ಗಂಗೊಳ್ಳಿ(ಜು,19): ಇಲ್ಲಿನ ಹೆಬ್ಬಾಗಿಲು ಮನೆ, ಕಾಯ ದೇವಾಡಿಗ ಯಾನೆ ಕಾವೇರಿ ದೇವಾಡಿಗ ಅಲ್ಪ ಕಾಲದ ಅಸೌಖ್ಯದ ಬಳಿಕ ಜುಲೈ 18 ರ ರಾತ್ರಿ ಸ್ವ ಗೃಹದಲ್ಲಿ ನಿಧನ ಹೊಂದಿದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಮೃತರು ಮೂರು ಪುತ್ರರು ಹಾಗೂ ಮೂರು ಪುತ್ರಿಯರನ್ನು ಅಗಲಿದ್ದಾರೆ.
Month: July 2024
ಮೊಗವೀರ ಯುವ ಸಂಘಟನೆ, ಹೆಮ್ಮಾಡಿ ಘಟಕ : ವನ ಮಹೋತ್ಸವ ಹಾಗೂ ಗಿಡ ವಿತರಣೆ
ಹೆಮ್ಮಾಡಿ (ಜು, 19): ಮೊಗವೀರ ಯುವ ಸಂಘಟನೆ( ರಿ. ),ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕದ ನೇತೃತ್ವದಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ ),ಅಂಬಲಪಾಡಿ ಉಡುಪಿ, ಗೀತಾನಂದ ಫೌಂಡೇಶನ್ ಮಣೂರು ಕೋಟ, ಮೊಗವೀರ ಮಹಾಜನ ಸೇವಾ ಸಂಘ (ರಿ. ),ಬಗ್ವಾಡಿ ಹೋಬಳಿ ಕುಂದಾಪುರ ಶಾಖೆ, ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ(ನಿ )ಹೆಮ್ಮಾಡಿ, ಮಹಿಷಾಸುರ ಮರ್ದಿನಿ ಸ್ತ್ರೀಶಕ್ತಿ ಬಗ್ವಾಡಿ ಇವರ ಸಹಕಾರದೊಂದಿಗೆ ವನ ಮಹೋತ್ಸವ ಹಾಗೂ ಗಿಡ ವಿತರಣಾ ಕಾರ್ಯಕ್ರಮ ಬಗ್ವಾಡಿ […]
ಬಿ. ಬಿ. ಹೆಗ್ಡೆ ಕಾಲೇಜು: ವಿಶಾಲಾಕ್ಷಿ ಬಿ. ಹೆಗ್ಡೆಯವರ ಸಂಸ್ಮರಣೆ
ಕುಂದಾಪುರ (ಜುಲೈ 18) : ಡಾ| ಬಿ. ಬಿ. ಹೆಗ್ಡೆ ಕಾಲೇಜಿನ ಮಹಾಪೋಷಕರಾದ ದಿವಂಗತ ವಿಶಾಲಾಕ್ಷಿ ಬಿ. ಹೆಗ್ಡೆಯವರ ಸಂಸ್ಮರಣಾ ಕಾರ್ಯಕ್ರಮವನ್ನು ಕಾಲೇಜಿನ ಇಂಗ್ಲೀಷ್ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ದೀಪ ಪ್ರಜ್ವಲಿಸಿ, ಪುಷ್ಪಾರ್ಚನೆಗೈದು, ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದರು. ಉಪಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಪ್ರಸ್ತಾವಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಶ್ರೀಮತಿ ದೀಪಿಕಾ ಜಿ. ಸ್ವಾಗತಿಸಿ, ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕರಾದ […]
ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್. ಶಾಲೆ : ಕೃಷಿ ಭೂಮಿಯಲ್ಲಿ ಒಂದು ದಿನ
ಕುಂದಾಪುರ (ಜು15): ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಕೃಷಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ನೆಟ್ಟಿ ಮಾಡಿದ ಮಕ್ಕಳ ಆಸಕ್ತಿ ಮತ್ತು ಉತ್ಸಾಹ ನಮಗೆ ಸಂತಸವನ್ನು ನೀಡಿದೆ ಎಂದು ಕುಂದಾಪುರದ ಕೃಷಿಕರಾದ ಕೋಟ್ಯಾನ್ ಮನೆಯವರು ಹೇಳಿದರು. ಎಚ್ ಎಮ್ ಎಮ್ ಮತ್ತು ವಿ ಕೆ ಆರ್ ಶಾಲೆಗಳಲ್ಲಿ ನೋಡುತ್ತ ತಿಳಿ ಮಾಡುತ್ತ ಕಲಿ ಎನ್ನುವ ಆಶಯದೊಂದಿಗೆ ಹಮ್ಮಿಕೊಂಡ ನಮ್ಮ ನಡೆ ಕೃಷಿ ಭೂಮಿ ಕಡೆ ಎನ್ನುವ ವಿದ್ಯಾರ್ಥಿಗಳ ಕಾರ್ಯ ಚಟುವಟಿಕೆ ಕುರಿತು ಅವರು […]
ಬಿ. ಬಿ. ಹೆಗ್ಡೆ ಕಾಲೇಜು: ಸಿ. ಎ. ಇಂಟರ್ಮೀಡಿಯೇಟ್ ಹಾಗೂ ಸಿ.ಎಂ.ಎ ವಿದ್ಯಾರ್ಥಿಗಳ ಸಾಧನೆ
ಕುಂದಾಪುರ (ಜು,16): ಮೇ 2024ರಲ್ಲಿ ನಡೆದ ಸಿ.ಎ. ಇಂಟರ್ಮೀಡಿಯಟ್ ಪರೀಕ್ಷೆಯಲ್ಲಿ ಇಲ್ಲಿನ ಪ್ರಾಕ್ತನ ವಿದ್ಯಾರ್ಥಿಗಳಾದ (2022-23) ಶಾಂಭವಿ ಬಂಗೇರ (120), ರಂಜನ್ ಕುಮಾರ್ ಶೆಟ್ಟಿ (118), ನಾದಶ್ರೀ (116), ಶಮಂತ್ (114) ಮತ್ತು ಸುದರ್ಶನ್ ಉಪಾಧ್ಯಾಯ (103) ಹಾಗೂ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಾದ ವಿನೋಲ್ ಬಜಿಲ್ ಡಿಸೋಜಾ (331) ಇವರು ಸಿ. ಎ. ಇಂಟರ್ಮೀಡಿಯೇಟ್ 2 ಗ್ರೂಪ್ಗಳನ್ನೂ ತೇರ್ಗಡೆಯಾದರೆ, ಭುವನ (174) ಗ್ರೂಪ್ 1 ರಲ್ಲಿ ತೇರ್ಗಡೆ ಹೊಂದಿದ್ದಾರೆ. ಸಿ.ಎಂ.ಎ. […]
ಜಿ.ಎಸ್.ವಿ.ಎಸ್ ಅಸೋಷಿಯೇಷನ್ ಗಂಗೊಳ್ಳಿ: ಶೈಕ್ಷಣಿಕ ಸಾಧಕರ ಅಭಿನಂದನಾ ಸಮಾರಂಭ
ಗಂಗೊಳ್ಳಿ(ಜು,16): ಗಂಗೊಳ್ಳಿಯ ಜಿ.ಎಸ್.ವಿ.ಎಸ್ ಅಸೋಷಿಯೇಷನ್ ವತಿಯಿಂದ ಕಳೆದ 2023-24ರ ಶೈಕ್ಷಣಿಕ ವರುಷದಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಶೇಕಡ 85ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳು ಮತ್ತು ವಿಷಯವಾರು ನೂರಕ್ಕೆ ನೂರು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಮತ್ತು ಭೋಧಕರನ್ನು ಗೌರವಿಸುವ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭ ಕಾರ್ಯಕ್ರಮವು ಇಲ್ಲಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿ ಸ್ಥಾನದಿಂದ ಸುಮುಖ ಗ್ರೂಪ್ ಆಫ್ […]
ರೋಟರಿ ಕ್ಲಬ್ ಕೋಟೇಶ್ವರ: ಪದಪ್ರದಾನ ಸಮಾರಂಭ-ಅಧ್ಯಕ್ಷರಾಗಿ ಸತೀಶ ಎಂ. ನಾಯ್ಕ ಅಧಿಕಾರ ಸ್ವೀಕಾರ
ಕೋಟೇಶ್ವರ, (ಜು.15) :ರೋಟರಿ ಕ್ಲಬ್ ಕೋಟೇಶ್ವರ ಇದರ2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಜುಲೈ 13 ರಂದು ತೆಕ್ಕಟ್ಟೆ ಯ ಗ್ರೇಸ್ ಕನ್ವೆನ್ಸನ್ ಹಾಲ್ ನಲ್ಲಿನಡೆಯಿತು. ನೂತನ ಅಧ್ಯಕ್ಷ ಸತೀಶ ಎಂ. ನಾಯ್ಕ ಮತ್ತು ಕಾರ್ಯದರ್ಶಿ ಸುಭಾಸ್ ಚಂದ್ರ ಶೆಟ್ಟಿ ಅವರಿಗೆ ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ಸಲಹೆಗಾರರದ ಎಂಪಿಎಚ್ಎಫ್ ಬಿ ಶೇಖರಶೆಟ್ಟಿ ಪದಪ್ರದಾನ ನೆರವೇರಿಸಿದರು. 2023-24ನೇ ಸಾಲಿನ ಅಧ್ಯಕ್ಷ ಜಗದೀಶ ಮೊಗವೀರ ಸಮಾರಂಭದ ಅಧ್ಯಕ್ಷತೆ […]
ಮೊಗವೀರ ಯುವ ಸಂಘಟನೆ [ರಿ.] ಉಡುಪಿ ಜಿಲ್ಲೆ: Rtn ಸತೀಶ್ ಎಂ. ನಾಯ್ಕ್ ರವರಿಗೆ ಸನ್ಮಾನ
ಉಡುಪಿ (ಜು,14): ರೋಟರಿ ಕ್ಲಬ್ ಕೋಟೇಶ್ವರ ಇದರ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ Rtn ಸತೀಶ್ ಎಂ. ನಾಯ್ಕ್ ರವರನ್ನು ಮೊಗವೀರ ಯುವ ಸಂಘಟನೆ [ರಿ.] ಉಡುಪಿ ಜಿಲ್ಲೆ ಇದರ ಸಾಮಾನ್ಯ ಸಭೆಯಲ್ಲಿ ಗುರುತಿಸಿ ಗೌರವಿಸಲಾಯಿತು. ಸತೀಶ್ ಎಂ. ನಾಯ್ಕ್ ರವರು ಮೊಗವೀರ ಯುವ ಸಂಘಟನೆಯ ಮಾಜಿ ಜಿಲ್ಲಾಧ್ಯಕ್ಷರಾಗಿ ಹಾಗೂ ಕೋಟೇಶ್ವರ ಘಟಕದ ಸ್ಥಾಪಕಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಜಿಲ್ಲಾ ಸಂಘಟನೆಯ ಅಧ್ಯಕ್ಷರಾದ ಶ್ರೀ ಜಯಂತ್ ಅಮಿನ್ ಕೋಡಿ ,ನಿಕಟಪೂರ್ವ ಅಧ್ಯಕ್ಷ […]
ಪದ್ಮಶ್ರೀ ಪ್ರಶಸ್ತಿಗೆ ಉಡುಪಿ ಯುವ ಸಾಧಕ ಸಂಜಯ್ ದಯಾನಂದ ಕಾಡೂರು ನಾಮನಿರ್ದೇಶನ
ಉಡುಪಿ(ಜು,14): ಉಡುಪಿ ಜಿಲ್ಲೆಯ ಕಾಡೂರು ಶ್ರೀಮತಿ ಸುನೀತಾ ಮತ್ತು ದಯಾನಂದ ಪೂಜಾರಿಯವರ ಪುತ್ರ ಸಂಜಯ್ ದಯಾನಂದ ಪೂಜಾರಿ ಯವರು 2025ರ ಭಾರತದ 4ನೇ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ. ಇವರು ಯುವ ಕಲಾವಿದ, ಉದ್ಯಮಿ, ಸಮಾಜ ಸೇವಕ ಹಾಗೂ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದರು. ಎಲ್ಲರ ಮನದಲ್ಲೂ ಮೈಕ್ರೊ ಸಂಜು, ನ್ಯಾನೋ ಗಣೇಶ ಎಂದೇ ಗುರುತಿಸಿಕೊಂಡಿದ್ದಾರೆ. ಮೈಕ್ರೋ ಕಲಾವಿದರಾಗಿ 2010 ರಲ್ಲಿ ತನ್ನ ಮೈಕ್ರೋ ಗಣೇಶನ ವಿಗ್ರಹಕ್ಕಾಗಿ […]
ರಕ್ತದಾನದಿಂದ ಆರೋಗ್ಯವಂತ ಭಾರತ ನಿರ್ಮಾಣ: ಸಂಸದ ಕೋಟ
ಕುಂದಾಪುರ (ಜು:14): ದತ್ತಾಶ್ರಮ ಆದಿಶಕ್ತಿ ಮಠ ಚಾರಿಟೇಬಲ್ ಟ್ರಸ್ಟ್ ಆನಗಳ್ಳಿ, ಗೆಳೆಯರ ಬಳಗ ಆನಗಳ್ಳಿ,ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ, ರಿಜಾಯ್ ಇವೆಂಟ್ ಗ್ರೂಪ್, ಹಾಗೂ ರಕ್ತ ನಿಧಿ ಕೆಎಂಸಿ ಆಸ್ಪತ್ರೆ ಮಣಿಪಾಲ,ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರಇವರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಜುಲೈ 14 ರಂದು ಆನಗಳ್ಳಿಯಲ್ಲಿ ನಡೆಯಿತು. ಉಡುಪಿ -ಚಿಕ್ಕಮಗಳೂರು ಕ್ಷೇತ್ರದ ಸಂಸದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಶಿಬಿರ ಉದ್ಘಾಟಿಸಿ ಮಾತನಾಡುತ್ತಾ ರಕ್ತದಾನ ಮಹಾದಾನ, […]










