ಕುಂದಾಪುರ(ಆ,16): ನಾವಿಂದು ಆಚರಿಸುವ 79ನೇ ಸ್ವಾತಂತ್ರ್ಯೋತ್ಸವ ಆಚರಣೆಯ ಹಿಂದೆ ಬಹಳಷ್ಟು ಹೋರಾಟಗಾರರ ತ್ಯಾಗ ಬಲಿದಾನವಿದೆ. ನಾವು ಅವರನ್ನೆಲ್ಲ ಸ್ಮರಿಸಬೇಕು. ಹಾಗೆಯೇ ಇಂದಿನ ವಿದ್ಯಾರ್ಥಿಗಳು ಉತ್ತಮವಾದ ಶಿಕ್ಷಣವನ್ನು ಪಡೆದು ಮುಂದೆ ದೇಶದ ಅಭಿವೃದ್ಧಿಗೆ ಬಹಳಷ್ಟು ಕೊಡುಗೆ ನೀಡಬೇಕು ಎಂದು ಚಿತ್ತೂರಿನ ಪ್ರಕಾಶ್ ಚಂದ್ರ ಶೆಟ್ಟಿ ಮಾತನಾಡಿದರು. ಅವರು ಕುಂದಾಪುರ ಎಜುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಂ. ಎಂ. ಮತ್ತು ವಿ.ಕೆ.ಆರ್. ಶಾಲೆಗಳು ಆಚರಿಸಿದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣಗೈದು ಮಾತನಾಡಿದರು. […]
Month: August 2025
ಎಸ್ .ವಿ. ಕಾಲೇಜು ಗಂಗೊಳ್ಳಿ : ನಶಾ ಮುಕ್ತ ಭಾರತ ಅಭಿಯಾನ
ಗಂಗೊಳ್ಳಿ( ಆ,19): ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿ ಪರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ನಶಾ ಮುಕ್ತ ಭಾರತ ಅಭಿಯಾನದ ಪ್ರತಿಜ್ಞಾವಿಧಿ ಕಾರ್ಯಕ್ರಮ ಕಾಲೇಜಿನ ರೋಟರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಗಂಗೊಳ್ಳಿ ಆರಕ್ಷಕ ಠಾಣೆಯ ಎ.ಎಸ್.ಐ ಆನಂದ ಬಿ ಅವರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಗಂಗೊಳ್ಳಿ ಠಾಣೆಯ ಹೆಡ್ ಕಾನ್ಸ್ಟೇಬಲ್ ರಾಜು ನಾಯ್ಕ್, ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ ಸಿ ವಿದ್ಯಾರ್ಥಿ ಪ್ರತಿನಿಧಿಗಳು ಮತ್ತು ಬೋಧಕರು ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ […]
ಕಾರ್ಕಳ ಜ್ಞಾನಸುಧಾ : 79 ನೇ ಸ್ವಾತಂತ್ರ್ಯ ದಿನಾಚರಣೆ
ಗಣಿತನಗರ(ಆ ,15): ಲಕ್ಷಾಂತರ ದೇಶಪ್ರೇಮಿಗಳ ತ್ಯಾಗ, ಬಲಿದಾನಗಳಿಗೆ ನಾವು ಧನ್ಯವಾದ ಹೇಳುವ ಹಾಗೂ ಚಿರಸ್ಮರಣೆಗೈಯ್ಯುವ ಶುಭದಿನ. ಸ್ವಾತಂತ್ರ್ಯ ಎನ್ನುವುದು ಉಚಿತವಾಗಿ ದೊರೆತುದಲ್ಲ. ಅದೊಂದು ಜವಾಬ್ದಾರಿಯ ಸಂಕೇತ ಎಂದು ಪದ್ಮಶ್ರೀ ಡಾ.ಎಂ.ಎo .ಜೋಷಿ ಸೇವಾಪ್ರಶಸ್ತಿ ಪುರಸ್ಕೃತ ನೇತ್ರತಜ್ಞ ಡಾ.ಶ್ರೀನಿವಾಸ್ ದೇಶಪಾಂಡೆ ಹೇಳಿದರು. ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಜರುಗಿದ 79ನೇ ಸ್ವಾತಂತ್ರö್ಯದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪಿ.ಆರ್.ಒ ಜ್ಯೋತಿಪದ್ಮನಾಭ್ ಭಂಡಿ. ಪಿ.ಯು. ಉಪಪ್ರಾಂಶುಪಾಲರುಗಳಾದ ಶ್ರೀ ಸಾಹಿತ್ಯ, ಶ್ರೀಮತಿ […]
ಕ್ರಿಯೇಟಿವ್ ಕಾಲೇಜು: 79ನೇ ಸಂಭ್ರಮದ ಸ್ವಾತಂತ್ರ್ಯೋತ್ಸವ
ಕಾರ್ಕಳ(ಆ,15): ಇಲ್ಲಿನ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ 79ನೇ ಸಂಭ್ರಮದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಭಾರತೀಯ ಬಾಹ್ಯಾಕಾಶ ವಿಜ್ಞಾನಿ ಮತ್ತು ಇಸ್ರೋ ಮಾಜಿ ಅಧ್ಯಕ್ಷರಾದ ಎ.ಎಸ್ ಕಿರಣ್ ಕುಮಾರ್ ರವರು ಧ್ವಜಾರೋಹಣವನ್ನು ನೆರವೇರಿಸಿ ಸ್ವಾತಂತ್ರ್ಯ ಎಂಬುದು ಇಂದು ವಿಜ್ಞಾನದ ಮಾರ್ಗದಲ್ಲಿ ಸ್ವಾಯತ್ತತೆ, ಪ್ರಗತಿ ಮತ್ತು ಜನಕೇಂದ್ರಿತ ಸೇವೆಯ ಸಂಕೇತವಾಗಿದೆ. ನಾವು ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯ ಮೂಲಕ ಹೊಸ ಸಾಮರಸ್ಯವನ್ನು ರೂಪಿಸುತ್ತಿದ್ದೇವೆ. ಅಂತರಿಕ್ಷ ಕ್ಷೇತ್ರ, […]
ಮೊಗವೀರ ಯುವ ಸಂಘಟನೆ, ಹೆಮ್ಮಾಡಿ ಘಟಕ: ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸೈನಿಕರಿಗೆ ಗೌರವಾರ್ಪಣೆ
ಹೆಮ್ಮಾಡಿ(ಆ,15): ಮೊಗವೀರ ಯುವ ಸಂಘಟನೆಯ [ರಿ.] ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ ಹಾಗೂ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.), ಉಡುಪಿ, ಅಂಬಲಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ 79ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಹಮ್ಮಿಕೊಂಡ “ಸೈನಿಕರಿಗೊಂದು ಗೌರವಾರ್ಪಣೆ” ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ನಿವ್ರತ್ತ ಯೋಧ ಶ್ರೀ ಮೋಹನದಾಸ ಶೆಟ್ಟಿ ದಂಪತಿಗಳನ್ನು ಅವರ ಸ್ವಗ್ರಹದಲ್ಲಿ ಅಗಸ್ಟ್ 15 ರಂದು ಸನ್ಮಾನಿಸಿ ಗೌರವಿಸಲಾಯಿತು. ಮೊಗವೀರ ಯುವ ಸಂಘಟನೆ (ರಿ.),ಉಡುಪಿ ಜಿಲ್ಲೆ, ಹೆಮ್ಮಾಡಿ […]
ಕರ್ನಾಟಕ ಸೇವಾ ರತ್ನ ಬೆಳ್ಳಿ ಪದಕ ರಾಜ್ಯ ಪ್ರಶಸ್ತಿಗೆ ಜಿ.ಎಸ್. ಕಿರಣ್ ಕುಮಾರ್ ಆಯ್ಕೆ
ಕುಂದಾಪುರ (ಆ .14): ಕರ್ನಾಟಕ ಯುವ ರಕ್ಷಣಾ ವೇದಿಕೆಯ ವತಿಯಿಂದ ಕೊಡಮಾಡುವ 2025 ನೇ ಸಾಲಿನ ಸಮಾಜ ಸೇವೆ ಹಾಗೂ ಕಾರ್ಪೋರೇಟ್ ಉದ್ಯಮ ಕ್ಷೇತ್ರದ ಅತ್ಯುನ್ನತ ರಾಜ್ಯ ಪುರಸ್ಕಾರವಾದ ❝ಕರ್ನಾಟಕ ಸೇವಾ ರತ್ನ ಬೆಳ್ಳಿ ಪದಕ ಪ್ರಶಸ್ತಿ❞ ಗೆ ಕುಂದಾಪುರದ ಪ್ರತಿಷ್ಠಿತ ಸೇವಾ ಸಿಂಚನ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು ಹಾಗೂ ನಿರ್ದೇಶಕರು, ಜಿ.ಬಿ.ಪಿ.ಎಸ್.ಕೆ ಸಮೂಹದ ಸಂಸ್ಥಾಪಕ ಆಡಳಿತ ನಿರ್ದೇಶಕರಾದ ಜಿ.ಎಸ್. ಕಿರಣ್ ಕುಮಾರ್ ಕರ್ನಾಟಕದ ಏಕೈಕ ವ್ಯಕ್ತಿಯಾಗಿ ಆಯ್ಕೆಯಾಗಿದ್ದಾರೆ. ಇವರು […]
ಕಾರ್ಕಳ ಜ್ಞಾನಸುಧಾ :ಖೋ ಖೋ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ
ಕಾರ್ಕಳ (ಆ .13): ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಕಳ ಇವರು ಸುಂದರ ಪುರಾಣಿಕ ಸ್ಮಾರಕ ಸಂಯುಕ್ತ ಸರಕಾರಿ ಪ್ರೌಢಶಾಲೆ ಪೆರ್ವಾಜೆಯಲ್ಲಿ ಆಯೋಜಿಸಿದ್ದ 14ರ ವಯೋಮಿತಿಯೊಳಗಿನ ಬಾಲಕಿಯರ ವಲಯ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರ ತಂಡ ತಾಲೂಕು ಮಟ್ಟಕ್ಕೆ ಆಯ್ಕೆಯಾದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.
ಕ್ರಿಯೇಟಿವ್ ಕಾಲೇಜಿಗೆ ಆಗಸ್ಟ್ 15ರಂದು ಪದ್ಮಶ್ರೀ ಪುರಸ್ಕೃತ, ಬಾಹ್ಯಾಕಾಶ ವಿಜ್ಞಾನಿ, ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್ ಕಿರಣ್ ಕುಮಾರ್ ಆಗಮನ
ಕಾರ್ಕಳದ(ಆ .13): ಇಲ್ಲಿನ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿಗೆ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಭಾರತೀಯ ಬಾಹ್ಯಾಕಾಶ ವಿಜ್ಞಾನಿ ಮತ್ತು ಇಸ್ರೋ ಮಾಜಿ ಅಧ್ಯಕ್ಷರಾದ ಎ.ಎಸ್ ಕಿರಣ್ ಕುಮಾರ್ ರವರು ಆಗಮಿಸಿ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ. 15 ಆಗಸ್ಟ್ 2025ರ ಶುಕ್ರವಾರದಂದು ಪೂರ್ವಾಹ್ನ 10. 00 ಗಂಟೆಗೆ ಸರಿಯಾಗಿ ಕಾಲೇಜಿನ ಸಪ್ತಗಿರಿ ಕ್ಯಾಂಪಸ್ ನಲ್ಲಿ ಧ್ವಜಾರೋಹಣ ಕಾರ್ಯಕ್ರಮ ಜರುಗಲಿರುವುದು. ಬಳಿಕ 11.00 ಗಂಟೆಗೆ ಎ.ಎಸ್ […]
“ಆಗಸ್ಟ್ 13ರಂದು ಕ್ರಿಯೇಟಿವ್ ಪುಸ್ತಕಧಾರೆ – 2025”
ಕಾರ್ಕಳ(ಆ ,13): ಇಲ್ಲಿನ ಕ್ರಿಯೇಟಿವ್ ಕಾಲೇಜಿನಲ್ಲಿ ಆಗಸ್ಟ್ 13ರಂದು “ಕ್ರಿಯೇಟಿವ್ ಪುಸ್ತಕ ಧಾರೆ – 2025” ಮುಂಗಾರಿನ ಹನಿಗಳ ಜೊತೆಗೆ ಪುಟಗಳ ಪಯಣ ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಪುಸ್ತಕಮನೆ ಪ್ರಕಾಶನದ ವತಿಯಿಂದ 22 ಕೃತಿಗಳ ಅನಾವರಣ ಸಮಾರಂಭ ಜರುಗಲಿದೆ. ಮುಖ್ಯ ಅತಿಥಿಗಳಾಗಿ ಚಿತ್ರ ನಿರ್ದೇಶಕರು ಹಾಗೂ ಖ್ಯಾತ ಸಾಹಿತಿಗಳಾದ ಡಾ. ನಾಗತಿಹಳ್ಳಿ ಚಂದ್ರಶೇಖರ್, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಕೆ. ಚಿನ್ನಪ್ಪ ಗೌಡ ಇವರು ಆಗಮಿಸಲಿದ್ದಾರೆ. ಜೊತೆಗೆ ಶ್ರೀ […]
ಕುಸ್ತಿ ಪಂದ್ಯಾಟ : ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ತಕ್ಷಾ ನಾಗೇಶ್ ಮೊಗವೀರ
ಕಿರಿಮಂಜೇಶ್ವರ(ಆ,11): ಶಾಲಾ ಶಿಕ್ಷಣ ಇಲಾಖೆ ಹಾಗೂ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅತಿಥ್ಯದಲ್ಲಿ ಹೆಮ್ಮಾಡಿಯಲ್ಲಿ ನಡೆದ ಬೈಂದೂರು ವಲಯ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್ 17 ಕುಸ್ತಿಪಟುಗಳು ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 14ರ ವಯೋಮಾನದ ಹುಡುಗರ ವಿಭಾಗದಲ್ಲಿ ಜನತಾ ಇಂಗ್ಲಿಷ್ ಮೇಡಂ ಸ್ಕೂಲಿನ ವಿದ್ಯಾರ್ಥಿಗಳಾದ ನೀನಾದ್ (8ನೇ ತರಗತಿ ) ರಿಷಿಕ್ (8ನೇ ತರಗತಿ) ಆನ್ಸ್ಟನ್( 8ನೇ ತರಗತಿ) ಆದಿತ್ಯ( […]










