ಕಾರ್ಕಳ (ಆ .13): ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಕಳ ಇವರು ಸುಂದರ ಪುರಾಣಿಕ ಸ್ಮಾರಕ ಸಂಯುಕ್ತ ಸರಕಾರಿ ಪ್ರೌಢಶಾಲೆ ಪೆರ್ವಾಜೆಯಲ್ಲಿ ಆಯೋಜಿಸಿದ್ದ 14ರ ವಯೋಮಿತಿಯೊಳಗಿನ ಬಾಲಕಿಯರ ವಲಯ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರ ತಂಡ ತಾಲೂಕು ಮಟ್ಟಕ್ಕೆ ಆಯ್ಕೆಯಾದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.
Day: August 13, 2025
ಕ್ರಿಯೇಟಿವ್ ಕಾಲೇಜಿಗೆ ಆಗಸ್ಟ್ 15ರಂದು ಪದ್ಮಶ್ರೀ ಪುರಸ್ಕೃತ, ಬಾಹ್ಯಾಕಾಶ ವಿಜ್ಞಾನಿ, ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್ ಕಿರಣ್ ಕುಮಾರ್ ಆಗಮನ
ಕಾರ್ಕಳದ(ಆ .13): ಇಲ್ಲಿನ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿಗೆ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಭಾರತೀಯ ಬಾಹ್ಯಾಕಾಶ ವಿಜ್ಞಾನಿ ಮತ್ತು ಇಸ್ರೋ ಮಾಜಿ ಅಧ್ಯಕ್ಷರಾದ ಎ.ಎಸ್ ಕಿರಣ್ ಕುಮಾರ್ ರವರು ಆಗಮಿಸಿ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ. 15 ಆಗಸ್ಟ್ 2025ರ ಶುಕ್ರವಾರದಂದು ಪೂರ್ವಾಹ್ನ 10. 00 ಗಂಟೆಗೆ ಸರಿಯಾಗಿ ಕಾಲೇಜಿನ ಸಪ್ತಗಿರಿ ಕ್ಯಾಂಪಸ್ ನಲ್ಲಿ ಧ್ವಜಾರೋಹಣ ಕಾರ್ಯಕ್ರಮ ಜರುಗಲಿರುವುದು. ಬಳಿಕ 11.00 ಗಂಟೆಗೆ ಎ.ಎಸ್ […]
“ಆಗಸ್ಟ್ 13ರಂದು ಕ್ರಿಯೇಟಿವ್ ಪುಸ್ತಕಧಾರೆ – 2025”
ಕಾರ್ಕಳ(ಆ ,13): ಇಲ್ಲಿನ ಕ್ರಿಯೇಟಿವ್ ಕಾಲೇಜಿನಲ್ಲಿ ಆಗಸ್ಟ್ 13ರಂದು “ಕ್ರಿಯೇಟಿವ್ ಪುಸ್ತಕ ಧಾರೆ – 2025” ಮುಂಗಾರಿನ ಹನಿಗಳ ಜೊತೆಗೆ ಪುಟಗಳ ಪಯಣ ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಪುಸ್ತಕಮನೆ ಪ್ರಕಾಶನದ ವತಿಯಿಂದ 22 ಕೃತಿಗಳ ಅನಾವರಣ ಸಮಾರಂಭ ಜರುಗಲಿದೆ. ಮುಖ್ಯ ಅತಿಥಿಗಳಾಗಿ ಚಿತ್ರ ನಿರ್ದೇಶಕರು ಹಾಗೂ ಖ್ಯಾತ ಸಾಹಿತಿಗಳಾದ ಡಾ. ನಾಗತಿಹಳ್ಳಿ ಚಂದ್ರಶೇಖರ್, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಕೆ. ಚಿನ್ನಪ್ಪ ಗೌಡ ಇವರು ಆಗಮಿಸಲಿದ್ದಾರೆ. ಜೊತೆಗೆ ಶ್ರೀ […]
ಕುಸ್ತಿ ಪಂದ್ಯಾಟ : ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ತಕ್ಷಾ ನಾಗೇಶ್ ಮೊಗವೀರ
ಕಿರಿಮಂಜೇಶ್ವರ(ಆ,11): ಶಾಲಾ ಶಿಕ್ಷಣ ಇಲಾಖೆ ಹಾಗೂ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅತಿಥ್ಯದಲ್ಲಿ ಹೆಮ್ಮಾಡಿಯಲ್ಲಿ ನಡೆದ ಬೈಂದೂರು ವಲಯ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್ 17 ಕುಸ್ತಿಪಟುಗಳು ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 14ರ ವಯೋಮಾನದ ಹುಡುಗರ ವಿಭಾಗದಲ್ಲಿ ಜನತಾ ಇಂಗ್ಲಿಷ್ ಮೇಡಂ ಸ್ಕೂಲಿನ ವಿದ್ಯಾರ್ಥಿಗಳಾದ ನೀನಾದ್ (8ನೇ ತರಗತಿ ) ರಿಷಿಕ್ (8ನೇ ತರಗತಿ) ಆನ್ಸ್ಟನ್( 8ನೇ ತರಗತಿ) ಆದಿತ್ಯ( […]
ಸ.ಪ.ಪೂ ಕಾಲೇಜು ಕುಂದಾಪುರ : ಅಂತರ್ ಕಾಲೇಜು ಸಮೂಹ ನೃತ್ಯದಲ್ಲಿ ಪ್ರಥಮ ಸ್ಥಾನ
ಕುಂದಾಪುರ (ಆ,13): ಕೆಥೋಲಿಕ್ ಸಭಾ ಉಡುಪಿ (ರಿ) ಕುಂದಾಪುರ ಘಟಕದ ಸಂಘಟನೆಯ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜು ಕುಂದಾಪುರದಲ್ಲಿ ನಡೆದ ಅಂತರ್ ಕಾಲೇಜು ಸಮೂಹ ನೃತ್ಯದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಪ್ರಥಮ ಸ್ಥಾನ, ಸಮೂಹ ಗೀತೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿಜೇತ ತಂಡದೊಂದಿಗೆ ವ್ಯವಸ್ಥಾಪಕ ಉಪನ್ಯಾಸಕರಾದ ಶ್ರೀಮತಿ ಗೀತಾ ಕುಂದರ್ ಮತ್ತು ಶ್ರೀಮತಿ ಜ್ಯೋತ್ಸ್ನಾ ಪೈ ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು, […]
ಸ. ಪ. ಪೂ.ಕಾಲೇಜು ಹೊಸಂಗಡಿ : ಬೀಳ್ಕೊಡುಗೆ ಸಮಾರಂಭ
ಹೊಸಂಗಡಿ( ಆ ,13): ಸರ್ಕಾರಿ ನೌಕರಿಯಲ್ಲಿದ್ದು, ಹೊಸಂಗಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸರಿಸುಮಾರು 12 ವರ್ಷಗಳ ಕಾಲ ತಮ್ಮ ಸೇವೆಯನ್ನು ಸಲ್ಲಿಸಿ, ಬೇರೆ ಕಾಲೇಜಿಗೆ ವರ್ಗಾವಣೆಗೊಂಡ ಜೀವಶಾಸ್ತ್ರ ಉಪನ್ಯಾಸಕ ಡಾ. ಅರುಣ್ ಕುಮಾರ್ ಶೆಟ್ಟಿ ಮತ್ತುಗಣಿತಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಅರ್ಚನಾ ಇವರ ಬೀಳ್ಕೊಡುಗೆ ಸಮಾರಂಭ ಇತ್ತೀಚೆಗೆ ಜರುಗಿತು. ಸ. ಪ. ಪೂ. ಕಾ. ಹೊಸಂಗಡಿಯ ಪ್ರಾಂಶುಪಾಲರಾದ ರಂಜಿತ್ ಕುಮಾರ್ ಶೆಟ್ಟಿ, ಇವರ ಘನ ಅಧ್ಯಕ್ಷತೆಯಲ್ಲಿ, ಶ್ರೀಯುತ ಗೋಪಾಲ್ ಭಟ್ […]










