Views: 51
ಕುಂದಾಪುರ (ಜು.23): ಶಿಕ್ಷಣದ ಗುಣಮಟ್ಟ ವ್ಯಕ್ತಿತ್ವದ ನಿರ್ಮಾಣಕ್ಕೆ ಸಹಾಯಕವಾಗಬೇಕು. ಅಂತಹ ಶಿಕ್ಷಣ ಆಂತರ್ಯದ ಶಕ್ತಿಯನ್ನು ಉದ್ದೀಪನಗೊಳಿಸಿ ಜ್ಞಾನ ಸಂಪಾದಿಸುವAತಾಗಬೇಕಾದರೆ ಪಠ್ಯದೊಂದಿಗೆ ಪಠ್ಯಪೂರಕ ಚಟುವಟಿಕೆಗಳು ಮುಖ್ಯ. ಅವುಗಳಿಂದ ಶಿಕ್ಷಣ ಪರಿಪೂರ್ಣವಾಗಲು ಸಾಧ್ಯ ಈ ರೀತಿಯ ಚಟುವಟಿಕೆಗಳು ವರ್ತಮಾನದ ತುರ್ತು ಎಂದು ಉಡುಪಿಯ ಎಮ್ಜಿಎಮ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಕೆ. ಸುರೇಂದ್ರನಾಥ್ ಶೆಟ್ಟಿ ಹೇಳಿದರು. ಅವರು ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ […]










