹಾಪೋಷಕರಾದ ಶ್ರೀ ಅರುಣ್ ಕುಮಾರ್ ಹೆಗ್ಡೆ ಅವರ ಶಿಫಾರಸ್ಸಿನ ಮೇರೆಗೆ ಅವರ ಉಪಸ್ಥಿತಿಯಲ್ಲಿ ಆರ್ಥಿಕ ನೆರವಿನ ಚೆಕ್ ನ್ನು ಸಂಘದ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಫಲಾನುಭವಿಗೆ ಹಸ್ತಾಂತರಿಸಿದರು. […]
ಕುಂದಾಪುರದ ಎಚ್. ಎಮ್. ಎಮ್ ಶಾಲೆಯಲ್ಲಿ ಟೀಚರ್ ಟ್ರೈನಿಂಗ್ ವಿಭಾಗ ಆರಂಭ
ಕುಂದಾಪುರ (ಜು .22) : ಇಲ್ಲಿನ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಟೀಚರ್ ಎಜ್ಯುಕೇಶನ್ ವಿಭಾಗವನ್ನು ಆರಂಭಿಸಲಾಗಿದೆ. ಒಂದು ವರ್ಷದ ಅವಧಿಯ ಪ್ರೈಮರಿ ಟೀಚರ್ ಟ್ರೈನಿಂಗ್, ಮೊಂಟೆಸ್ಸರಿ / ನರ್ಸರಿ ಟೀಚರ್ ಟ್ರೈನಿಂಗ್, ಅರ್ಲಿ ಚೈಲ್ಡ್ ಹುಡ್ ಎಜ್ಯುಕೇಶನ್, ಕಮ್ಯುನಿಕೇಶನ್ ಸ್ಕಿಲ್ಸ್ ಅಂಡ್ ಇಂಗ್ಲಿಷ್ ಸ್ಪೀಕಿಂಗ್ ಹಾಗೂ ಕೌನ್ಸ್ ಲಿಂಗ್ & ಗೈಡೆನ್ಸ್ ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ಗಳು ಲಭ್ಯವಿದೆ. ಬಿಎಸ್ಎಸ್ ವೃತ್ತಿಪರ ಶಿಕ್ಷಣ ಆಶ್ರಯದಲ್ಲಿ ನಡೆಸಲ್ಪಡುವ ಈ ಕೋರ್ಸ್ […]