ಕುಂದಾಪುರ, (ಫೆ 05): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ 2024-25ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರವು ದಿನಾಂಕ ಫೆಬ್ರವರಿ 06 ರಿಂದ 12 ರ ತನಕಬ್ರಹ್ಮಾವರ ತಾಲೂಕಿನ ವಡ್ಡರ್ಸೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ.
ಶಿಬಿರದಲ್ಲಿ ದೇವಸ್ಥಾನದ ಆವರಣ ಸ್ವಚ್ಛತೆ, ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಆವರಣಗಳ ಸ್ವಚ್ಛತೆ, ವಡ್ಡರ್ಸೆ ಗ್ರಾಮ ಸ್ವಚ್ಛತಾ ಅಭಿಯಾನ, ವ್ಯಕ್ತಿತ್ವ ವಿಕಸನ-ನಾಯಕತ್ವ ತರಬೇತಿಗಳು, ಆರೋಗ್ಯ ಮಾಹಿತಿ-ತಪಾಸಣಾ ಶಿಬಿರ, ಗ್ರಾಮೀಣ ಕ್ರೀಡೆ-ಕಲೆಗಳ ಪರಿಚಯ, ವಡ್ಡರ್ಸೆ ಗ್ರಾಮ ಸಮೀಕ್ಷೆ, ಶಿಬಿರಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.