ಕೋಟೇಶ್ವರ ( ಜು,23): ಎಸ್ ಕೆ ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿ ಲಿ. ಮಂಗಳೂರು: ಇದರ ವಜ್ರ ಮಹೋತ್ಸವದ ಸಂಭ್ರಮಾಚರಣೆ 2024 ಪ್ರಯುಕ್ತ ಇದರ ಕೋಟೇಶ್ವರ ಶಾಖೆಯಲ್ಲಿ ವನಮಹೋತ್ಸವ ಮತ್ತು ಸಸಿ ವಿತರಣಾ ಕಾರ್ಯಕ್ರಮ ಜೂನ್ 22 ರಂದು ಜರಗಿತು.
ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪಿ. ಉಪೇಂದ್ರ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ, ವಾರಾಹಿ ಪವರ್ ಪ್ರಾಜೆಕ್ಟ್ ನ ನಿವೃತ್ತ ಎಂಜಿನಿಯರ್ ಹಮ್ಜಾ ಪಿ ಎಮ್, ದೇವಿ ಮಹಿಳಾ ಮಂಡಳಿ ಗೌರವ ಅಧ್ಯಕ್ಷರಾದ ವನಜಾಕ್ಷಿ , ಸಂಸ್ಥೆಯ ನಿರ್ದೇಶಕರಾದ ಯಜ್ಞೇಶ್ವರ ಆಚಾರ್ಯ ಮತ್ತು ವಿಶ್ವಜ್ಞ ಮೂರ್ತಿ , ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾದ ಯಜ್ಞೆಶ್ವರ ಆಚಾರ್ಯ ಹಾಗೂ ಶಾಖಾ ವ್ಯವಸ್ಥಾಪಕಿ ಪೂರ್ಣಿಮಾ ಎಸ್ ಇವರ ಉಪಸ್ಥಿತಿಯಲ್ಲಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಂಡಿತು.
ಮುಖ್ಯ ಅತಿಥಿಗಳಾದಂತಹ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ, ಹಮ್ಜಾ ಪಿ ಎಮ್ ಹಾಗೂ ಮಹಿಳಾ ಮಂಡಳಿ ಗೌರವ ಅಧ್ಯಕ್ಷರಾದ ವನಜಾ ಇವರು ವನಮಹೋತ್ಸವದ ಉಪಯುಕ್ತತೆ ಹಾಗೂ ಸಂಸ್ಥೆಯ ಬಗ್ಗೆ ಪ್ರಾಸ್ತಾವಿಕ ನುಡಿಯನ್ನು ಆಡಿದರು, ಶಾಖೆಯ ಸಿಬ್ಬಂದಿಯಾದ ರಾಜೀವಿ ಆಚಾರ್ಯ ಇವರು ಧನ್ಯವಾದ ಸಮರ್ಪಿಸಿದರು ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ನಿವೃತ್ತ ಸಿಬ್ಬಂದಿಗಳಿಗೂ , ಗ್ರಾಹಕರಿಗೂ ಸಸಿಯನ್ನು ವಿತರಿಸಿ ಸಿಹಿ ನೀಡಲಾಯಿತು.
ಶಾಖೆಯ ಸಿಬ್ಬಂದಿಯಾದ ಶಿವರಾಜ್ ಕೆ.ಎಸ್.ಆಚಾರ್ಯ ಇವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಶಾಖಾ ವ್ಯವಸ್ಥಾಪಕಿ ಪೂರ್ಣಿಮ ಎಸ್ ಆಚಾರ್ಯ ಆಚಾರ್ಯ ಇವರು ಸಮಾರಂಭಕ್ಕೆ ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು.
ವನಮಹೋತ್ಸವ ಕಾರ್ಯಕ್ರಮಕ್ಕೆ 100 ಗಿಡಗಳನ್ನು ಉಚಿತವಾಗಿ ನೀಡಿರುವ ಕುಂದಾಪುರದ ಅರಣ್ಯಧಿಕಾರಿ ಕಿರಣ್ ಬಾಬು ಇವರಿಗೆ ಶಾಖೆಯ ಪ್ರಭಾರ ವ್ಯವಸ್ಥಾಪಕರಾದ ಪೂರ್ಣಿಮಾ ಆಚಾರ್ಯರವರು ನಮ್ಮ ಸಂಸ್ಥೆಯ ಪರವಾಗಿ ಧನ್ಯವಾದ ಸಮರ್ಪಿಸಿದರು.