ಹೆಮ್ಮಾಡಿ ( ನ.22): ಕುಂದಾಪುರ ತಾಲ್ಲೂಕಿನ ಇಡೂರು ಕುಂಜ್ಞಾಡಿ ಹಾಯ್ಗೂಳಿ ಕಂಬಳೋತ್ಸವವು ಡಿಸೆಂಬರ್ 05 ರಂದು ಕುಂಜ್ಞಾಡಿ ಹಾಯ್ಗೂಳಿ ಕಂಬಳಗದ್ದೆಯಲ್ಲಿ ಮಧ್ಯಾಹ್ನ.12 ಗಂಟೆಗೆ ನೆಡೆಯಲಿದೆ. ಕರ್ನಾಟಕದ ಕರಾವಳಿಯಲ್ಲಿ ಕಂಬಳವು ದೈವಿಕ ಮತ್ತು ಐತಿಹಾಸಿಕ ಕ್ರೀಡೆ.ರೈತಾಪಿ ಜನರು ತಮ್ಮ ತಮ್ಮ ಗೆದ್ದೆಯ ಬತ್ತದ ಕಟಾವು ನಂತರ ತಮ್ಮ ಕೊಣಗಳೊಂದಿಗೆ ಮನರಂಜನೆ ಕ್ರೀಡೆಯಾಗಿ ಕಂಬಳವನ್ನು ಆಚರಿಸುವ ಪದ್ದತಿಯನ್ನು ನಮ್ಮ ಪೂರ್ವಜರು ಶತಮಾನಗಳಿಂದ ಊರಿನ ದೇವರ ಹೆಸರಿನೊಂದಿಗೆ ಆಚರಿಸುತ್ತಾ ಬಂದಿದ್ದಾರೆ. ಇಂತಹ ಒಂದು ಸಾಂಪ್ರದಾಯಿಕ […]
Day: November 22, 2024
CSEET ಪರೀಕ್ಷೆಯಲ್ಲಿ ಡಾ| ಬಿ. ಬಿ. ಹೆಗ್ಡೆ ಕಾಲೇಜು ಉತ್ಕೃಷ್ಟ ಸಾಧನೆ
ಕುಂದಾಪುರ (ನ.20): ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ 2024ರ ನವೆಂಬರ್ನಲ್ಲಿ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಪ್ರಥಮ ಹಂತದಲ್ಲಿಯೇ ಉತ್ಕೃಷ್ಟ್ಟ ಸಾಧನೆಗೈದಿದ್ದಾರೆ ಕೌಶಿಕ್, ಅಕ್ಷೋಭ್ಯ, ಶಾಶ್ವತ್, ಸಿದ್ದಾರ್ಥ, ಸುಷ್ಮಾ, ವರ್ಷಾ, ದರ್ಶನ್, ಮೈತ್ರೆಯಿ ಹಾಗೂ ಕೀರ್ತನಾ ಇವರು ಸಿ.ಎಸ್. ಎಕ್ಸಿಕ್ಯೂಟಿವ್ ಪ್ರೋಗ್ರಾಮ್ ಗೆ ಅರ್ಹತೆ ಪಡೆದಿದ್ದಾರೆ. ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ […]
ಎಂ. ಎನ್. ಮಧ್ಯಸ್ಥರಿಗೆ ಸುವರ್ಣ ಪರ್ವ ಪುರಸ್ಕಾರ
ಕೋಟ (ನ,21): ಕೋಟದ ಸಾಲಿಗ್ರಾಮ ಮಕ್ಕಳ ಮೇಳವು ತನ್ನ ಐವತ್ತರ ಸಂಭ್ರಮಾಚರಣೆಯ ಸುವರ್ಣ ಪರ್ವದ ಮೂರನೆಯ ಕಾರ್ಯಕ್ರಮವನ್ನು ಗಿರಿಜಾ ಶಂಕರನಾರಾಯಣ ಮಧ್ಯಸ್ಥ ಚಾರಿಟೇಬಲ್ ಟ್ರಸ್ಟ್ (ರಿ) ಪಾರಂಪಳ್ಳಿ, ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಕಾರ್ಕಡ ಗೆಳೆಯರ ಬಳಗದ ಜಂಟಿ ನೆರವಿನೊಂದಿಗೆ ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಪ್ರಾಂಗಣದಲ್ಲಿ ನವಂಬರ್ 23, ಶನಿವಾರದಂದು ಆಯೋಜಿಸಿದೆ. ಮಕ್ಕಳ ಕ್ಷೇತ್ರದಲ್ಲಿ ಅನುಪಮವಾದ ಕೃಷಿ ಮಾಡಿದ ನಿವೃತ್ತ ಅಧ್ಯಾಪಕ, ಯಕ್ಷ ಗುರು, ಲೇಖಕ, ಹವ್ಯಾಸಿ ಯಕ್ಷಗಾನ […]
ಕೋಟ ಸುಜಯೀಂದ್ರ ಹಂದೆಯವರಿಗೆ ಯಕ್ಷಗಾನ ಅಕಾಡೆಮಿ ಪುರಸ್ಕಾರ
ಮಂಗಳೂರು ( ನ .22): 2023 ರ ಸಾಲಿನ ಯಕ್ಷಗಾನ ಅಕಾಡೆಮಿ ಕೊಡಮಾಡುವ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ಉಪನ್ಯಾಸಕ, ಲೇಖಕ, ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಕೋಟದ ಎಚ್. ಸುಜಯೀಂದ್ರ ಹಂದೆಯವರಿಗೆ ಮಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಹಂದೆಯವರ ‘ಯಕ್ಷ ದೀವಟಿಕೆ’ ಕೃತಿ ಬಹುಮಾನಕ್ಕೆ ಆಯ್ಕೆಯಾಗಿತ್ತು. ಮಂಗಳೂರಿನ ಶಾಸಕರಾದ ವೇದವ್ಯಾಸ ಕಾಮತ್ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ […]
ಹೆಮ್ಮಾಡಿ ಜನತಾ ಪಿ ಯು ಕಾಲೇಜು : CSEET ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅವಿಚ್ಛಿನ್ನ ಸಾಧನೆ
ಹೆಮ್ಮಾಡಿ( ನ,22): CSEET-ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜನತಾ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಪ್ರಥಮ ಹಂತದಲ್ಲಿಯೇ ಸಾಧನೆ ಮೆರೆದಿದ್ದಾರೆ.ಕ್ರಮವಾಗಿ,ಧೀರಜ್ ಶೇಟ್,ಸುಜನ್ ಎಸ್.ಪಿ,ಅರ್ಚನ್ ಕುಮಾರ್, ಮೈತ್ರಿ,ಅಕ್ಷೋಭ್ಯ,ವಿಶ್ಮಿತಾ,ಸ್ಪಂದನ,ಶಾಶ್ವತ್ ಶೆಟ್ಟಿ, ಕೌಶಿಕ್ ಶೆಟ್ಟಿ ಈ ವಿದ್ಯಾರ್ಥಿಗಳು CS ಎಕ್ಸಿಕ್ಯೂಟಿವ್ ಪ್ರೋಗ್ರಾಮ್ ಗೆ ಅರ್ಹತೆ ಪಡೆದಿದ್ದಾರೆ. ಗ್ರಾಮೀಣ ಭಾಗದ ಪರಿಸರದಲ್ಲಿ ಆರಂಭಗೊಂಡಿರುವ ಜನತಾ ಶಿಕ್ಷಣ ಸಂಸ್ಥೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ತರಬೇತಿ ನೀಡಲಾಗುತ್ತಿದೆ. ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ […]