ಕುಂದಾಪುರ(ಆ,26): ಅಂತರಾಷ್ಟ್ರೀಯಯ ಶಿಕ್ಷಕರ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘ, ಬೆಂಗಳೂರು ಇವರು ಶೈಕ್ಷಣಿಕ ಮತ್ತು ಸಾಹಿತ್ಯಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಅವರಿಗೆ ರಾಜ್ಯಮಟ್ಟದ ಶಿಕ್ಷಕರ ರತ್ನ ಪ್ರಶಸ್ತಿಯನ್ನು ಸೆಪ್ಟೆಂಬರ್ 26ರಂದು ಬೆಂಗಳೂರಿನ ಸರಕಾರಿ ಕಲಾ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಿದರು. ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ […]
Day: October 27, 2025
ಡಾIಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ದೀಪಾವಳಿ ಸಂಭ್ರಮ
ಕುಂದಾಪುರ (ಅ.21) : ಸಾಂಪ್ರದಾಯಿಕವಾಗಿ ನಡೆಯುವ ದೀಪಾವಳಿ ಹಬ್ಬ ಕೃಷಿ ಸಂಬAಧಿಯಾಗಿದ್ದು, ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ದೀಪಾವಳಿಯ ಸಂದರ್ಭದಲ್ಲಿ ನಡೆಯುವ ಬಲೀಂದ್ರ ಪೂಜೆ, ಲಕ್ಷ್ಮಿ ಪೂಜೆ, ತುಳಸಿ ಪೂಜೆ, ಗೋಪೂಜೆ ಈ ಎಲ್ಲಾ ಆಚರಣೆಗಳು ವಿದ್ಯಾರ್ಥಿಗಳಿಗೆ ತಿಳಿದಿರಬೇಕೆಂದು ಹೆಮ್ಮಾಡಿಯ ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಜಗದೀಶ್ ಶೆಟ್ಟಿ ಹೇಳಿದರು. ಅವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಆಯೋಜಿಸಿದ ದೀಪಾವಳಿ ಸಂಭ್ರಮ […]
ಯಕ್ಷಗಾನ ಎಂಬುದು ಮನೋಲ್ಲಾಸವನ್ನು ಹೆಚ್ಚಿಸುವ ಕಲೆ -ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು
ಕೋಟ ( ಆ,20): “ಯಕ್ಷಗಾನ ಎಂಬುದು ಮನೋಲ್ಲಾಸವನ್ನು ಹೆಚ್ಚಿಸುವ ಕಲೆ. ಜೀವನದಲ್ಲಿ ಮಾನಸಿಕವಾಗಿ ಕುಗ್ಗಿದ ಮನಸ್ಸುಗಳಿಗೆ ಯಕ್ಷಗಾನವು ಔಷಧೋಪಚಾರದಂತೆ. ಪರಂಪರೆಯ ಯಕ್ಷಗಾನದ ಶಾಸ್ತ್ರೀಯತೆಯನ್ನು ಉಳಿಸಿ ಬೆಳೆಸುವಲ್ಲಿ ಮಕ್ಕಳ ಯಕ್ಷಗಾನದ ಪ್ರದರ್ಶನಗಳು ಹೆಚ್ಚು ಫಲಪ್ರದ. ಮಕ್ಕಳ ಮನಸ್ಸು ಕಲ್ಮಶವಿರದ ಶುದ್ಧ ಮನಸ್ಸು. ಹಾಗಾಗಿ ಮಕ್ಕಳ ಪ್ರದರ್ಶನಗಳಲ್ಲಿ ಯಾವುದೇ ಅಪಸವ್ಯಗಳು ಕಾಣಿಸಿಕೊಳ್ಳುವುದಿಲ್ಲ. ಇತ್ತೀಚೆಗೆ ಯಕ್ಷಗಾನವು ವಾಣಿಜ್ಯೀಕರಣವಾದಾಗ ಅದರ ಮೂಲ ಸ್ವರೂಪಕ್ಕೆ ಧಕ್ಕೆ ಬಂದಿದೆ. ಕಲಾವಿದರ ವೈಯಕ್ತಿಕ ಮಾತುಕತೆಗಳೇ ರಂಗದ ಸಂಭಾಷಣೆಗಳಾಗಿ ಮೂಡಿಬರುತ್ತಿವೆ. ಇಂಥವುಗಳಿಗೆ […]










