ಕುಂದಾಪುರ (ನ.10): ಟೀಚರ್ ಟ್ರೈನಿಂಗ್ ಅಕಾಡೆಮಿ, ಕುಂದಾಪುರ ಇಲ್ಲಿನ ಶಿಕ್ಷಕ ವಿದ್ಯಾರ್ಥಿಗಳಿಂದ ‘ಚಾಕ್ ಟಾಕ್’ ಎನ್ನುವ ಕಲಿಕಾ ಸಂಪನ್ಮೂಲಗಳ ಪ್ರದರ್ಶನ ನೆರವೇರಿತು.
ಉದ್ಘಾಟಕರಾಗಿ ಆಗಮಿಸಿದ ವಿಕೆಆರ್ ಆಂಗ್ಲ ಮಾಧ್ಯಮ ಶಾಲೆಯ ಹಾಯಕ ಮುಖ್ಯ ಶಿಕ್ಷಕ ಶ್ರೀ ಚಂದ್ರಶೇಖರ್ ಶೆಟ್ಟಿ ಇವರು ತರಗತಿ ಕೋಣೆಯಲ್ಲಿ ಕಲಿಕಾ ಸಾಮಗ್ರಿಗಳ ಪ್ರಾಮುಖ್ಯತೆಯ ಕುರಿತು ಮಾತನಾಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಹಾಗೂ ಎಲ್ಲಾ ಶಿಕ್ಷಕರು ಉಪಸ್ಥಿತಿಯಲ್ಲಿದ್ದರು.