ಕುಂದಾಪುರ(ಡಿ.28): ಪದವಿಪೂರ್ವ ಶಿಕ್ಷಣ ಇಲಾಖೆಯವರು ಆಯೋಜಿಸುವ ರಾಷ್ಟ್ರ ಮಟ್ಟದ ವಾಲಿಬಾಲ್ ಸ್ಪರ್ಧೆಗೆ ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗದ ವಿದ್ಯಾರ್ಥಿ ಸೂರಜ್ ಪೂಜಾರಿ ರಾಷ್ಟ್ರ ಮಟ್ಟದ ವಾಲಿಬಾಲ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ತೆಲಂಗಾಣ ರಾಜ್ಯದಲ್ಲಿಈ ಸ್ಪರ್ಧೆ ನಡೆಯಲಿದ್ದು,ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾನೆ. ಸಾಧಕ ವಿದ್ಯಾರ್ಥಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆಗಳೂಂದಿಗೆ,ಶುಭ ಹಾರೈಸಿದ್ದಾರೆ.
Year: 2024
ಹೆಮ್ಮಾಡಿ ಜನತಾ ಪಿ ಯು ಕಾಲೇಜಿನ ತನ್ವಿತಾ ವಿ. ಡಾ| ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ಆಯ್ಕೆ
ಕೋಟ(ಡಿ.28): ಡಾ.ಶಿವರಾಮ ಕಾರಂತ ಪ್ರತಿಷ್ಠಾನ(ರಿ.) ಕೋಟ, ಡಾ.ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ,ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ, ಕೋಟದ ಡಾ| ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಕೊಡಮಾಡುವ ನಾಲ್ಕನೇ ವರ್ಷದ ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ವಿಶೇಷ ಸಾಧಕರ ವಿಭಾಗದಲ್ಲಿ ಜನತಾ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ.ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕುಮಾರಿ ತನ್ವಿತಾ ವಿಶೇಷ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ತನ್ವಿತಾ ಪ್ರೌಢ ಶಿಕ್ಷಣದ ಸಮಯದಲ್ಲಿ ಯೋಗ ಸ್ಪರ್ಧೆಯಲ್ಲಿ ರಾಷ್ಟ್ರ,ಅಂತರಾಷ್ಟ್ರೀಯ ಮಟ್ಟದ […]
ಗ್ರೀನ್ ಮೊಬಿಲಿಟಿ ಪಯಣದ ವರ್ಧನೆ
ಮಂಗಳೂರು (ಡಿ.26): ಪ್ರಮುಖ ಮಾಧ್ಯಮ ಉದ್ಯಮ ನೆಟ್ವರ್ಕ್18 ಇದೀಗ ಗ್ರೀನ್ ಭಾರತ್ ಆರಂಭಿಕ ಆವೃತ್ತಿಯನ್ನು ಪೂರ್ತಿಗೊಳಿಸಿದ್ದು, ದೇಶದ ಅತಿದೊಡ್ಡ ಶುದ್ಧ ಎಲೆಕ್ಟ್ರಿಕ್ ವಾಹನ ಕಂಪನಿಯಾಗಿರುವ ಓಲಾ ಎಲೆಕ್ಟ್ರಿಕ್ ಜೊತೆಗೆ ಸಹಭಾಗಿತ್ವದಲ್ಲಿ ನಡೆದ ವಾರ್ಷಿಕ ಸಮ್ಮೇಳನ ಇದಾಗಿತ್ತು. ಇವಿಗಳನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳುವಲ್ಲಿ ಇರುವ ಪ್ರಮುಖ ಸವಾಲುಗಳನ್ನು ಎದುರಿಸುವುದರ ಜೊತೆಗೆ ಇವಿಗಳ ಆರ್ಥಿಕ, ಪಾರಿಸರಿಕ ಮತ್ತು ಸಾಮಾಜಿಕ ಪ್ರಯೋಜನಗಳಿಗೆ ಸಂಬಂಧಿಸಿದಂತೆ ಸುಸ್ಥಿರ ಸಂಚಾರಕ್ಕೆ ಭಾರತ ಪರಿವರ್ತನೆಯಾಗುವುದಕ್ಕೆ ವ್ಯಾಖ್ಯಾನವನ್ನು ಬದಲಿಸುವ ಗುರಿಯನ್ನು ಕಾರ್ಯಕ್ರಮ ಹೊಂದಿದೆ.ಈ […]
ನೂರು ಜನ್ಮಕೂ’ ಧಾರಾವಾಹಿ ಆರಂಭ
ಮಂಗಳೂರು(ಡಿ.26): ಹೃದಯಸ್ಪರ್ಶಿ ಧಾರಾವಾಹಿಗಳ ಮೂಲಕ ಕನ್ನಡ ಪ್ರೇಕ್ಷಕನ ಮನಸೂರೆಗೊಂಡಿರುವ ಕಲರ್ಸ್ ಕನ್ನಡ ವಾಹಿನಿಯು ಮತ್ತೊಂದು ಹೊಸ ದೈನಿಕ ಧಾರಾವಾಹಿ ಆರಂಭಿಸುತ್ತಿದೆ. ಡಿ.23ರಿಂದ ಪ್ರತಿ ರಾತ್ರಿ 8:30ಕ್ಕೆ ಪ್ರಸಾರಗೊಳ್ಳಲಿರುವ ಈ ಹೊಸ ಧಾರಾವಾಹಿ’ನೂರು ಜನ್ಮಕೂ’ ವಿಭಿನ್ನವಾದ ರೋಚಕ ಕತೆಯನ್ನು ಹೊಂದಿದೆ. ಮೊದಲ ನೋಟಕ್ಕೆ’ನೂರು ಜನ್ಮಕೂ’ ಒಂದು ಉತ್ಕಟ ಪ್ರೇಮಕತೆ. ಪ್ರತಿಷ್ಠಿತ ಕದಂಬ ವಂಶದ ಉತ್ತರಾಧಿಕಾರಿ ಚಿರಂಜೀವಿ ಹಾಗೂ ಮೈತ್ರಿ ಎಂಬ ಸಾಧಾರಣ ಕುಟುಂಬದ ಹುಡುಗಿಯ ನಡುವಿನ ಪ್ರೇಮದ ಕಥೆಯಿದು. ಚಿರಂಜೀವಿ ಅತಿಮಾನುಷ […]
ಬ್ಯಾರೀಸ್ ಪಿ.ಯು ಕಾಲೇಜಿನಲ್ಲಿ ಪ್ರೇರಣೆ, ಜ್ಞಾಪಕಶಕ್ತಿ ಮತ್ತು ಅಧ್ಯಯನ ಕೌಶಲ್ಯಗಳ ಕುರಿತು ಕಾರ್ಯಾಗಾರ
ಕೋಡಿ(ಡಿ.24): ಇಲ್ಲಿನ ಬ್ಯಾರೀಸ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣೆ, ಜ್ಞಾಪಕಶಕ್ತಿ ಮತ್ತು ಅಧ್ಯಯನ ಕೌಶಲ್ಯಗಳ ಕುರಿತು ಕಾರ್ಯಾಗಾರ ಡಿಸೆಂಬರ್ 23 ರಂದು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಸಿಗ್ಮಾ, ಬೆಂಗಳೂರು ಇದರ ಸಿ.ಇ.ಒ ಮತ್ತು ಸಂಸ್ಥಾಪಕರಾದ ಶ್ರೀ. ಅಮೀನ್ .ಇ ಮುದಸ್ಸರ್, ಆಗಮಿಸಿದ್ದರು. ದ್ವಿತೀಯ ಪಿಯುಸಿ ತರಗತಿಗಳಿಗೆ ಬಹುವಿಧದ ಜ್ಞಾಪಕಶಕ್ತಿಯ ತಂತ್ರಗಳನ್ನು ಮತ್ತು ವಿದ್ಯಾರ್ಥಿಗಳ ವ್ಯಕ್ತಿತ್ವ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಡೆಸಿದರು. ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳು […]
ಕುಂದಾಪುರ ಯುವ ಬಂಟರ ಸಂಘ : 90 ರ ಸಂಭ್ರಮದ ಶ್ರೀ ಬಿ.ಅಪ್ಪಣ್ಣ ಹೆಗ್ಡೆ ಯವರಿಗೆ ಗೌರವಾರ್ಪಣೆ
ಕುಂದಾಪುರ (ಡಿ. 23): ಕುಂದಾಪುರ ತಾಲೂಕು ಯುವ ಬಂಟರ ಸಂಘದಿಂದ 90 ರ ಸಂಭ್ರಮದಲ್ಲಿರುವ ನಾಡಿನ ಗಣ್ಯಮಾನ್ಯರಾದ ಶ್ರೀ ಬಸ್ರೂರು ಅಪ್ಪಣ್ಣ ಹೆಗ್ಡೆ ಯವರನ್ನು ಅವರ ಸ್ವಗ್ರಹದಲ್ಲಿ ಸಂಘದ ಗೌರವಾಧ್ಯಕ್ಷರಾದ ಶ್ರೀಮತಿ ವತ್ಸಲ ದಯಾನಂದ ಶೆಟ್ಟಿ ,ಸಂಘದ ಪೋಷಕರಾದ ವಿಜಯ ಶೆಟ್ಟಿ ಸಟ್ಟಾಡಿ ಮತ್ತು ಸಂಘದ ಸ್ಥಾಪಕಾಧ್ಯಕ್ಷರು ಮತ್ತು ದಶಮ ಸಂಭ್ರಮದ ಅಧ್ಯಕ್ಷರಾದ ಡಾ.ಅಂಪಾರು ನಿತ್ಯಾನಂದ ಶೆಟ್ಟಿ ಯವರು ಸನ್ಮಾನಿಸಿ ಗೌರವಿಸಿದರು. ಸಂಘದ ಅಧ್ಯಕ್ಷರಾದ ಶ್ರೀ ನಿತೀಶ್ ಶೆಟ್ಟಿ ಬಸ್ರೂರು […]
ಡಿ.25 ರಂದು ಕೆಂಚನೂರಿನಲ್ಲಿ ಪ್ರೇಮ ಪಂಜರ ಯಕ್ಷಗಾನ
ಕೆಂಚನೂರು( ಡಿ.24): ಶ್ರೀ ಕ್ಷೇತ್ರ ಮೆಕ್ಕೆಕಟ್ಟು, ಶಿರಿಯಾರ ಇವರ ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ವತಿಯಿಂದ ಡಿಸೆಂಬರ್ 25 ರಂದು ಕುಂದಾಪುರ ತಾಲೂಕಿನ ಕೆಂಚನೂರಿನಲ್ಲಿ ಅಂಬಿಕಾ ಪೂಜಾರಿ ಕಥಾ ಸಾಂಗತ್ಯದ ಬೇಳೂರು ವಿಷ್ಣುಮೂರ್ತಿ ನಾಯಕ್ ಪದ್ಯ ಸಾಹಿತ್ಯ ದ ಪ್ರೇಮ ಪಂಜರ ಯಕ್ಷಗಾನ ಅಂದು ರಾತ್ರಿ 9 ರಿಂದ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಕೋಡಿ: ನ್ಯಾಕ್ ಮಾನ್ಯತೆ ಮತ್ತು ಒಳನೋಟಗಳು ಕಾರ್ಯಾಗಾರ
ಕುಂದಾಪುರ:(ಡಿ,19) : ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಕೋಡಿ ಕುಂದಾಪುರದಲ್ಲಿ “ಎಚ್ಇಐಗಳಲ್ಲಿ ಗುಣಮಟ್ಟದ ಸಂಸ್ಕೃತಿಯನ್ನು ಉತ್ತೇಜಿಸುವುದು, ನ್ಯಾಕ್ ಮಾನ್ಯತೆ ಮತ್ತು ಒಳನೋಟಗಳು” ಎಂಬ ವಿಷಯದ ಮೇಲೆ ಶಿಕ್ಷಕ ಅಭಿವೃದ್ಧಿ ಕಾರ್ಯಕ್ರಮ (ಎಫ್ಡಿಪಿ) ಡಿಸೆಂಬರ್ ,19 ರಂದು ನಡೆಯಿತು. ಸಹಾಯಕ ಪ್ರಾಧ್ಯಾಪಕ ಮತ್ತು ಮಾಜಿ ಐಕ್ಯೂಎಸಿ ಸಂಚಾಲಕರಾದ ಶ್ರೀ. ಹಾರ್ದಿಕ್ ಪಿ. ಚೌಹಾಣ್, ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ನ್ಯಾಕ್ ಅಕ್ರೆಡಿಟೇಶನ್ ಪ್ರಕ್ರಿಯೆ ಮತ್ತು ಎಚ್ಇಐಗಳಲ್ಲಿ ಗುಣಮಟ್ಟವನ್ನು ಕಾಪಾಡುವ ಉತ್ತಮ ಮಾರ್ಗಗಳ ಬಗ್ಗೆ […]
ಜಾಡಿ : ಶ್ರೀ ಮಾಸ್ತಿ ಸೂಲದ ಹೈಗುಳಿ ಮತ್ತು ಪರಿವಾರ ದೈವಗಳ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮನವಿ
ಹೆಮ್ಮಾಡಿ (ಡಿ. 22): ಕುಂದಾಪುರ ತಾಲೂಕಿನ ದೇಲ್ಕುಂದ ಗ್ರಾಮದ ಇತಿಹಾಸ ಪ್ರಸಿದ್ದ ಜಾಡಿ ಕೋಟಿಮನೆ ಶ್ರೀಮಾಸ್ತಿ ಸೂಲದ ಹೈಗುಳಿ ಮತ್ತು ಪರಿವಾರ ದೈವಗಳ ದೈವಸ್ಥಾನ ಬಹಳ ವರ್ಷಗಳಿಂದ ಅಜೀರ್ಣ ವ್ಯವಸ್ಥೆಯಲ್ಲಿದ್ದು, ಕಟ್ಟಡ ಸಂಪೂರ್ಣ ಶಿತಿಲಗೊಂಡಿದೆ. ಆ ನಿಟ್ಟಿನಲ್ಲಿ ಊರ ಹಿರಿಯರು ಹಾಗೂ ದೈವವನ್ನು ನಂಬಿರುವ ಕುಟುಂಬಸ್ಥರು ಮತ್ತು ದಾನಿಗಳ ಸಹಕಾರದಿಂದ ಪುನರ್ನಿರ್ಮಾಣ ಮಾಡಿಸಲು ತೀರ್ಮಾನಿಸಿದ್ದು, ದೇವಸ್ಥಾನ ನಿರ್ಮಾಣಕ್ಕೆ ಅಂದಾಜು ಮೊತ್ತ 15,00,000/- ಬೇಕಾಗಿರುತ್ತದೆ. ಸದ್ಭಕ್ತರು ದೇಗುಲದಜೀರ್ಣೋದ್ಧಾರಕ್ಕೆ ಕೈಜೋಡಿಸಬೇಕೆಂದು ದೇಗುಲದ ಆಡಳಿತ […]
ಗಂಗೊಳ್ಳಿ : ಸರಸ್ವತಿ ವಿದ್ಯಾಲಯದಲ್ಲಿ ಎಸ್. ವಿ. ಪಿ. ಎಲ್ ಕ್ರಿಕೆಟ್ ಪಂದ್ಯಾಟ
ಗಂಗೊಳ್ಳಿ (ಡಿ .19) : ಗ್ರಾಮೀಣ ಮಟ್ಟದಲ್ಲಿ ಹಮ್ಮಿಕೊಳ್ಳುವ ಪಂದ್ಯಾಟಗಳು ವಿದ್ಯಾರ್ಥಿಗಳನ್ನು ಉನ್ನತ ಸಾಧನೆಗಳನ್ನು ಮಾಡುವಲ್ಲಿ ಬಹಳ ದೊಡ್ಡ ಪ್ರೇರಣೆಯನ್ನು ನೀಡುತ್ತವೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಗಂಗೊಳ್ಳಿಯ ಉದ್ಯಮಿ ವಿಠಲ ಶೆಣೈ ಅವರು ಅಭಿಪ್ರಾಯ ಪಟ್ಟರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಎಸ್ ವಿ ಪಿ ಎಲ್ ಕ್ರಿಕೆಟ್ ಟೂರ್ನಿಯ ಉದ್ಘಾಟನ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ […]