ಕುಂದಾಪುರ ( ಆ ,27): ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ರವರು ಮೂಡಬಿದ್ರೆಯ ಆಳ್ವಾಸ್ ಪಿ ಯು ಕ್ಯಾಂಪಸ್ ನಲ್ಲಿ ಅಕ್ಟೋಬರ್ 26 ರಂದು ಆಯೋಜಿಸಿದ್ದ 20 ನೇ ರಾಜ್ಯ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿತ್ಮೇಟಿಕ್ ಸ್ಪರ್ಧೆಯಲ್ಲಿ ಕುಂದಾಪುರದ ವಿ. ಕೆ. ಆರ್. ಆಚಾರ್ಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 8ನೇ ತರಗತಿ ವಿದ್ಯಾರ್ಥಿ ನಿವೇನ್ ಲೂವಿಸ್ A-K ಲೆವೆಲ್ ಓಪನ್ ಕೆಟಗರಿನಲ್ಲಿ 5 ನೇ ಸ್ಥಾನ ಪಡೆದಿದ್ದಾನೆ. ಇವರು ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಅವಿತಾ ಕೊರೆಯಾರವರ ಪುತ್ರ.

ರಾಜ್ಯದ ವಿವಿಧ ಜಿಲ್ಲೆಯಿಂದ ಸುಮಾರು 2000 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇವರಿಗೆ ಕುಂದಾಪುರ ಸೆಂಟರ್ ನ ಶ್ರೀ ಪ್ರಸನ್ನ ,ಶ್ರೀಮತಿ ಮಹಾಲಕ್ಷ್ಮಿ ಹಾಗೂ ದೀಪಾ ಶಿಕ್ಷಕರು ತರಬೇತಿ ನೀಡಿರುತ್ತಾರೆ.












