ಕಾರ್ಕಳ ( ಜ.21): ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಕಾರ್ಕಳ ಮತ್ತು ವಾರ್ತಾಭಾರತಿ ಡಿಜಿಟಲ್ ಚಾನಲ್ ಇವರ ಸಹಯೋಗದೊಂದಿಗೆ ಗಣರಾಜ್ಯೋತ್ಸವದ ಪ್ರಯುಕ್ತ ನಡೆಸುವ ‘ನಮ್ಮ ಸಂವಿಧಾನ – ನಮ್ಮ ಹೆಮ್ಮೆ’ ವಿಶೇಷ ಸಂವಾದ ಕಾರ್ಯಕ್ರಮ ಮತ್ತು ಚಿತ್ರೀಕರಣ ಜನವರಿ 20 ರಂದು ಕ್ರಿಯೇಟಿವ್ ‘ಚಿಂತಕರ ಚಾವಡಿ’ ಸಪ್ತಗಿರಿ ಕ್ಯಾಂಪಸ್ ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂವಾದಕರಾಗಿ ನಿವೃತ್ತ ಪ್ರಾಧ್ಯಾಪಕರು ಹಾಗೂ ಖ್ಯಾತವಾಗ್ಮಿಗಳು ಶ್ರೀ ಸುರೇಂದ್ರ ಶೆಟ್ಟಿ ಕೊಕ್ಕರ್ಣೆ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು […]
Year: 2025
ಆಲ್ ಇಂಡಿಯಾ ಚೆಸ್ ಟೂರ್ನಮೆಂಟ್ – ಶ್ರಾವ್ಯ ದ್ವಿತೀಯ ಸ್ಥಾನ
ಕುಂದಾಪುರ(ಜ.21): ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಪ್ರೌಢ ಶಾಲೆಗಳ 9ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಶ್ರಾವ್ಯ ಎ. ಪಿ. ಇವಳು ಕಶ್ವಿ ಚೆಸ್ ಸ್ಕೂಲ್ ಕುಂದಾಪುರ ಇವರು ಆಯೋಜಿಸಿದ ಯುವ ಆಲ್ ಇಂಡಿಯಾ ಫ್ಲಡ್ ಲೈಟ್ – 2025ರ ಒಪನ್ ರಾಪಿಡ್ ಚೆಸ್ ಟೂರ್ನಮೆಂಟ್ ನ 15ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ […]
ಗಂಗೊಳ್ಳಿ : ಅಜಿತ್ ಕುಮಾರ ಅವರ ಪುಣ್ಯತಿಥಿ -‘ಸೇವಾ ದಿನಾಚರಣೆ’
ಗಂಗೊಳ್ಳಿ(ಜ.21): ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ, ಪ್ರೀತಿ, ಶಿಸ್ತು ಇರಬೇಕು. ರಾಮಾಯಣ, ಮಹಾಭಾರತ ಹಾಗೂ ಪುರಾಣ ಮತ್ತು ಗ್ರಂಥಗಳಲ್ಲಿ ಅಡಕವಾಗಿ ಅನೇಕ ವಿಷಯಗಳು ಇಂದಿನ ಮಕ್ಕಳಿಗೆ ತಿಳಿದಿಲ್ಲ. ಪಠ್ಯ ಪುಸ್ತಕದಲ್ಲಿ ಇರುವ ವಿಷಯಗಳನ್ನು ಮಾತ್ರ ಮಕ್ಕಳಿಗೆ ಹೇಳಲಾಗುತ್ತಿದೆ. ಇದರಿಂದ ನಮ್ಮ ಇತಿಹಾಸ ನಮ್ಮ ಮಕ್ಕಳಿಗೆ ತಿಳಿಯುತ್ತಿಲ್ಲ. ಹೀಗಾಗಿ ಪುರಾಣಗಳನ್ನು, ಧಾರ್ಮಿಕ ಗ್ರಂಥಗಳನ್ನು ಪಠಣ ಮಾಡಬೇಕು. ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು ಎಂದು ಮಹಾಬಲೇಶ್ವರ ಐತಾಳ್ ಉಪ್ಪುಂದ ಹೇಳಿದರು. ಸೇವಾ ಸಂಗಮ ನಿವೇದಿತಾ […]
ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ಇಂಟರ್ನ್ಶಿಪ್ ಡ್ರೈವ್
ಕುಂದಾಪುರ(ಜ,21): ಬಿ.ಬಿ.ಹೆಗ್ಡೆ ಕಾಲೇಜಿನ ತರಬೇತಿ ಮತ್ತು ನೇಮಕಾತಿ ವಿಭಾಗವು ಯಕ್ಷಿ ಟೆಕ್ ಸೊಲ್ಯೂಶನಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಜೊತೆಗಿನ ಸಹಯೋಗದಲ್ಲಿ ಜನವರಿ 17 ರಂದು ಕಾಲೇಜು ಆವರಣದಲ್ಲಿ ಯಶಸ್ವಿಯಾಗಿ ಇಂಟರ್ನ್ಶಿಪ್ ಡ್ರೈವ್ನ್ನು ಆಯೋಜಿಸಿತು. ಕಂಪ್ಯೂಟರ್ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥ ಶ್ರೀ ಮಹೇಶ್ ಕುಮಾರ್ ಸ್ವಾಗತಿಸಿ, ಇಂಟರ್ನ್ಶಿಪ್ ಮೂಲಕ ತರಬೇತಿ ಪಡೆಯುವ ಮಹತ್ವವನ್ನು ವಿವರಿಸುವ ಮೂಲಕ ಪ್ರಾರಂಭಿಸಿದರು. ಯಕ್ಷಿ ಟೆಕ್ ಸೊಲ್ಯೂಶನಸ್ ಸಂಸ್ಥೆಯ ಪ್ರತಿನಿಧಿ ಶ್ರೀ […]
ಈಜು ಸ್ಪರ್ಧೆ : ನಾಗರಾಜ ಖಾರ್ವಿಯವರಿಗೆ ಚಿನ್ನದ ಪದಕ
ಕುಂದಾಪುರ (ಜ.19):ವಿ ಒನ್ ಅಕ್ವಾಸೆಂಟರ್ ಕಾರ್ಕಳವತಿಯಿಂದ ಯುವ, ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಈಜುಕೊಳದಲ್ಲಿ ನಡೆದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಮಟ್ಟದ ಈಜು ಸ್ಪರ್ಧೆಯಲ್ಲಿ ಮುಲ್ಲಕಾಡು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನಾಗರಾಜ ಖಾರ್ವಿ ಎರಡು ಚಿನ್ನದ ಪದಕ ವಿಜೇತರಾಗಿದ್ದಾರೆ. ಮಂಗಳೂರು ಈಜುಗಾರರ ಸಮುದ್ರ ತಂಡದ ಸಕ್ರಿಯ ಸದಸ್ಯರಾಗಿರುವ ಅವರು 50 ಮೀ. ಬ್ಯಾಕ್’ ಸ್ಟೋಕ್ನಲ್ಲಿ ಪ್ರಥಮ ಮತ್ತು 50 ಮೀ. ಬ್ರೆಸ್ಟ್ ಸ್ಪೋಕ್ನಲ್ಲಿ ಪ್ರಥಮ […]
ಕೆ. ಡಿ. ಎಫ್ ಕಪ್ -2025: ಅನ್ವೇಶ್ ಎ. ಮೊಗವೀರ ದ್ವಿತೀಯ
ಕುಂದಾಪುರ(ಜ.21): ಇಲ್ಲಿನ ಈಸ್ಟ್ ವೆಸ್ಟ್ ಸ್ಪೋರ್ಟ್ಸ್ ಕ್ಲಬ್ ಅಂಡ್ ರೆಸಾರ್ಟ್ ನಲ್ಲಿ ಇತ್ತೀಚೆಗೆ ನೆಡೆದ ಡ್ರಾಗನ್ ಫೀಸ್ಟ್ ಮಾರ್ಷಲ್ ಆರ್ಟ್ಸ್ ಆಫ್ ಇಂಡಿಯಾ ಆಯೋಜಿತ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಾದ ಕೆ. ಡಿ. ಫ್ 2025 ಕಪ್ ನಲ್ಲಿ ಅನ್ವೇಶ್ , ಎ ಮೊಗವೀರ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈತ ಕಿರಿ ಮಂಜೇಶ್ವರ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್ ಇಲ್ಲಿ 6ನೇ ತರಗತಿಯ ವಿದ್ಯಾರ್ಥಿ ಹಾಗೂ ನಾವುಂದದ ಗಣೇಶ್ ನಗರ […]
ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್. ಶಾಲೆಯಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ
ಕುಂದಾಪುರ(ಜ.17): ವಿದ್ಯಾರ್ಥಿಗಳಲ್ಲಿ ಸಾಧಿಸುವ ಛಲ ಮತ್ತು ನಿರಂತರ ಅಭ್ಯಾಸವಿದ್ದರೆ ಜೀವನದ ನಿರ್ದಿಷ್ಟ ಗುರಿಮುಟ್ಟಲು ಸಾಧ್ಯ ಎಂಬುದನ್ನು ಸಾಧಕರ ಹಿಂದಿರುವ ಸೋಲಿನ ಕತೆಯನ್ನು ಹೇಳುತ್ತಾ ಹತ್ತನೇ ತರಗತಿಯ ಬಳಿಕ ವಿದ್ಯಾರ್ಥಿಗಳು ಯಾವುದೆಲ್ಲ ವೃತ್ತಿಪರ ವಿಷಯಗಳನ್ನು ಆಯ್ದುಕೊಳ್ಳಬೇಕು ಎಂಬ ವಿಚಾರಗಳ ಬಗ್ಗೆ ಮಣಿಪಾಲ ಡಾಟ್ ನೆಟ್ ಪ್ರೈವೆಟ್ ಲಿಮಿಟೆಡ್ ನ ನಿರ್ದೇಶಕರಾದ ಶ್ರೀ ನಾಗರಾಜ ಕಟೀಲ್ ತಿಳಿಸಿಕೊಟ್ಟರು. ಅವರು ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್.ಎಮ್. ಎಮ್. ಮತ್ತು ವಿ. ಕೆ. […]
ಕಾರ್ಕಳ ಜ್ಞಾನಸುಧಾ: ರೋಟರಿ ಕ್ಲಬ್ ವತಿಯಿಂದ ತ್ರಿವರ್ಣ ಧ್ವಜದ ಮಹತ್ವದ ಬಗ್ಗೆ ಮಾಹಿತಿ
ಕಾರ್ಕಳ ( ಜ.17): ರೋಟರಿ ಕ್ಲಬ್ ಮಣಿಪಾಲ್ ಹಿಲ್ಸ್ ವಲಯ 4 ಮತ್ತು ರೋಟರಿ ಕ್ಲಬ್ ಕಾರ್ಕಳ ವಲಯ 5 ರ ಜಂಟಿ ಆಶ್ರಯದಲ್ಲಿ ತ್ರಿವರ್ಣ ಧ್ವಜದ ಮಹತ್ವದ ಬಗ್ಗೆ ಕಾರ್ಯಗಾರವನ್ನು ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಶಾಲೆ ಮತ್ತು ಪ್ರೌಢ ಶಾಲೆಯಲ್ಲಿ ಇಂರ್ಯಾಕ್ಟ್ ಕ್ಲಬ್ಬಿನ ವತಿಯಿಂದ ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕದ ಬಿ ಎಸ್ ಡಿ ಎಲ್ ಸೆಂಟ್ರಲ್ ಸಮಿತಿಯ ಸದಸ್ಯರಾದ ರೊಟೇರಿಯನ್ ಪಿ ಹೆಚ್ ಎಫ್ ತಿಮ್ಮಪ್ಪ […]
ನಾಡ ಶ್ರೀ ಹಾಡಿಗರಡಿ ದೈವಸ್ಥಾನ: ಜಾತ್ರಾ ಮಹೋತ್ಸವ ಸಂಪನ್ನ
ಕುಂದಾಪುರ(ಜ. 18): ಇಲ್ಲಿನ ನಾಡದ ಶ್ರೀ ಹಾಡಿಗರಡಿ ದೈವಸ್ಥಾನದಲ್ಲಿ ವಾರ್ಷಿಕ ಹಾಲು ಹಬ್ಬ- ಗೆಂಡಸೇವೆ, ಮಹಾ ಅನ್ನಸಂತರ್ಪಣೆ ಜನವರಿ 14 ಮತ್ತು 15ರಂದು ಬಹಳ ವಿಜೃಂಭಣೆಯಿಂದ ಜರುಗಿತು. ಜ.14 ರ ಬೆಳಿಗ್ಗೆ ಮಂಗಳಾರತಿ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 4 ಗಂಟೆಗೆ ಕೊಡಗುಂಜಿ ಕಳುವಿನ ಬಾಗಿಲುವಿನಲ್ಲಿ ಮೂಲಸ್ಥಾನ ಸ್ವಾಮಿ ಪೂಜೆ. ನಾಗ ಸನ್ನಿಧಿಯಲ್ಲಿ ಪೂಜೆ, ನಾಗದರ್ಶನ, ಮಹಾಮಂಗಳಾರತಿ, ದೈವದರ್ಶನ, ಗೆಂಡಸೇವೆ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆಯಿತು. ಸಂಜೆ ಸಾಂಸ್ಕೃತಿಕ […]
ರಾಷ್ಟ್ರಮಟ್ಟದ ಅಬಾಕಸ್ ಮೆಂಟಲ್ ಅರಿಥ್ಮೆಟಿಕ್ ಸ್ಪರ್ಧೆಯಲ್ಲಿ ಅರಾಟೆ ಲಕ್ಶ್ ರಾಜೇಶ್ ಪ್ರಥಮ
ಕುಂದಾಪುರ (ಜ. 17): ಚಿತ್ರದುರ್ಗದಲ್ಲಿ ಇತ್ತೀಚೆಗೆ ಜರುಗಿದ 9ನೇ “ರಾಜ್ಯಮಟ್ಟ’ದ ಐಡಿಯಲ್ ಪ್ಲೇ ಅಬಾಕಸ್ ಮೆಂಟಲ್ ಅರಿಥ್ಮೆಟಿಕ್ ಸ್ಪರ್ಧೆಯಲ್ಲಿ ಅರಾಟೆ ಲಕ್ಶ್ ರಾಜೇಶ್ ಪ್ರಥಮ ಸ್ಥಾನ” ಪಡೆದು ಬೆಂಗಳೂರಿನಲ್ಲಿ ಜನವರಿ 12 ರಂದು ನಡೆದ 20ನೇ “ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿಯೂ ಕೂಡ “ಪ್ರಥಮ ಸ್ಥಾನ” ಪಡೆದಿದ್ದಾನೆ. ಕುಂದಾಪುರದ ಸೆಂಟರ್ ಮುಖ್ಯಸ್ಥರಾದ ಶ್ರೀ ಪ್ರಸನ್ನ ಕೆ. ಬಿ. ಮತ್ತು ಶ್ರೀಮತಿ ಮಹಾಲಕ್ಷ್ಮಿ ಇವರುಗಳಿಂದ ತರಬೇತಿ ಪಡೆಯುತ್ತಿರುವ ಲಕ್ಶ್ ರಾಜೇಶ್ ಪ್ರಸ್ತುತ ಕುಂದಾಪುರದ ಹೆಸರಾಂತ […]