ಕುಂದಾಪುರ (ನ.11): ಕುಂದಾಪುರದಲ್ಲಿ ವೈದ್ಯಕೀಯ, ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೈದ ಪ್ರಮುಖರಲ್ಲಿ ಡಾ| ಬಿ. ಬಿ. ಹೆಗ್ಡೆ ಅವರು ಅಗ್ರಪಂಕ್ತಿಯಲ್ಲಿದ್ದಾರೆ. ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡುವುದರ ಜೊತೆಗೆ ನೂರಾರು ಜನರಿಗೆ ಬದುಕನ್ನು ಕಟ್ಟಿಕೊಳ್ಳಲು ಡಾ| ಬಿ. ಬಿ. ಹೆಗ್ಡೆಯವರ ಹೆಸರಿನಲ್ಲಿ ಸ್ಥಾಪಿಸಲ್ಪಟ್ಟ ಈ ಸಂಸ್ಥೆಯಲ್ಲಿ ಡಾ| ಬಿ. ಬಿ. ಹೆಗ್ಡೆಯವರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ ಶೆಟ್ಟಿ ಹೇಳಿದರು. ಇವರು […]
Tag: bbhc
ಬಿ. ಬಿ. ಹೆಗ್ಡೆ ಕಾಲೇಜು : ನವೆಂಬರ್ 15 ರಂದು ‘ಉಗಮ’ – ಪದವಿ ಪೂರ್ವ ವಿದ್ಯಾರ್ಥಿಗಳ ಸ್ಪರ್ಧೆ
ಕುಂದಾಪುರ (ನವೆಂಬರ್ 12): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆ ನವೆಂಬರ್ 15ರಂದು ನಡೆಯಲಿದೆ . ಉಡುಪಿ ಜಿಲ್ಲಾ ವ್ಯಾಪ್ತಿಯ ಪಿ ಯು ಕಾಲೇಜುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿವೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿ. ಬಿ. ಹೆಗ್ಡೆ ಕಾಲೇಜು- ಎನ್.ಸಿ.ಸಿ. ಘಟಕ : ಗೋಗ್ರೀನ್ – 2.0 ಜಾಗೃತಿ ಜಾಥಾ
ಕುಂದಾಪುರ (ನ.06): ಡಾ| ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ ಇಲ್ಲಿನ ಎನ್.ಸಿ.ಸಿ. ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಪರಿಸರ ಮತ್ತು ಮಣ್ಣಿನ ಸಂರಕ್ಷಣೆ ಹಾಗೂ ಗಿಡಗಳನ್ನು ನೆಡುವ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಕ್ರಮವನ್ನು ಕುಂದಾಪುರದ ವಿವಿಧ ಭಾಗಗಳಾದ ಟೋಟಲ್ ಗ್ಯಾಸ್ ಬಂಕ್, ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜು, ಜ್ಯೂನಿಯರ್ ಕಾಲೇಜು, ತಹಶೀಲ್ದಾರ ಕಛೇರಿ, ಪೊಲೀಸ್ ಸ್ಟೇಶನ್, ಸಂಚಾರಿ ಪೊಲೀಸ್ ಸ್ಟೇಶನ್, ಪುರಸಭೆ, ಸೈಂಟ್ ಮೇರಿಸ್ ಪದವಿ ಪೂರ್ವ […]
ಬಿ. ಬಿ. ಹೆಗ್ಡೆ ಕಾಲೇಜು: ನ.14 ಹಾಗೂ15 ರಂದು ಮಂಗಳೂರು ವಿ. ವಿ ಅಂತರ್ ಕಾಲೇಜು ಮಟ್ಟದ ಕುಸ್ತಿ ಪಂದ್ಯಾಟ
ಕುಂದಾಪುರ (ನವೆಂಬರ್ 04): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಜಂಟಿ ಅಶ್ರಯದಲ್ಲಿ ಪುರುಷರ ಮತ್ತು ಮಹಿಳೆಯರ ಅಂತರ್ ಕಾಲೇಜು ಮಟ್ಟದ ಕುಸ್ತಿ ಪಂದ್ಯಾಟ ನವೆಂಬರ್ 14 ಮತ್ತು 15ರಂದು ನಡೆಯಲಿದೆ. ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಉಡುಪಿ, ದಕ್ಷಿಣಕನ್ನಡ ಜಿಲ್ಲೆಗಳ ಸುಮಾರು 70 ಕಾಲೇಜುಗಳ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ ಎಂದು ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| […]
ಬಿ.ಬಿ. ಹೆಗ್ಡೆ ಕಾಲೇಜು : ವಿಸ್ತರಣಾ ಚಟುವಟಿಕೆ
ಕುಂದಾಪುರ (ಅ 31): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ವಿಸ್ತರಣಾ ಚಟುವಟಿಕೆಯ ಹಿನ್ನಲೆಯಲ್ಲಿ ಕಲಾಕ್ಷೇತ್ರ ಕುಂದಾಪುರ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವ ಅಂಗವಾಗಿ ‘ಕನ್ನಡ ಹಬ್ಬ’ ಸಪ್ತಾಹದ ಪೂರ್ವಭಾವಿಯಾಗಿ ಅಕ್ಟೋಬರ್ 31ರಂದು ಕುಂದಾಪುರ ನಗರದಲ್ಲಿ ‘ಕನ್ನಡ ರಥೋತ್ಸವ’ ಪುರ ಮೆರವಣಿಗೆಯಲ್ಲಿ ಕಾಲೇಜಿನ ಕನ್ನಡ ಸಂಘದ ವಿದ್ಯಾರ್ಥಿಗಳು ಹಾಗೂ ಬೋಧಕೇತರರು ಭಾಗವಹಿಸಿದರು. ಕುಂದಾಪುರದ ಜ್ಯೂನಿಯರ್ ಕಾಲೇಜಿನಿಂದ ಪ್ರಾರಂಭವಾದ ಪುರಮೆರವಣಿಗೆ ಕುಂದಾಪುರ ನಗರದ ಒಳಗಡೆ […]
ಬಿ. ಬಿ. ಹೆಗ್ಡೆ ಕಾಲೇಜು :ಮಾನವ ಜೀವನದಲ್ಲಿ ನೈತಿಕತೆ–ಮಾಹಿತಿ ಕಾರ್ಯಾಗಾರ
ಕುಂದಾಪುರ (ಅ.30): ಮನುಷ್ಯನ ಮನಸ್ಸಿನಲ್ಲಿ ಅಹಂಕಾರವು ತುಂಬಿರಬಾರದು. ಅಹಂಕಾರ ತುಂಬಿದ ಮನುಷ್ಯನ ಜೀವನವು ಅವನನ್ನು ಅಧೋಗತಿಯತ್ತ ಕೊಂಡೊಯ್ಯುವುದು. ಹಿರಿಯರು ಹಾಕಿಕೊಟ್ಟಂತಹ ನೀತಿ-ನಿಯಮಗಳನ್ನು ಗೌರವಿಸಿ ಪಾಲಿಸಿಕೊಂಡು ಬಂದಲ್ಲಿ ಮನುಷ್ಯ ಜೀವನ ಸಾಫಲ್ಯತೆಯನ್ನು ಸಾಧಿಸುತ್ತದೆ ಎಂದು ಸರಕಾರಿ ಪ್ರೌಢಶಾಲೆ ಸುಣ್ಣಾರಿಯ ನಿವೃತ್ತ ದೈಹಿಕ ಶಿಕ್ಷಕ ಶ್ರೀ ಕಿರಣ್ ಕುಮಾರ್ ಬಿ. ಹೇಳಿದರು. ಅವರು ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಮಾನವೀಯ ಮೌಲ್ಯಗಳು ಮತ್ತು ವೃತ್ತಿಪರ ನೀತಿ ಸಂಘ ಆಯೋಜಿಸಿದ […]
ಬಿ.ಬಿ. ಹೆಗ್ಡೆ ಕಾಲೇಜು: ದೀಪಾವಳಿ ಸಂಭ್ರಮಾಚರಣೆ
ಕುಂದಾಪುರ (ನ, 01): ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಹಾಗೂ ಕುಂದಗನ್ನಡ ಸಂಘದ ಜಂಟಿ ಆಶ್ರಯದಲ್ಲಿ ದೀಪಾವಳಿ ಸಂಭ್ರಮಾಚರಣೆ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿ ಹಾಗೂ ಶಿಕ್ಷಕ ಸತೀಶ್ ವಡ್ಡರ್ಸೆ ಕುಂದಾಪುರದಲ್ಲಿ ಭೂಮಿಯೊಂದಿಗೆ ಬೆಸೆದುಕೊಂಡ ಈ ದೀಪಾವಳಿ ಕೃಷಿ ಸಂಬoಧಿಯಾಗಿ ಬೆಳೆದು ಬಂದಿದ್ದು. ಹೀಗಾಗಿ ನರಕ ಚತುರ್ದಶಿ, ಬಲಿ ಪೂಜೆ ಮತ್ತು ಗೋಪೂಜೆಗಳು […]
ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ- ಶತಕಂಠ ಗಾಯನ
ಕುಂದಾಪುರ (ನ, 01): ಇಲ್ಲಿನ ಡಾ| ಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಹಾಗೂ ಕನ್ನಡ ಸಂಘದ ಜಂಟಿ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿಶೇಷ ಉಪನ್ಯಾಸ, ಕನ್ನಡ ಗೀತ ಗಾಯನ ಹಾಗೂ ವಿದ್ಯಾರ್ಥಿಗಳಿಂದ ಶತಕಂಠ ಗಾಯನ ನಡೆಯಿತು. ಮುಖ್ಯ ಅತಿಥಿ ಮೂಡುಬಿದರೆ ಆಳ್ವಾಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ| ಕೃಷ್ಣರಾಜ ಕರಬ ಅವರು ಮಾತನಾಡಿ, ಅನೇಕ ಪ್ರಾದೇಶಿಕ ಭಾಷೆಗಳಿಂದ ಕೂಡಿದ ಕನ್ನಡ ಜಗತ್ತಿನ ಶ್ರೀಮಂತ […]
ಬಿ.ಬಿ. ಹೆಗ್ಡೆ ಕಾಲೇಜು : ಆರೋಗ್ಯವಿಮೆ -ಅರಿವು ಕಾರ್ಯಕ್ರಮ
ಕುಂದಾಪುರ (ಅ. 29): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಸ್ಟಾರ್ ಹೆಲ್ತ್ ಸಂಸ್ಥೆಯ ವತಿಯಿಂದ ಆರೋಗ್ಯ ವಿಮೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸ್ಟಾರ್ ಹೆಲ್ತ್ನ ಟ್ರೈನಿಂಗ್ ಮ್ಯಾನೇಜರ್ ಆಗಿರುವ ಶ್ರೀ ಸಂತೋಷ್ರವರು ಆರೋಗ್ಯ ವಿಮೆ ಹಾಗೂ ಲಭ್ಯವಿರುವ ವಿವಿಧ ಪಾಲಿಸಿಗಳ ಕುರಿತು ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಅಧ್ಯಕ್ಷತೆಯನ್ನು […]
ಡಾl ಬಿ.ಬಿ ಹೆಗ್ಡೆ ಕಾಲೇಜು : ನೊವೇಶನ್ ಮ್ಯಾನೇಜ್ಮೆಂಟ್ ಫೆಸ್ಟ್-2024 ಸಂಪನ್ನ
ಕುಂದಾಪುರ (ಅ. 24): ಇಲ್ಲಿನ ಡಾI ಬಿ .ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಇದರ ವ್ಯವಹಾರ ಆಡಳಿತ ವಿಭಾಗದ ಆಶ್ರಯದಲ್ಲಿ ಅಕ್ಟೋಬರ್, 24 ಹಾಗೂ 25 ರಂದು ನಡೆದ ನೊವೇಶನ್ ಮ್ಯಾನೇಜ್ಮೆಂಟ್ ಫೆಸ್ಟ್ -2024 ಸಂಪನ್ನಗೊಂಡಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಇಂಡಿಯನ್ ಓವರ್ಸೀಸ್ ಬ್ಯಾಂಕ್ ಕುಂದಾಪುರ ಶಾಖೆಯ ಪ್ರಬಂಧಕರುಗಳಾದ ಶ್ರೀ ನಿಶಿತ್ ಪಾರ್ಮರ್ ಹಾಗೂ ಶ್ರೀ ರವಿ ಆಗಮಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೋ. […]