ಬ್ರಹ್ಮಾವರ, (ಫೆ,12): ಇಲ್ಲಿನ ವಡ್ಡರ್ಸೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ.ಎಂ. ಸುಕುಮಾರ ಶೆಟ್ಟಿ ಅವರು ಸಮಾರೋಪ ನುಡಿಗಳನ್ನಾಡಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವ ಗುಣ, ಸಮಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಇಂತಹ ಕ್ಯಾಂಪುಗಳು ದೊಡ್ಡ ಮಟ್ಟದಲ್ಲಿ ಸಹಕಾರಿಯಾಗುತ್ತದೆ. ಶಿಬಿರದ ಯಶಸ್ಸಿಗೆ ಸಹಕರಿಸಿದ ಊರಿನ […]
Day: February 21, 2025
ಬಿ. ಬಿ. ಹೆಗ್ಡೆ ಕಾಲೇಜು: ಜೀವನ ಮೌಲ್ಯ–ಉಪನ್ಯಾಸ
ಕುಂದಾಪುರ (ಫೆ.20): ಜೀವನ ಮೌಲ್ಯಗಳು ಕಲಿಯುವುದಲ್ಲ, ಪಾಲಿಸುವಂತದದ್ದು. ಹೀಗಾಗಿ ತಂದೆ, ತಾಯಿ, ಗುರುಗಳು ಜೀವನದ ಅತ್ಯಮೂಲ್ಯ ಮೌಲ್ಯ. ಅವರ ಆದರ್ಶ ಬದುಕು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಬೇಕು. ಅದರೊಂದಿಗೆ ವ್ಯಕ್ತಿತ್ವಪೂರ್ಣ ಜೀವನವನ್ನು ಪ್ರಾಮಾಣಿಕವಾಗಿ ರೂಢಿಸಿಕೊಂಡಾಗ ವ್ಯಕ್ತಿಯ ಬದುಕಿಗೆ ಬೆಲೆ ಬರುತ್ತದೆ ಎಂದು ಆಳ್ವಾಸ್ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ| ವಿನಾಯಕ್ ಭಟ್ ಹೇಳಿದರು. ಇವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ […]
ಬಿ.ಬಿ. ಹೆಗ್ಡೆ ಕಾಲೇಜು: ದೇಸಿ ಗೋ ಉತ್ಪನ್ನಗಳ ಕುರಿತು ಉಪನ್ಯಾಸ
ಕುಂದಾಪುರ(ಫೆ.20): ಭಾರತೀಯ ಪರಂಪರೆಯಲ್ಲಿ ಗೋವಿಗೆ ಮಹತ್ತರವಾದ ಸ್ಥಾನವಿದೆ. ಭಾರತೀಯ ದೇಸಿಯ ಗೋ ತಳಿಗಳಲ್ಲಿ ಪಂಚಗವ್ಯ ಔಷಧೀಯ ಗುಣಗಳಿದೆ. ವಿದ್ಯಾರ್ಥಿಗಳು ದಿನನಿತ್ಯದ ಬಳಕೆಯಲ್ಲಿ ದೇಸಿ ಗೋ ಉತ್ಪನ್ನಗಳನ್ನು ಹೆಚ್ಚು ಬಳಸಬೇಕಾಗಿರುವುದು ವರ್ತಮಾನದ ತುರ್ತು ಎಂದು ಕಪಿಲೆ ಗೋ ಸಮೃದ್ಧಿ ಟ್ರಸ್ಟ್ ಇದರ ಪ್ರವರ್ತಕರಾದ ಕುಮಾರ್ ಎಸ್. ಕಾಂಚನ್ ಹೇಳಿದರು. ಅವರು ಕಾಲೇಜಿನ ಕನ್ನಡ ವಿಭಾಗ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ಜಂಟಿ ಆಶ್ರಯದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ “ದೇಸಿ ಗೋ […]
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಪಾರು ಮೂರುಕೈ: ಕಲಿಕಾ ಹಬ್ಬ
ಕುಂದಾಪುರ(ಫೆ.21): ಅಂಪಾರು ಮೂರುಕೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಫ್ ಎಲ್ ಎನ್ ಕಲಿಕಾ ಹಬ್ಬ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀಮತಿ ವಹಿಸಿದ್ದರು. ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಕಿಣಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ನವೀನ್ ಶೆಟ್ಟಿ ಹೊಸಿಮನೆ , ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಸದಾನಂದ ಕಿಣಿ, ಶ್ರೀತಿಮ್ಮಪ್ಪ ಶೆಟ್ಟಿ, ಅಂಪಾರು […]