ಕಾರ್ಕಳ( ನ .19) : ವಿದ್ಯಾರ್ಥಿಯ ಸಾಧನೆಯ ಹಿಂದೆ ಗುರುಗಳ ಪಾತ್ರ ಮಹತ್ವದ್ದು. ಅಂತಹ ಗುರುಗಳನ್ನು ಯಾವುದೇ ಕ್ಷೇತ್ರದಲ್ಲಿ ಮುನ್ನುಗ್ಗುವವರು ಆರಿಸಿಕೊಳ್ಳ ಬೇಕು. ಅಡೆತಡೆಗಳನ್ನು ಸಾಧನೆಯ ಏಣಿಯಾಗಿಸಿಕೊಂಡವರು ಸಾಧಕರಾಗಿ ಹೊರಬರುತ್ತಾರೆ ಎಂದು ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಶ್ರೀ ರಮೇಶ್ ಎಚ್ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ವಾರ್ಷಿಕ ಕ್ರೀಡಾಕೂಟ-2024 ರ ಕ್ರೀಡಾಕೂಟದ ಧ್ವಜಾರೋಹಣವನ್ನು ನೆರವೇರಸಿ […]
Day: November 19, 2024
ಸಂಜಿತ್ ಎಮ್ ದೇವಾಡಿಗ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಕೋಟೇಶ್ವರ ( ನ .19): ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು, ಸುಣ್ಣಾರಿ ಕುಂದಾಪುರ ಇಲ್ಲಿ ನಡೆದ ಕುಂದಾಪುರ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕೊಂಚಾಡಿ ರಾಧಾಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಂಗೊಳ್ಳಿ ಇಲ್ಲಿನ 6ನೇ ತರಗತಿಯ ವಿದ್ಯಾರ್ಥಿ ಸಂಜಿತ್ ಎಮ್ ದೇವಾಡಿಗ ಇವನು ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈತ ಸ್ಯಾಕ್ಸೋಫೋನ್ ವಾದಕ ಮಾಧವ ದೇವಾಡಿಗ ಮತ್ತು ಉಪನ್ಯಾಸಕಿ ಸಾವಿತ್ರಿ ಎಸ್ ದಂಪತಿಯ […]
ಬಿ. ಬಿ. ಹೆಗ್ಡೆ ಕಾಲೇಜು : ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಎನ್ಪಿಟಿಎಲ್ ಸ್ವಯಂ ಕೋರ್ಸಿನ ಮಾಹಿತಿ ಕಾರ್ಯಾಗಾರ
ಕುಂದಾಪುರ (ನ.13): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಆಶ್ರಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನವೆಂಬರ್ 13, 2024 ರಂದು ಎನ್ಪಿಟಿಎಲ್ ಸ್ವಯಂ ಕೋರ್ಸಿನ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ವಹಿಸಿಕೊಂಡಿದ್ದರು. ವಿಭಾಗದ ಮುಖ್ಯಸ್ಥರಾದ ಶ್ರೀ ಮಹೇಶ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು. ಈ […]
ಬಿ. ಬಿ. ಹೆಗ್ಡೆ ಕಾಲೇಜು : ಮಂಗಳೂರು ವಿ.ವಿ. ಮಟ್ಟದಅಂತರ್-ಕಾಲೇಜು ಕುಸ್ತಿ ಪಂದ್ಯಾಟ ಸಂಪನ್ನ
ಕುಂದಾಪುರ, (ನ.15): ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಜಂಟಿ ಆಶ್ರಯದಲ್ಲಿ ನಡೆದ ವಿ.ವಿ. ವ್ಯಾಪ್ತಿಯ ಅಂತರ್-ಕಾಲೇಜು ಪುರುಷರ ಮತ್ತು ಮಹಿಳೆಯರ ಕುಸ್ತಿ ಪಂದ್ಯಾಟದ ಸಮಾರೋಪ ಸಮಾರಂಭ ಶುಕ್ರವಾರ ನಡೆಯಿತು. ಕುಸ್ತಿ ಪಾರಂಪರಿಕ ಹಿನ್ನಲೆ ಇರುವ ಕ್ರೀಡೆ. ರಾಜಪ್ರಭುತ್ವ ಕಾಲಘಟ್ಟದಲ್ಲಿ ಅತ್ಯಂತ ಚಾಲ್ತಿಯಲ್ಲಿತ್ತು. ದೇಸಿ ಸೊಗಡು ಹೊಂದಿರುವ ಈ ಕ್ರೀಡೆ ಇಂದು ಜಾಗತಿಕ ಮನ್ನಣೆ ಪಡೆದು ವಿವಿಧ ಆಯಾಮಗಳಲ್ಲಿ ಗುರುತಿಸಿಕೊಳ್ಳುತ್ತಿದೆ. ಇಂತಹ ಕ್ರೀಡೆಯಲ್ಲಿ […]
ಬೈಂದೂರು ಉತ್ಸವದಲ್ಲಿ ಸಂಜಿತ್ ಎಂ ದೇವಾಡಿಗ ಸ್ಯಾಕ್ಸೋಫೋನ್ ವಾದನ
ಬೈಂದೂರು( ನ.19): ಬೈಂದೂರು ಉತ್ಸವ- 2024 ರಲ್ಲಿ ಕೊಂಚಾಡಿ ರಾಧಾಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಂಗೊಳ್ಳಿ ಇಲ್ಲಿಯ 6ನೇ ತರಗತಿಯ ವಿದ್ಯಾರ್ಥಿ ಸಂಜಿತ್ ಎಂ. ದೇವಾಡಿಗ ಇವರಿಂದ ಸ್ಯಾಕ್ಸೋಫೋನ್ ವಾದನ ಕಾರ್ಯಕ್ರಮ ನಡೆಯಿತು. ತವಿಲ್ ನಲ್ಲಿ ನಿತ್ಯಾನಂದ ದೇವಾಡಿಗ, ತಾಳದಲ್ಲಿ ಮಾಧವ ದೇವಾಡಿಗ, ಗೆಜ್ಜೆಯಲ್ಲಿ ಹರ್ಷವರ್ಧನ ಖಾರ್ವಿ ಸಹಕರಿಸಿದರು.
ಹೆಮ್ಮಾಡಿ : ಜನತಾ ಪಿ ಯು ಕಾಲೇಜಿನಲ್ಲಿ ವಾರ್ಷಿಕ ಸಂಭ್ರಮ – ಜನತಾ ಪರ್ವ 2K24
ಹೆಮ್ಮಾಡಿ ( ನ .19): ಜನತಾ ಪದವಿಪೂರ್ವ ಕಾಲೇಜಿನ ವಾರ್ಷಿಕ ಸಂಭ್ರಮ ನವೆಂಬರ್ 14 ರಂದು ಅದ್ದೂರಿಯಾಗಿ ನೆರವೇರಿತು.ಕಾರ್ಯಕ್ರಮ ಉದ್ಘಾಟಿಸಿದರು. ಗಂಗೊಳ್ಳಿಯ ಟೌನ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಇದರ ಅಧ್ಯಕ್ಷರಾದ ಶ್ರೀ ಜಿ. ವೆಂಕಟೇಶ ಶೆಣೈ ಕಾರ್ಯಕ್ರಮವನ್ನು ಉದ್ಘಾಟಿಸಿ ‘ಜನತಾ ವಿದ್ಯಾ ಸಂಸ್ಥೆಯ ಶೈಕ್ಷಣಿಕ ಸಾಧನೆ ಮಹತ್ತರವಾದದ್ದು,ವಿದ್ಯಾರ್ಥಿಗಳ ಪ್ರತಿಭೆಯ ವಿಕಾಸಕ್ಕೆ ಜನತಾ ಸಂಸ್ಥೆಯ ಕಾರ್ಯಚಟುವಟಿಕೆಗಳು ಪ್ರಶಂಸನೀಯ’ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ […]