ಕುಂದಾಪುರ(ಫೆ.20): ಭಾರತೀಯ ಪರಂಪರೆಯಲ್ಲಿ ಗೋವಿಗೆ ಮಹತ್ತರವಾದ ಸ್ಥಾನವಿದೆ. ಭಾರತೀಯ ದೇಸಿಯ ಗೋ ತಳಿಗಳಲ್ಲಿ ಪಂಚಗವ್ಯ ಔಷಧೀಯ ಗುಣಗಳಿದೆ. ವಿದ್ಯಾರ್ಥಿಗಳು ದಿನನಿತ್ಯದ ಬಳಕೆಯಲ್ಲಿ ದೇಸಿ ಗೋ ಉತ್ಪನ್ನಗಳನ್ನು ಹೆಚ್ಚು ಬಳಸಬೇಕಾಗಿರುವುದು ವರ್ತಮಾನದ ತುರ್ತು ಎಂದು ಕಪಿಲೆ ಗೋ ಸಮೃದ್ಧಿ ಟ್ರಸ್ಟ್ ಇದರ ಪ್ರವರ್ತಕರಾದ ಕುಮಾರ್ ಎಸ್. ಕಾಂಚನ್ ಹೇಳಿದರು. ಅವರು ಕಾಲೇಜಿನ ಕನ್ನಡ ವಿಭಾಗ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ಜಂಟಿ ಆಶ್ರಯದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ “ದೇಸಿ ಗೋ […]
Tag: bbhc
ವಡ್ಡರ್ಸೆ ಎನ್.ಎಸ್.ಎಸ್. ಶಿಬಿರ: “ಪರಿಸರ ನಮಗೊಂದಿಷ್ಟುಉಳಿಸಿ” – ಬೀದಿನಾಟಕ ಪ್ರದರ್ಶನ
ಬ್ರಹ್ಮಾವರ(ಫೆ, 10): ಇಲ್ಲಿನ ವಡ್ಡರ್ಸೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಕುಂದಾಪುರದ ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರದಲ್ಲಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ “ಪರಿಸರ ನಮಗೊಂದಿಷ್ಟು ಉಳಿಸಿ” ಎಂಬ ಬೀದಿ ನಾಟಕವನ್ನು ಶಿಬಿರಾರ್ಥಿಗಳು ಪ್ರದರ್ಶಿಸಿದರು. ಎನ್.ಎಸ್.ಎಸ್. ಸ್ವಯಂಸೇವಕಿ ಪವಿತ್ರಾ ಪೈ ನಿರ್ದೇಶಿಸಿ, ಪ್ರಾಧ್ಯಾಪಕ ಪ್ರವೀಣ್ ಮೊಗವೀರ್ ಗಂಗೊಳ್ಳಿ ಸಂಯೋಜಿಸಿದರು.ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ […]
ಬನ್ನಾಡಿ ನೈರಿಬೆಟ್ಟು ದಿ| ಕಿಶೋರ್ ಹೆಗ್ಡೆ ಸಂಸ್ಮರಣೆ- “ಕಿಶೋರ ನೆನಪು”
ಬ್ರಹ್ಮಾವರ,(ಫೆ. 9): ವಡ್ಡರ್ಸೆಯ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಡೆದ ಯಕ್ಷಗಾನ ಪ್ರದರ್ಶನದ ಪೂರ್ವದಲ್ಲಿ ಬನ್ನಾಡಿ ನೈರಿಬೆಟ್ಟು ದಿ| ಕಿಶೋರ್ ಹೆಗ್ಡೆ ಸಂಸ್ಮರಣೆ ಕಾರ್ಯಕ್ರಮ ‘ಕಿಶೋರ ನೆನಪು’ ನಡೆಯಿತು. ದಿ| ಕಿಶೋರ್ ಹೆಗ್ಡೆ ಅವರು ಶ್ರೀ ಸಿದ್ದೇಶ್ವರ ಯಕ್ಷರಂಗ, ಬನ್ನಾಡಿ ಇದರ ಪ್ರಧಾನ ಕಲಾವಿದರಾಗಿದ್ದರು. ಯಕ್ಷಗಾನದ […]
ಬಿ. ಬಿ. ಹೆಗ್ಡೆ ಕಾಲೇಜು: ಸಾಫ್ಟ್ ಸ್ಕಿಲ್ ತರಬೇತಿ ಕಾರ್ಯಕ್ರಮ
ಕುಂದಾಪುರ, (ಫೆ.3): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸಾಫ್ಟ್ ಸ್ಕಿಲ್ ಕೌಶಲ್ಯ (Soft Skills) ತರಬೇತಿ ಕಾರ್ಯಕ್ರಮವನ್ನು ನಾಂದಿ ಫೌಂಡೇಶನ್ ಮತ್ತು GTT ಫೌಂಡೇಶನ್ ಸಹಯೋಗದಲ್ಲಿ ಉದ್ಘಾಟಿಸಲಾಯಿತು. 8 ದಿನಗಳ ಈ ತರಬೇತಿ ಕಾರ್ಯಕ್ರಮವು ವಿದ್ಯಾರ್ಥಿಗಳ ಉದ್ಯೋಗಾರ್ಹತೆ ಕೌಶಲ್ಯಗಳನ್ನು ಉತ್ತೇಜಿಸುವ ಹಾಗೂ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಗೆ ತಯಾರಿಸಲು ಉದ್ದೇಶಿಸಿದೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ […]
ವಡ್ಡರ್ಸೆಯಲ್ಲಿ ಡಾ| ಬಿ. ಬಿ. ಹೆಗ್ಡೆ ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ
ಕುಂದಾಪುರ, (ಫೆ 05): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ 2024-25ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರವು ದಿನಾಂಕ ಫೆಬ್ರವರಿ 06 ರಿಂದ 12 ರ ತನಕಬ್ರಹ್ಮಾವರ ತಾಲೂಕಿನ ವಡ್ಡರ್ಸೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ. ಶಿಬಿರದಲ್ಲಿ ದೇವಸ್ಥಾನದ ಆವರಣ ಸ್ವಚ್ಛತೆ, ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಆವರಣಗಳ ಸ್ವಚ್ಛತೆ, ವಡ್ಡರ್ಸೆ ಗ್ರಾಮ ಸ್ವಚ್ಛತಾ ಅಭಿಯಾನ, ವ್ಯಕ್ತಿತ್ವ […]
ಬಿ. ಬಿ. ಹೆಗ್ಡೆ ಕಾಲೇಜು: 76 ನೇ ಗಣರಾಜ್ಯೋತ್ಸವ
ಕುಂದಾಪುರ (ಜ, 26): ದೇಶದ ಅಭಿವೃದ್ಧಿ ಜನರ ಏಕತೆ ಮತ್ತು ದೇಶಾಭಿಮಾನದಿಂದ ಸಾಧ್ಯ. ವಿದ್ಯಾರ್ಥಿಗಳಲ್ಲಿ ಆ ಭಾವನೆ ಮೂಡುವ ಮುಖೇನ ಸದೃಢ ರಾಷ್ಟ್ರ ನಿರ್ಮಾಣವಾಗಬೇಕು ಎಂದು ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಬಿ. ಎಮ್. ಸುಕುಮಾರ ಶೆಟ್ಟಿಯವರು ಹೇಳಿದರು. ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 76ನೇ ಗಣರಾಜ್ಯೋತ್ಸವದ ಫಥ ಸಂಚಲನದ ಗೌರವವನ್ನು ಸ್ವೀಕರಿಸಿ, ಧ್ವಜಾರೋಹಣ ಮಾಡಿ ಮಾತನಾಡಿದರು. ಈ ಸಂದರ್ಭ […]
ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ಇಂಟರ್ನ್ಶಿಪ್ ಡ್ರೈವ್
ಕುಂದಾಪುರ(ಜ,21): ಬಿ.ಬಿ.ಹೆಗ್ಡೆ ಕಾಲೇಜಿನ ತರಬೇತಿ ಮತ್ತು ನೇಮಕಾತಿ ವಿಭಾಗವು ಯಕ್ಷಿ ಟೆಕ್ ಸೊಲ್ಯೂಶನಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಜೊತೆಗಿನ ಸಹಯೋಗದಲ್ಲಿ ಜನವರಿ 17 ರಂದು ಕಾಲೇಜು ಆವರಣದಲ್ಲಿ ಯಶಸ್ವಿಯಾಗಿ ಇಂಟರ್ನ್ಶಿಪ್ ಡ್ರೈವ್ನ್ನು ಆಯೋಜಿಸಿತು. ಕಂಪ್ಯೂಟರ್ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥ ಶ್ರೀ ಮಹೇಶ್ ಕುಮಾರ್ ಸ್ವಾಗತಿಸಿ, ಇಂಟರ್ನ್ಶಿಪ್ ಮೂಲಕ ತರಬೇತಿ ಪಡೆಯುವ ಮಹತ್ವವನ್ನು ವಿವರಿಸುವ ಮೂಲಕ ಪ್ರಾರಂಭಿಸಿದರು. ಯಕ್ಷಿ ಟೆಕ್ ಸೊಲ್ಯೂಶನಸ್ ಸಂಸ್ಥೆಯ ಪ್ರತಿನಿಧಿ ಶ್ರೀ […]
ಡಾ| ಚೇತನ್ ಶೆಟ್ಟಿ ಕೋವಾಡಿ ಅವರಿಗೆ ಶಿಕ್ಷಣ ರತ್ನ ಪ್ರಶಸ್ತಿ ಪ್ರದಾನ
ಕುಂದಾಪುರ(ಜ.11): ಸೇವಾ ಚೇತನ ಟ್ರಸ್ಟ್ (ರಿ.), ಮೂಡುಬಗೆ ಅಂಪಾರು ಇದರ ನಾಲ್ಕನೇ ವಾರ್ಷಿಕೋತ್ಸವದ ಪ್ರಯುಕ್ತ ಜನವರಿ 11ರಂದು ಅಂಪಾರು ಮೂಡುಬಗೆ ಶಾನ್ಕಟ್ಟು ಮೈದಾನದಲ್ಲಿ ನಡೆದ ‘ನಮ್ಮೂರ ಸಂಭ್ರಮ’ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಚಿಂತಕ, ವಾಗ್ಮಿ ಪ್ರಾಧ್ಯಾಪಕ ಕುಂದಾಪುರದ ಡಾ| ಬಿ. ಬಿ .ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪ-ಪ್ರಾಂಶುಪಾಲ ಡಾ| ಚೇತನ್ ಶೆಟ್ಟಿ ಕೋವಾಡಿ ಅವರಿಗೆ 2024ರ ನಮ್ಮೂರ ‘ಶಿಕ್ಷಣ ರತ್ನ’ ಪ್ರಶಸ್ತಿಯನ್ನು ಹಿರಿಯ ಉದ್ಯಮಿ ಶ್ರೀ ಆನಗಳ್ಳಿ ಕರುಣಾಕರ ಹೆಗ್ಡೆ […]
ಸಿ.ಎಮ್.ಎ ಫೌಂಡೇಷನ್ ಪರೀಕ್ಷೆಯಲ್ಲಿ ಉತ್ಕೃಷ್ಟ ಸಾಧನೆಗೈದ ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳು
ಕುಂದಾಪುರ (ಜ.10): ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ ಆಫ್ ಇಂಡಿಯಾ ನಡೆಸುವ ಪ್ರಾರಂಭಿಕ ಹಂತದ CMA ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಪ್ರಥಮ ಹಂತದಲ್ಲಿಯೇ ಉತ್ಕೃಷ್ಟ ಸಾಧನೆಗೈದಿದ್ದಾರೆ. ವೈಷ್ಣವಿ ಹಾಗೂ ಕಾರ್ತಿಕ್ ಕೆ. ಬಿಲ್ಲವ ಇವರು ಸಿ.ಎಂ.ಎ. ಇಂಟರ್ಮೀಡಿಯೇಟ್ ಪ್ರೋಗ್ರಾಮ್ಗೆ ಅರ್ಹತೆ ಪಡೆದಿದ್ದಾರೆ. ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಹಾಗೂ ವೀ ರೀಚ್ ಸಂಸ್ಥೆಯ ನುರಿತ ತರಬೇತುದಾರರಿಂದ […]
ಬಿ.ಬಿ. ಹೆಗ್ಡೆಕಾಲೇಜಿನ ಸಚಿನ್ ಆಚಾರ್ ಕುಂಭಾಶಿ ರಾಜ್ಯ ಗಣರಾಜ್ಯೋತ್ಸವ ಪೆರೇಡ್ಗೆ ಆಯ್ಕೆ
ಕುಂದಾಪುರ (ಜ.07): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕ ಕುಂಭಾಶಿಯ ಶ್ರೀಧರ್ ಆಚಾರ್ ಮತ್ತು ಹೇಮಲತಾ ಅವರ ಪುತ್ರನಾದ ಸಚಿನ್ ಆಚಾರ್, ದ್ವಿತೀಯ ಬಿ.ಸಿ.ಎ. (ಬಿ) ಇವರು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲಿದ್ದಾರೆ. ಇವರಿಗೆ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಬಿ. ಎಮ್. ಸುಕುಮಾರ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ […]










