ಹೆಮ್ಮಾಡಿ(ಆ,25): ಪದವಿಪೂರ್ವ ಶಿಕ್ಷಣ ಇಲಾಖೆಯವರು ಆಯೋಜಿಸಿದ ಗ್ರಾಮೀಣ ಐ.ಟಿ.ಕ್ವಿಜ್ ವಿಭಾಗದಲ್ಲಿ ಜನತಾ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ.ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಅಭಿದೀಪ್ ಹೆಬ್ಬಾರ್ ಹಾಗೂ ನಿದಿಲ್ ಶೆಟ್ಟಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
Month: October 2024
ಕ್ರಿಯೇಟಿವ್ ಕಾಲೇಜಿನಲ್ಲಿ ಯುವ ಬರಹಗಾರರ ಸಮ್ಮೇಳನ “ಅಕ್ಷರ ಯಾನ”
ಕಾರ್ಕಳ ( ಆ .25): ಯುವ ಮತ್ತು ಪ್ರತಿಭಾವಂತ ಬರಹಗಾರರನ್ನು ಪ್ರೋತ್ಸಾಹಿಸಲು ಕ್ರಿಯೇಟಿವ್ ಪುಸ್ತಕ ಮನೆ ಹಾಗೂ ವಿಕಾಸ ಸೇವಾ ಸಂಸ್ಥೆ ಕಾರ್ಕಳ ಇದರ ಸಹಯೋಗದಲ್ಲಿ ಕಾರ್ಕಳ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ಯುವ ಬರಹಗಾರರ ಸಮ್ಮೇಳನ ‘ಅಕ್ಷರಯಾನ – ಬರವಣಿಗೆಯ ಮೆರವಣಿಗೆ’ ಕಾರ್ಯಕ್ರಮವು ಅಕ್ಟೋಬರ್ 30 ರಂದು ನಡೆಯಲಿದೆ. ಈ ಸಮಾರಂಭದ ಉದ್ಘಾಟಕರಾಗಿ ಕರ್ನಾಟಕ ಸರ್ಕಾರದ ಮಾಜಿ ಸಚಿವರು, ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಶ್ರೀ ವಿ. […]
ಡಾl ಬಿ.ಬಿ ಹೆಗ್ಡೆ ಕಾಲೇಜು : ನೊವೇಶನ್ ಮ್ಯಾನೇಜ್ಮೆಂಟ್ ಫೆಸ್ಟ್-2024 ಸಂಪನ್ನ
ಕುಂದಾಪುರ (ಅ. 24): ಇಲ್ಲಿನ ಡಾI ಬಿ .ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಇದರ ವ್ಯವಹಾರ ಆಡಳಿತ ವಿಭಾಗದ ಆಶ್ರಯದಲ್ಲಿ ಅಕ್ಟೋಬರ್, 24 ಹಾಗೂ 25 ರಂದು ನಡೆದ ನೊವೇಶನ್ ಮ್ಯಾನೇಜ್ಮೆಂಟ್ ಫೆಸ್ಟ್ -2024 ಸಂಪನ್ನಗೊಂಡಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಇಂಡಿಯನ್ ಓವರ್ಸೀಸ್ ಬ್ಯಾಂಕ್ ಕುಂದಾಪುರ ಶಾಖೆಯ ಪ್ರಬಂಧಕರುಗಳಾದ ಶ್ರೀ ನಿಶಿತ್ ಪಾರ್ಮರ್ ಹಾಗೂ ಶ್ರೀ ರವಿ ಆಗಮಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೋ. […]
ಡಾl ಬಿ.ಬಿ ಹೆಗ್ಡೆ ಕಾಲೇಜು :ನೋವೇಶನ್ ಮ್ಯಾನೇಜ್ಮೆಂಟ್ ಫೆಸ್ಟ್-2024 ಉದ್ಘಾಟನೆ
ಕುಂದಾಪುರ (ಅ. 24): ಇಲ್ಲಿನ ಡಾI ಬಿ .ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಇದರ ವ್ಯವಹಾರ ಆಡಳಿತ ವಿಭಾಗದ ಆಶ್ರಯದಲ್ಲಿ ಅಕ್ಟೋಬರ್, 24 ಹಾಗೂ 25 ರಂದು ನಡೆಯಲಿರುವ ನೋವೇಶನ್ ಮ್ಯಾನೇಜ್ಮೆಂಟ್ ಫೆಸ್ಟ್ -2024 ನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಕೆ ಉಮೇಶ್ ಶೆಟ್ಟಿ ಅವರು ಉದ್ಘಾಟಿಸಿದರು. ಬಿ ಬಿ ಎ ಕೋರ್ಸ್ ಜಾಗತಿಕವಾಗಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು, ಆಡಳಿತ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ವಿಪುಲವಾದ ಅವಕಾಶವನ್ನು ಕಲ್ಪಿಸುತ್ತಿದ್ದು ವಿದ್ಯಾರ್ಥಿಗಳು ತಮ್ಮನ್ನು […]
ಬಿ. ಬಿ. ಹೆಗ್ಡೆ ಕಾಲೇಜು: ಟೆಕ್ಮಂಥನ್ 4.0’ ಸಮಾರೋಪ
ಕುಂದಾಪುರ, (ಅಕ್ಟೋಬರ್ 23): ‘ನಹೀ ಜ್ಞಾನೇನ ಸದೃಶಂ’ ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಹಾಗೂ ವಿದ್ಯಾರ್ಥಿಗಳು ಸೋತಾಗ ಹೆದರದೆ ನಾವೆಲ್ಲಿ ಎಡವಿದ್ದೇವೆ ಎನ್ನುವುದನ್ನು ಮನದಟ್ಟು ಮಾಡಿಕೊಳ್ಳುವುದರ ಮೂಲಕ ಗೆಲುವಿನ ಹಾದಿಯಲ್ಲಿ ಸಾಗಬೇಕು ಎಂದು ವಿವೇಕ ಪದವಿ ಪೂರ್ವ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕರಾದ ಶ್ರೀ ಸಂತೋಷ್ ನೀಲಾವರ ಹೇಳಿದರು. ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕ ವಿಜ್ಞಾನ ವಿಭಾಗ ಮತ್ತು ವಿಜ್ಞಾನ […]
ಬಿ. ಬಿ. ಹೆಗ್ಡೆಕಾಲೇಜು: ಟೆಕ್ಮಂಥನ್ 4.0 ಉದ್ಘಾಟನೆ
ಕುಂದಾಪುರ, (ಅಕ್ಟೋಬರ್ 23): ತಂತ್ರಜ್ಞಾನ ಮುಂದುವರಿದ ಈ ಕಾಲಘಟ್ಟದಲ್ಲಿ ಅವುಗಳ ಸದ್ಬಳಕೆಯನ್ನು ಅರಿತು-ಬಳಕೆ ಮಾಡಿದಾಗ ಮಾತ್ರ ಅದು ಒಳಿತು ಎಂಬುದನ್ನು ಅರ್ಥೈಸಿಕೊಂಡು ವಿದ್ಯಾರ್ಥಿಗಳು ಬೆಳೆಯಬೇಕು ಎಂಬುದಾಗಿ ಸುಣ್ಣಾರಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನಾಗರಾಜ ಶೆಟ್ಟಿ ಹೇಳಿದರು. ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕ ವಿಜ್ಞಾನ ವಿಭಾಗ ಮತ್ತು ವಿಜ್ಞಾನ ವಿಭಾಗ ಆಯೋಜಿಸಿದ ‘ಟೆಕ್ಮಂಥನ್ 4.0’ವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ […]
ಕರಾಟೆ: ಚಿನ್ನಕ್ಕೆ ಮುತ್ತಿಟ್ಟ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ವಿದ್ಯಾರ್ಥಿಗಳು
ಬೈoದೂರು( ಆ,24):ಉತ್ತರ ಕನ್ನಡ ಕರಾಟೆ ಅಸೋಸಿಯೇಷನ್ ಭಟ್ಕಳ ಇವರು ಆಯೋಜಿಸಿದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾಟದ ಕುಮಿಟೆ ವಿಭಾಗದಲ್ಲಿ ಕಿರಿಮಂಜೇಶ್ವರದ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಆರ್ಯನ್ (8ನೇ ತರಗತಿ), ರಜತ್ (7ನೇ ತರಗತಿ) ಚಿನ್ನದ ಪದಕ ಹಾಗೂ ಗಗನ್ ( 6ನೇ ತರಗತಿ) ಕಂಚಿನ ಪದಕವನ್ನು ಗಳಿಸಿದ್ದಾರೆ. ಕಟಾ ವಿಭಾಗದಲ್ಲಿ ಗಗನ್ (6ನೇ ತರಗತಿ) ಚಿನ್ನದ ಪದಕ, ಅಕ್ಷಿತ್ (7ನೇ ತರಗತಿ), ಅನ್ವೇಷಣ(7ನೇ ತರಗತಿ) ಶ್ರೀಶಾ (4ನೇ ತರಗತಿ) […]
ತಾಲೂಕು ಮಟ್ಟದ ಅಥ್ಲೆಟಿಕ್ಸ್: ಕುಂದಾಪುರ ಟ್ರ್ಯಾಕ್ ಮತ್ತು ಫೀಲ್ಡ್ ನ ಪ್ರಥ್ವಿನ್ ಚಾಂಪಿಯನ್
ಕುಂದಾಪುರ(ಅ, 24): ಕುಂದಾಪುರ ತಾಲೂಕು ಮಟ್ಟದ ಅಥ್ಲೆಟಿಕ್-2024 ರ 14 ವರ್ಷದೊಳಗಿನ ಹುಡುಗರ ವಿಭಾಗದಲ್ಲಿ ಕುಂದಾಪುರ ಟ್ರ್ಯಾಕ್ ಮತ್ತು ಫೀಲ್ಡ್ ನ ಪ್ರಥ್ವಿನ್ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ. 100 ಮೀಟರ್ ಪ್ರಥಮ ಸ್ಥಾನ 200 ಮೀಟರ್ ಪ್ರಥಮ ಸ್ಥಾನ ,4×100 ಬಾಲಕರ ರಿಲೇ ಚಿನ್ನದ ಪದಕ ಪಡೆದು ಉಡುಪಿ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿದ್ದಾರೆ. ಇವರಿಗೆ ಕುಂದಾಪುರದ ಟ್ರ್ಯಾಕ್ & ಫೀಲ್ಡ್ ಕ್ರೀಡಾ ತರಬೇತಿ ಸಂಸ್ಥೆಯ ಪ್ರಶಾಂತ ಶೆಟ್ಟಿ […]
ಬಾಳಿಕೆರೆ : ಅಶಕ್ತ ಕುಟುಂಬಕ್ಕೆ ಸಹಾಯ ಧನ ಹಸ್ತಾಂತರ
ಹೆಮ್ಮಾಡಿ(ಆ,21): ದಿವಂಗತ ಶೀನ ಮೊಗವೀರ ಬಾಳಿಕೆರೆ ಅರ್ಸುಮಕ್ಕಿ ಇವರ ಕುಟುಂಬಕ್ಕೆ ಇಂದು ದಾನಿಗಳ ನೆರವಿನಿಂದ ಸಂಗ್ರಹವಾದ ಹಣವನ್ನು ಮೊಗವೀರ ಯುವ ಸಂಘಟನೆ(ರಿ.),ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕದ ಅಧ್ಯಕ್ಷರಾದ ದಿನೇಶ್ ಬಿ ಕಾಂಚನ ರವರ ನೇತ್ರತ್ವದಲ್ಲಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಬಾಳಿಕೆರೆ ಮೊಗವೀರ ಗ್ರಾಮ ಸಭಾ ಕುಡಿಗೆಯ ಅಧ್ಯಕ್ಷರಾದ ಸುಧಾಕರ್ ಕಾಂಚನ್ , ಕೂಡಿಗೆಯ ಗೌರವ ಸಲಹೆಗಾರರಾದ ಗಣೇಶ ಟಿ. ಕಾಂಚನ್ , ಹೆಮ್ಮಾಡಿ ಘಟಕ ಮಾಜಿ ಅಧ್ಯಕ್ಷರಾದ ಲೋಹಿತಾಶ್ವ ಆರ್ […]
ಬಗ್ವಾಡಿ: ಸುಧಾ ಮೊಗವೀರರಿಗೆ ಸನ್ಮಾನ
ಬಗ್ವಾಡಿ( ಆ,21): ಶ್ರೀ ಕ್ಷೇತ್ರ ಕೊಲ್ಲೂರು ಮುಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಸುಧಾ ಮೊಗವೀರರವರು ಶ್ರೀ ಕ್ಷೇತ್ರ ಬಗ್ವಾಡಿ ಮಹಿಷಾಸುರಮರ್ದಿನಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮೊಗವೀರ ಮಹಜನ ಸೇವಾ ಸಂ(ರಿ.), ಬಗ್ವಾಡಿ ಹೋಬಳಿ ಕುಂದಾಪುರ ಶಾಖಾ ಅಧ್ಯಕ್ಷರಾದ ಉದಯ್ ಕುಮಾರ್ ಹಟ್ಟಿಯಂಗಡಿ ಮಾತನಾಡಿ ಈ ಹಿಂದಿನ ಕೊಲ್ಲೂರು ದೇವಳದ ಆಡಳಿತ ಮಂಡಳಿಯ ವ್ಯೆವಸ್ಥಾಪನ […]