ಕುಂದಾಪುರ (ನವೆಂಬರ್ 12): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆ ನವೆಂಬರ್ 15ರಂದು ನಡೆಯಲಿದೆ . ಉಡುಪಿ ಜಿಲ್ಲಾ ವ್ಯಾಪ್ತಿಯ ಪಿ ಯು ಕಾಲೇಜುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿವೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Day: November 12, 2024
ಎಚ್.ಎಮ್.ಎಮ್, ವಿ.ಕೆ.ಆರ್ ನಲ್ಲಿ ಸ್ಪೆಕ್ಟ್ರಮ್ -2024
ಕುಂದಾಪುರ(ನ.11) : ಕುಂದಾಪುರದ ಪ್ರತಿಷ್ಠಿತ ವಿದ್ಯಾಸಂಸ್ಥೆ, ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳಲ್ಲಿ ನವೆಂಬರ್ 9 ಶನಿವಾರದಂದು ಮಕ್ಕಳ ದಿನಾಚರಣೆಯ ಅಂಗವಾಗಿ, ವಿದ್ಯಾರ್ಥಿಗಳ ವೈಜ್ಞಾನಿಕ ಮನೋಭಾವವನ್ನು ಪ್ರೇರೇಪಿಸುವ ದೃಷ್ಠಿಯಿಂದ ಎಲ್ ಕೆ ಜಿ ಯಿಂದ 10ನೇ ತರಗತಿಯ ವರೆಗಿನ ಮಕ್ಕಳಿಂದ ಸ್ಪೆಕ್ಟ್ರಮ್ 2024 ವಸ್ತು ಪ್ರದರ್ಶನ ಜರುಗಿತು. ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರು, ಸಂಸ್ಥೆಯ […]
ಟೀಚರ್ ಟ್ರೈನಿಂಗ್ ಅಕಾಡೆಮಿ ಕುಂದಾಪುರ: ಕಲಿಕಾ ಸಂಪನ್ಮೂಲಗಳ ಪ್ರದರ್ಶನ
ಕುಂದಾಪುರ (ನ.10): ಟೀಚರ್ ಟ್ರೈನಿಂಗ್ ಅಕಾಡೆಮಿ, ಕುಂದಾಪುರ ಇಲ್ಲಿನ ಶಿಕ್ಷಕ ವಿದ್ಯಾರ್ಥಿಗಳಿಂದ ‘ಚಾಕ್ ಟಾಕ್’ ಎನ್ನುವ ಕಲಿಕಾ ಸಂಪನ್ಮೂಲಗಳ ಪ್ರದರ್ಶನ ನೆರವೇರಿತು. ಉದ್ಘಾಟಕರಾಗಿ ಆಗಮಿಸಿದ ವಿಕೆಆರ್ ಆಂಗ್ಲ ಮಾಧ್ಯಮ ಶಾಲೆಯ ಹಾಯಕ ಮುಖ್ಯ ಶಿಕ್ಷಕ ಶ್ರೀ ಚಂದ್ರಶೇಖರ್ ಶೆಟ್ಟಿ ಇವರು ತರಗತಿ ಕೋಣೆಯಲ್ಲಿ ಕಲಿಕಾ ಸಾಮಗ್ರಿಗಳ ಪ್ರಾಮುಖ್ಯತೆಯ ಕುರಿತು ಮಾತನಾಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಹಾಗೂ ಎಲ್ಲಾ ಶಿಕ್ಷಕರು ಉಪಸ್ಥಿತಿಯಲ್ಲಿದ್ದರು.